ವೇದಿಕಾ ಸಜ್ಜು
ಹೆಸರು ವೇದಿಕಾ. 'ಫೇರ್ ಆ್ಯಂಡ್ ಲವ್ಲಿ' ಫೇಸ್ನ ಈ ಹುಡುಗಿ ಬಳುಕು ಬಳ್ಳಿಯಾಗಿದ್ದರೂ...
ತೆಲುಗು, ತಮಿಳು ಚಿತ್ರರಂಗದಲ್ಲಿ ಈಗ ಬಹು ಬೇಡಿಕೆಯ ನಟಿಯಾಗಿರುವ ತಮ್ಮನ್ನಾಗಿಂತ ಮೊದಲು ಮತ್ತೊಬ್ಬಳು ಮಿಲ್ಕ್ ಬ್ಯೂಟಿಯ ಹೆಚ್ಚು ಚಾಲ್ತಿಯಲ್ಲಿತ್ತು. ಹೆಸರು ವೇದಿಕಾ. 'ಫೇರ್ ಆ್ಯಂಡ್ ಲವ್ಲಿ' ಫೇಸ್ನ ಈ ಹುಡುಗಿ ಬಳುಕು ಬಳ್ಳಿಯಾಗಿದ್ದರೂ 'ಮಿಲ್ಕ್ ಬ್ಯೂಟಿ' ಎನ್ನುವ ಬಿರುದನ್ನು ತಮ್ಮನ್ನಾಗೆ ಬಿಟ್ಟುಕೊಟ್ಟಿದ್ದು ಬಹುಶಃ ಪ್ರೇಕ್ಷಕರ ತೀರ್ಪಿನ ಕಾರಣದಿಂದ. ಅಂದಹಾಗೆ ಈಗಾಗಲೇ ಈ ನಟಿಯನ್ನು ಕನ್ನಡ ಪ್ರೇಕ್ಷಕರು ಕೂಡ ನೋಡಿದ್ದಾರೆ. 'ಸಂಗಮ' ಚಿತ್ರದಲ್ಲಿ ಗಣೇಶ್ ಜೊತೆ 'ಹೇ ಮಿಸ್ಟರ್ ಬಾಲು...' ಎಂದು ಕುಣಿದು ಕುಪ್ಪಳಿಸಿದ ಈ ಬಳ್ಳಿ ಮತ್ತೆ ಕನ್ನಡಕ್ಕೆ ಬರುತ್ತಿದೆ. ಪೂಜಾ ಕುಮಾರ್ ಎಂಬ ಮೂಲ ಹೆಸರಿನ ವೇದಿಕಾ ಈಗ 'ಬೃಂದಾವನ'ದಲ್ಲಿ ಕಾಣಿಸುತ್ತಿದ್ದಾಳೆ.
ಈಕೆ ಮಹರಾಷ್ಟ್ರದ ಸೊಲ್ಲಾಪುರದ ಮಣ್ಣಿನ ಮಗಳಾದರೂ ಬಣ್ಣ ಹಚ್ಚಿದ್ದು ಮಾತ್ರ ತೆಲುಗು, ತಮಿಳು ಚಿತ್ರಗಳಲ್ಲಿ. 'ಮದ್ರಾಸಿ', 'ಮುನಿ', 'ವಿಜಯದಶಮಿ', 'ಬಾಣಂ', 'ಕಾಲೈ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿರುವ ವೇದಿಕಾ ಮತ್ತೆ ಕನ್ನಡದಲ್ಲಿ ಸಂಗಮವಾಗುತ್ತಿದ್ದಾಳೆ. ನಿರ್ದೇಶಕ ಕೆ. ಮಾದೇಶ್ ಆಕೆಯನ್ನು ಕರೆತರುತ್ತಿದ್ದಾರೆ. ಹೌದು, ಇತ್ತೀಚೆಗೆ ಮುಹೂರ್ತ ಕಂಡ ನಟ ದರ್ಶನ್ ಅಭಿನಯದ 'ಬೃಂದಾವನ' ಚಿತ್ರಕ್ಕೆ ಇಬ್ಬರು ನಾಯಕಿಯರು. ಅದರಲ್ಲಿ ವೇದಿಕಾ ಕೂಡ ಒಬ್ಬಳು. ಸುರೇಶ್ ಗೌಡ ನಿರ್ಮಾಣದ ಈ ಚಿತ್ರ ತೆಲುಗಿನ 'ಬುಂದಾವನಂ' ಚಿತ್ರದ ರಿಮೇಕ್.
-ಕೇಶು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.