ಹುಲಿಯ ಹಾಡಿನ ಕಥೆ
ಗಾಂಧಿನಗರದ ಮರಿ ಟೈಗರ್ 'ಗಜೇಂದ್ರ'ನಾಗಿ ಸದ್ದು ಮಾಡಿದೆ. ನಾವು ಹೇಳುತ್ತಿರುವುದು ಟೈಗರ್ ಪ್ರಭಾಕರ್ ಪುತ್ರ ವಿನೋದ್ ಪ್ರಭಾಕರ್ ಮತ್ತು ಅವರ ಅಭಿನಯದ 'ಗಜೇಂದ್ರ' ಚಿತ್ರದ ಬಗ್ಗೆ...
ಗಾಂಧಿನಗರದ ಮರಿ ಟೈಗರ್ 'ಗಜೇಂದ್ರ'ನಾಗಿ ಸದ್ದು ಮಾಡಿದೆ. ನಾವು ಹೇಳುತ್ತಿರುವುದು ಟೈಗರ್ ಪ್ರಭಾಕರ್ ಪುತ್ರ ವಿನೋದ್ ಪ್ರಭಾಕರ್ ಮತ್ತು ಅವರ ಅಭಿನಯದ 'ಗಜೇಂದ್ರ' ಚಿತ್ರದ ಬಗ್ಗೆ. ಛಾಯಾಗ್ರಾಹಕ ಜೆ.ಜಿ.ಕೃಷ್ಣ ತಮ್ಮ ಸ್ನೇಹಿತ ಕುಮಾರ್ ಗೌಡ ಡತೆ ಸೇರಿ ನಿರ್ಮಿಸಿ, ತಾವೇ ನಿರ್ದೇಶನ ಮಾಡಿರುವ ಚಿತ್ರ ಇದು.
ಇತ್ತೀಚೆಗೆ ಚಿತ್ರದ ಹಾಡುಗಳ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಿತು. 'ಸಿನಿಮಾ ನಾವು ಅಂದುಕೊಂಡಂತೆ ಮೂಡಿ ಬಂದಿದೆ. ಸಾಹಸ ಮತ್ತು ಕೌಟುಂಬಿಕತೆ ಚಿತ್ರದ ಪ್ರಧಾನ ಅಂಶಗಳಾದರೂ ಹಾಸ್ಯಕ್ಕೆ ಒತ್ತು ಕೊಡಲಾಗಿದೆ. ನಟ ವಿನೋದ್ ಪ್ರಭಾಕರ್ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಪಕ್ಕಾ ಮನರಂಜನೆ ಸಿನಿಮಾ ಇದು' ಎಂಬುದು ನಿರ್ದೇಶಕ ಕಂ ಛಾಯಾಗ್ರಹಕ ಜೆ.ಜಿ.ಕೃಷ್ಣರ ಮಾತು. ಚಿತ್ರದಲ್ಲಿ ನಾಯಕ ವಿನೋದ್ ಪ್ರಭಾಕರ್ ಹೊಸ ಹೊಸ ಗೆಟಪ್ಗಳಲ್ಲಿ ಕಾಣಿಸಿಕೊಂಡಿದ್ದು, ಇದುವರೆಗೂ ನೋಡಿರದ ವಿನೋದ್ ಪ್ರಭಾಕರ್ರ ಇಮೇಜ್ ಈ ಚಿತ್ರದಲ್ಲಿ ನೋಡಬಹುದು ಎಂಬುದು ಚಿತ್ರತಂಡದ ಅಭಿಪ್ರಾಯ.
'ನನಗೆ ಸಿಕ್ಕಿರುವ ಹೊಸ ರೀತಿಯ ಚಿತ್ರ ಇದು. ನಿರ್ದೇಶಕರು ತುಂಬಾ ಚೆನ್ನಾಗಿ ಕಥೆ ಮಾಡಿಕೊಂಡಿದ್ದಾರೆ. ನಿಜಕ್ಕೂ ಒಳ್ಳೆಯ ಸಿನಿಮಾ ಮಾಡಿದ್ದೇವೆ' ಎಂದರು ವಿನೋದ್ ಪ್ರಭಾಕರ್. ನಿರ್ಮಾಪಕ ಕೆ. ಮಂಜು, ನಟರಾದ ಅಜಯ್ ರಾವ್, ರವಿಶಂಕರ್ ಗೌಡ ಚಿತ್ರದ ಆಡಿಯೋ ಬಿಡುಗಡೆ ಮಾಡಿದರು. ನಿರ್ದೇಶಕ ನಾಗೇಂದ್ರ ಮಾಗಡಿ ಚಿತ್ರತಂಡಕ್ಕೆ ಶುಭ ಕೋರಿದರು. ಐದು ಹಾಡುಗಳಿವೆ. ರಾಜೇಶ್ ರಾಮನಾಥ್ ಸಂಗೀತ ನೀಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.