ಸಿನಿಮಾ ಲೇಖನ

ಧನುರ್ ಮಾಸ ಮುಂದಿದೆ

ಗೊತ್ತು ಗುರಿ ಇಲ್ಲದ ರೌಡಿಸಂಗೆ ಅಂತ್ಯ ಯಾರಿಂದ? ಪೊಲೀಸರಿಂದಲೋ ರೌಡಿಗಳಿಂದಲೋ... ಇಂಥದ್ದೊಂದು ಟ್ಯಾಂಗ್‌ಲೈನಿಂದ ಬಂದಿರುವ ಚಿತ್ರ 'ಧನು'. ಚಿತ್ರದ ನಿರ್ದೇಶಕ ಕೆ. ದೇವು. ಇದು ರೌಡಿಯಿಸಂ ಚಿತ್ರವಾದರೂ ಹದೆಗೆಟ್ಟ ರಾಜಕೀಯ ವ್ಯವಸ್ಥೆಯನ್ನು ಕೂಡ ತೆರೆ ಮೇಲೆ ತಂದಿದ್ದಾರಂತೆ ನಿರ್ದೇಶಕರು. ರಾಜಕೀಯ ವ್ಯವಸ್ಥೆಯನ್ನು ಬಿಂಬಿಸುವ ಹಾಡೊಂದನ್ನು ಕೂಡ ರಚನೆ ಮಾಡಿರುವ ನಿರ್ದೇಶಕರು ಹಾಡಿನಲ್ಲೂ ತಮ್ಮ ಪ್ರತಿಭೆ ಮೆರೆಯಲು ಹೊರಟಿದ್ದಾರೆ.
ಇನ್ನು ಸಂತೋಷ್ ಚಿತ್ರದ ನಾಯಕ. ಇವರು ಈ ಹಿಂದೆ 'ಇಷ್ಟ', 'ಅಭಿರಾಮ್‌' ಹಾಗೂ 'ಬೆಂಗಳೂರು ಮೆಟ್ರೊ' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಖುಷಿ ಚಿತ್ರದ ನಾಯಕಿ. ಈಕೆಗೆ ಇದೇ ಮೊದಲ ಚಿತ್ರ. ಮುನಿ, ಪೆಟ್ರೋಲ್ ಪ್ರಸನ್ನ, ಕಿಲ್ಲರ್ ವೆಂಕಟೇಶ್, ಬುಲೆಟ್ ಪ್ರಕಾಶ್ ಮತ್ತಿತರರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಿತು. ನಿರ್ದೇಕರಿಗೆ ಇದು ಮೊದಲ ಚಿತ್ರವಾದರೂ ಈ ಹಿಂದೆ ಡಾನ್, ಪಟ, ಅಂಕ, ಬಾಡಿಗಾರ್ಡ್, ಮ್ಯಾಡ್ ಲವ್ ಸೇರಿದಂತೆ ಸಾಕಷ್ಟು ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಇನ್ನು ದೂರದರ್ಶನದಲ್ಲಿ ಪ್ರಸಾರವಾದ ಒಂಟಿಮನೆ, ಋಣಮುಕ್ತ, ಇಂದಿರಾ ಮತ್ತಿತರ ಧಾರಾವಾಹಿಗಳಿಗೂ ಸಹಾಯಕ ನಿರ್ದೇಶಕರಾಗಿ ದುಡಿದಿದ್ದಾರೆ.
ಬಹುತೇಕ ಹೊಸಬರೇ ಚಿತ್ರವನ್ನು ಮಾಡಿದ್ದರೂ ಸಾಕಷ್ಟು ತಯಾರಿ ಮಾಡಿಕೊಂಡು ಚಿತ್ರೀಕರಣ ಮಾಡಿರುವುದಾಗಿ ನಿರ್ದೇಶಕರು ಹೇಳಿಕೊಂಡರು. ಚಿತ್ರದ ಹಾಡುಗಳನ್ನು ಭದ್ರಾವತಿ, ಶಿವಮೊಗ್ಗ, ಚಿಕ್ಕಮಗಳೂರು, ಮುಳ್ಳಯ್ಯನಗಿರಿಯಲ್ಲಿ ಚಿತ್ರೀಕರಿಸಲಾಗಿದೆ. ಕೌರವ ವೆಂಕಟೇಶ್, ಸುಪ್ರೀಂ ಸುಬ್ಬು ಸಾಹಸ ನಿರ್ದೇನದಲ್ಲಿ ಮೂರು ಫೈಟ್‌ಗಳಿವೆ. ರಾಜೇಶ್ ಕೃಷ್ಣನ್, ಸಂತೋಷ್, ಸಚಿನ್, ಅನುರಾಧಾ ಭಟ್, ಲಕ್ಷೀ, ಶ್ರೀದೇವಿ ಮುಂತಾದವರು ಚಿತ್ರದ ಹಾಡುಗಳನ್ನು ಹಾಡಿದ್ದಾರೆ. ಮಮತಾ ರಾಹುತ್ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನಿರ್ಮಾಪಕ ಮುನಿರಾಜು ಚೌಕಾಶಿ ಮಾಡದೆ ಚಿತ್ರಕ್ಕೆ ಕೇಳಿದ್ದೆಲ್ಲವನ್ನೂ ನೀಡಿದ್ದಾರೆ ಎಂದು ನಿರ್ದೇಶಕರು ಮೆಚ್ಚುಗೆ ಸೂಚಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯರ ಸಾಮೂಹಿಕೆ ಹತ್ಯೆಗೆ ಸಂಚು: ರೈಫಲ್ ಹಿಡಿದು ಅಮೆರಿಕದ ಹಿಂದೂ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್; ಕೊನೆ ಕ್ಷಣದಲ್ಲಿ ಗನ್ ಜಾಮ್, ಆರೋಪಿ ಬಂಧನ..!

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಕೇರಳಂ: ಮಿನಿ ಕೂಪರ್ ಕಾರು ಅಪಘಾತದಲ್ಲಿ ಮೂವರ ಸಾವು, ತಡರಾತ್ರಿಯಲ್ಲಿ ಹಿಂದೂ ಯುವತಿಯರು ಹೊರಗೆ ಹೋಗಿದ್ಯಾಕೆ? ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ

ಸ್ಟಿಂಗ್‌ ಆಪರೇಷನ್‌ ಬಗ್ಗೆ ಬೇರೆಯವರು ಮಾತನಾಡುವ ಆಗಿಲ್ಲ ಎನ್ನಲು ನೀವೇನು ಸರ್ವಾಧಿಕಾರಿಯೇ ಪ್ರಿಯಾಂಕ್‌ ಖರ್ಗೆ..?