ಪಗಡೆಯಾಟ
ಮಂಚನಾಯಕನಹಳ್ಳಿಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹೆಚ್.ವಿ. ಅಣ್ಣಪ್ಪ ಮೊದಲ ಬಾರಿಗೆ ನಿರ್ಮಾಣ ಮಾಡಿರುವ ಕಿರುತೆರೆ ಮೂಲಕ ಮನೆಮಾತಾಗಿರುವ ವಿಶ್ವಾಸ್ ಭಾರದ್ವಜ್...
ಹೊಸಬರ 'ಪಗಡೆ' ಚಿತ್ರ ಬಿಡುಗಡೆಗಾಗಿ ಎದುರು ನೋಡುತ್ತಿದೆ. ಮಂಚನಾಯಕನಹಳ್ಳಿಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹೆಚ್.ವಿ. ಅಣ್ಣಪ್ಪ ಮೊದಲ ಬಾರಿಗೆ ನಿರ್ಮಾಣ ಮಾಡಿರುವ ಕಿರುತೆರೆ ಮೂಲಕ ಮನೆಮಾತಾಗಿರುವ ವಿಶ್ವಾಸ್ ಭಾರದ್ವಜ್ ನಾಯಕನಾಗಿ ಅಭಿನಯಿಸಿದ್ದಾರೆ. ಗಮ್ಯ ಚಿತ್ರದ ನಾಯಕಿ. ಬಿ.ಎ. ಪುರಷೋತ್ತಮ್ ನಿರ್ದೇಶನವಿರುವ 'ಪಗಡೆ' ಚಿತ್ರದ ಧ್ವನಿಸುರುಳಿ ಬಿಡುಗಡೆ ನಡೆಯಿತು. ಇದೇ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಆಲೋಚನೆ ಇದೆ ಎಂದು ಹೇಳಿಕೊಂಡರು. ಇದೇ ಸಮಯದಲ್ಲಿ ನಡೆದ ಲಕ್ಕಿ ಗೇಮ್ ಶೋನಲ್ಲಿ ಪಗಡೆಯಾಡಿದ ಪತ್ರಕರ್ತರಲ್ಲಿ 5 ಸಾವಿರ ಬಹುಮಾನ ಗೆಲ್ಲುವ ಅವಕಾಶ ಗಣೇಶ್ ರಾಣೇಬೆನ್ನೂರು ಅವರದ್ದಾಗಿತ್ತು.
ನಿರ್ಮಾಪಕ ಅಣ್ಣಪ್ಪ ಮಾತನಾಡಿ 'ಚಿತ್ರವನ್ನು 20 ಬಾರಿ ನೋಡಿದ್ದೇನೆ. ಚಿತ್ರ ಅರ್ಥವಾಗಿಲ್ಲ. ಮತ್ತೆ ಮತ್ತೆ ನೋಡುತ್ತಿದ್ದೇನೆ ಗೊತ್ತಾಗುತ್ತಿಲ್ಲ. ಆದರೆ ಪ್ರೇಕ್ಷಕರಿಗೆ ಹಾಗಾಗುವುದಿಲ್ಲ. ಹಣ ಹಾಕಿರುವುದರಿಂದ ನನಗೆ ಹಾಗೆ ಹಾಗಿದೆ' ಎಂದು ಹೇಳಿಕೊಂಡರು. ಇದೇ ತಿಂಗಳ 22 ಅಥವಾ ತಿಂಗಳ ಕೊನೆಯ ವಾರದಲ್ಲಿ ಚಿತ್ರ ಬಿಡುಗಡೆ ಮಾಡುವ ಆಲೋಚನೆ ಇದೆ. 'ನನ್ನ ಒಬ್ಬ ಕಲಾವಿದನಾಗಿ ಮಾತ್ರವಲ್ಲದೆ, ಮನೆ ಮಗನಂತೆ ನೋಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಟಿಸಿದ್ದಕ್ಕೆ ಹೆಮ್ಮೆ ಇದೆ. ಚಿತ್ರದ ಕಥೆ ಕ್ಲೈಮಾಕ್ಸ್ ಅದ್ಬುತವಾಗಿದೆ. ಜತೆಗೆ ಒಳ್ಳೆಯ ಸಂದೇಶವೂ ಇದೆ ಎಲ್ಲರ ಸಹಕಾರಬೇಕು' ಎಂದರು ನಟ ವಿಶ್ವಾಸ್ ಭಾರಧ್ವಜ್.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.