ಓಯ್ ಲಕ್ಕಿ ಲಕ್ಕಿ ಓಯ್
ನಿರ್ದೇಶಕ ಲಕ್ಕಿ ಶಂಕರ್‌ರ '90' ಕಿಕ್ ಇನ್ನೂ ಇಳಿದಿಲ್ಲ. ಬದಲಾಗಿ ಮತ್ತೆ ಹಾಸ್ಯದ ಮತ್ತೇರಿಸಲು ಶಂಕರ್ ರೆಡಿಯಾಗಿದ್ದಾರೆ. ಈ ವಾರ ಅವರ ನಿರ್ದೇಶನದ 'ದೇವ್ರಾಣೆ'...
ನಿರ್ದೇಶಕ ಲಕ್ಕಿ ಶಂಕರ್‌ರ '90' ಕಿಕ್ ಇನ್ನೂ ಇಳಿದಿಲ್ಲ. ಬದಲಾಗಿ ಮತ್ತೆ ಹಾಸ್ಯದ ಮತ್ತೇರಿಸಲು ಶಂಕರ್ ರೆಡಿಯಾಗಿದ್ದಾರೆ. ಈ ವಾರ ಅವರ ನಿರ್ದೇಶನದ 'ದೇವ್ರಾಣೆ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ದೇವ್ರಾಣೆ ನಾನ್ ದೇವ್ರಲ್ಲ ಎನ್ನುವ ಈ ಚಿತ್ರದಲ್ಲಿ 90 ಚಿತ್ರದಂತೆಯೇ ಹಾಸ್ಯ ಕಲಾವಿದರ ದಂಡೇ ಇದೆ. ರವಿಶಂಕರ್ ನೀತೂ ಚಿತ್ರದ ನಾಯಕ, ನಾಯಕಿಯರಾಗಿದ್ದರೂ ಚಿತ್ರದಲ್ಲಿ ಹಾಸ್ಯಭರಿತ ಮನರಂಜನೆ ನೀಡುವ ಸಾಮರ್ಥ್ಯ ಇರುವ ಅನೇಕ ಕಲಾವಿದರಿದ್ದಾರೆ ಎಂಬುದು ನಿಜ. '90' ಚಿತ್ರದಲ್ಲಿ ಎಲ್ಲರಿಗೂ ಸಮಾನ ಅವಕಾಶ ಕೊಟ್ಟು ಬಳಸಿಕೊಂಡಿದ್ದ ಲಕ್ಕಿ ಶಂಕರ್ ಈ ಚಿತ್ರದಲ್ಲೂ ಅವರವರ 'ಕೆಪಾಸಿಟಿ'ಗೆ ತಕ್ಕಂತೆ ಚಿತ್ರಕಥೆ ಹೆಣೆದಿದ್ದಾರಂತೆ. ಒಟ್ಟು 20ಕ್ಕೂ ಹೆಚ್ಚು ಹಾಸ್ಯ ಕಲಾವಿದರಿರುವ ಈ ಚಿತ್ರದ ಕಥೆ ಹಾಸ್ಯದಿಂದ ಶುರುವಾಗಿ ಎಲ್ಲರೂ ಒಂದು ಗಂಭೀರ ಘಟ್ಟ ತಲುಪುವ ಕೊನೆಯನ್ನು ಹೊಂದಿದೆ. ತಾರಾಗಣದಲ್ಲಿ ಚಿಟ್ಟೆಸ್ವಾಮಿಯಾಗಿ ಕಾಣಿಸಿಕೊಂಡಿರುವ ರವಿಶಂಕರ್‌ಗೌಡ, ಮದುವೆಗಾಗಿ ಹಂಬಲಿಸುವ ಅವಿವಾಹಿತ ಹುಡುಗಿಯಾಗಿ ನೀತು, ಸ್ವಾಮಿ ವಿವೇಕಾನಂದರ ಗೆಟಪ್‌ನಲ್ಲಿ ಸಾಧು ಕೋಕಿಲಾರ ಜೊತೆಗೆ ಬುಲೆಟ್ ಪ್ರಕಾಶ್, ರಾಜು ತಾಳಿಕೋಟೆ, ಬಿರಾದರ್ ಮುಂತಾದವರಿದ್ದಾರೆ. ಆದರೆ ಚಿತ್ರದಲ್ಲಿ ಅಷ್ಟೊಂದು ಜನ ಕಲಾವಿದರಿದ್ದರೂ ಬಿಡುಗಡೆಯ ಮುನ್ನಾ ಪತ್ರಿಕಾಗೋಷ್ಠಿಯಲ್ಲಿ ಮಾತ್ರ ನಿರ್ದೇಶಕ ಲಕ್ಕಿ ಶಂಕರ್ ಒಬ್ಬರೇ ಮಾತುಕತೆಯನ್ನು ನಿಭಾಯಿಸಬೇಕಾಯ್ತು. ಅದಕ್ಕೆ ಕಾರಣಗಳೇನೇ ಇದ್ದರೂ ಈ ವಿಷಯದಲ್ಲಿ ಮಾತ್ರ ಲಕ್ಕಿ ಶಂಕರ್ ಅವರನ್ನು ಅನ್‌ಲಕ್ಕಿ ಎನ್ನಬಹುದು.
ಜಯಣ್ಣ ಕಂಬೈನ್ಸ್‌ನ ವಿತರಣೆಯಲ್ಲಿ 'ದೇವ್ರಾಣೆ' ಚಿತ್ರ 100 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಆದರೆ ಅದಕ್ಕೂ ಮುನ್ನ ಚಿತ್ರದ ಟಿವಿ ಪ್ರಸಾರದ ಹಕ್ಕುಗಳು ಮಾರಾಟವಾಗಿರುವುದರಿಂದ '90' ಚಿತ್ರದ ನಿರ್ದೇಶಕ ಲಕ್ಕಿ ಶಂಕರ್ ಮತ್ತು ಈ ಚಿತ್ರದ ನಿರ್ಮಾಪಕರು ಸದ್ಯಕ್ಕೆ 'ಫಿಫ್ಟಿ ಪರ್ಸೆಂಟ್ ಸೇಫ್' ಅಂತೆ. ಖಾವಿ ತೊಟ್ಟ ನಕಲಿ ಸ್ವಾಮೀಜಿಗಳಿಂದ ದೂರವಿರಿ ಎನ್ನುವ ಸಂದೇಶ ಹೊಂದಿದ ದೇವ್ರಾಣೆ ಚಿತ್ರತಂಡ ಈಗಾಗಲೇ ಎರಡು ಹಾಡುಗಳು ಹಿಟ್ ಆಗಿರುವುದರಿಂದ ಸಿನಿಮಾ ಕೂಡ ಅದೇ ದಾರಿ ಹಿಡಿಯಲಿದೆ ಎಂಬ ನಂಬಿಕೆಯಲ್ಲಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.