ಬಾಲಿವುಡ್ ನಟ ಸಂಜಯ್ ದತ್ ಅವರು ಮತ್ತೆ 14 ದಿನಗಳ ಪೆರೋಲ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಜೈಲಿನಲ್ಲಿರುವ ಸಂಜಯ್ ದತ್ ಅವರು 14 ದಿನ ಪೆರೋಲ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
42 ತಿಂಗಳುಗಳ ಸೆರೆವಾಸ ಶಿಕ್ಷೆಗೊಳಗಾಗಿರುವ ಸಂಜಯ್, ಸದ್ಯ ಯರವಾಡಾ ಜೈಲಿನಲ್ಲಿ ದಿನದೂಡುತ್ತಿದ್ದಾರೆ.
ಪತ್ನಿ ಮಾನ್ಯತಾ ದತ್ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಬರೋಬ್ಬರೀ 9 ತಿಂಗಳುಗಳ ಕಾಲ ಪೆರೋಲ್ ಪಡೆದಿದ್ದ ಸಂಜಯ್, ಪೆರೋಲ್ ಅವಧಿ ವಿಸ್ತರಣೆ ಅರ್ಜಿ ತಿರಸ್ಕೃತಗೊಂಡು ಮತ್ತೆ ಜೈಲಿಗೆ ವಾಪಾಸ್ಗಾಗಿದ್ದರು.