ಸ್ಯಾಂಡಲ್ ವುಡ್ ತಾರೆ ಅನಿತಾ ಭಟ್ 
ಸಿನಿಮಾ ಸುದ್ದಿ

ಈಗ ಅನಿತಾ ಆರ್ಭಟ

ಬಿಗ್ ಬಾಸ್ ಮನೆಯ ಸ್ಟಾರ್ ಎಂದೇ ಖ್ಯಾತಿಯಾಗಿರುವ...

ಬಿಗ್ ಬಾಸ್ ಮನೆಯ ಸ್ಟಾರ್ ಎಂದೇ ಖ್ಯಾತಿಯಾಗಿರುವ ಸ್ಯಾಂಡಲ್ ವುಡ್ ನ ಹಾಟ್ ತಾರೆ ಅನಿತಾ ಭಟ್ ಅವರಿಗೆ ವರ್ಷದ ಕೊನೆಯಲ್ಲಿ ಅದೃಷ್ಟ ಹುಡುಕಿಕೊಂಡು ಬಂದಿದೆ. ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗುವ ಮುನ್ನ ಒಂದಿಷ್ಟು ಚಿತ್ರಗಳಲ್ಲಿ ನಟಿಸಿದ್ದರು. 'ಡರ್ಟಿಪಿಕ್ಚರ್', 'ನಗೆಬಾಂಬ್', 'ದಾಸ್ವಾಳ', ಹಾಗೂ 'ಪರಪಂಚ' ಮುಂತಾದ ಚಿತ್ರಗಳು. ಈ ಪೈಕಿ    'ಪರಪಂಚ' ಸಿನಿಮಾ ಬಿಡುಗಡೆಯಾಗಬೇಕಿದೆ.

ಉಳಿದ ಚಿತ್ರಗಳು ತೆರೆಕಂಡಿವೆ. ಕ್ರಿಶ್ ಜೋಷಿ ನಿರ್ದೇಶನದ, ಯೋಗರಾಜ್ ಭಟ್ ಮೂವಿಸ್ ನಿರ್ಮಾಣದ, ದಿಗಂತ್ ನಾಯಕರಾಗಿ ನಟಿಸಿರುವ ಪರಪಂಚ ಚಿತ್ರದಲ್ಲಿ ಅನಿತಾಭಟ್ ಅವರದ್ದು ಬಹುಮುಖ್ಯ ಪಾತ್ರ.

ಇದರ ಹೊರತಾಗಿ ಅನಿತಾ ಹೆಚ್ಚಿನ ಸುದ್ದಿಯಾಗಲಿಲ್ಲ. ಆದರೆ, ಈಗ ಏಕಕಾಲಕ್ಕೆ ಎರಡು ಚಿತ್ರಗಳಲ್ಲಿ ನಾಯಕಿಯಾಗಿ ಅನಿತಾ ಆಯ್ಕೆಯಾಗಿದ್ದಾರೆ. ಇದರಲ್ಲಿ ಮೊದಲ ಚಿತ್ರ ಆರ್ಭಟ 2016 ನನ್ನ ಕೆರಿಯರ್ಗೆ ಒಳ್ಳೆಯ ಸಿನಿಮಾ ಆಗಲಿದೆ ಎನ್ನುವ ನಂಬಿಕೆ. ಯಾಕೆಂದರೆ ನಿರ್ದೇಶಕ ರಾಘವೇಂದ್ರ ಅವರು ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ನನ್ನ ಪಾತ್ರ ಕೂಡ ತುಂಬಾ ಚೆನ್ನಾಗಿದೆ. ಹೀಗಾಗಿ ಒಬ್ಬ ನಟಿಗೆ ಸಿಗಬೇಕಾದ ಪಾತ್ರ ಈ ಚಿತ್ರದಲ್ಲಿದೆ' ಎನ್ನುತ್ತಾರೆ ನಟಿ ಅನಿತಾ ಭಟ್.

ಇನ್ನೂ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಶುರುವಾಗಲಿರುವ ಮತ್ತೊಂದು ಚಿತ್ರಕ್ಕೆ ಅನಿತಾ ಭಟ್ ನಾಯಕ. ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಚಿನ್ನು ಎಂಬುವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಇವರು ಮೂಲತಃ ಆಂದ್ರದವರು. 'ಎರಡು ಭಾಷೆಯಲ್ಲಿ ಶುರುವಾಗಲಿರುವ ಈ ಚಿತ್ರಕ್ಕೆ ಇನ್ನಷ್ಟೇ ಹೆಸರು ಘೋಷಣೆ ಮಾಡಬೇಕಿದೆ. ಆದರೆ ಚಿತ್ರದ ಒಂದು ಸಾಲಿನ ಕಥೆ ಹೇಳಿದ್ದಾರೆ.

ತುಂಬಾ ಚೆನ್ನಾಗಿದೆ ಎನ್ನುವ ಅನಿತಾ ಭಟ್, ಕನ್ನಡದಲ್ಲಿ ಮತ್ತೆರಡು ಚಿತ್ರಗಳಿಗೆ ನಾಯಕಿಯಾಗುತ್ತಿದ್ದಾರೆ. ಆದರೆ, ಈ ಎರಡು ಸಿನಿಮಾಗಳು ಸ್ಟಾರ್ ನಟರ ಚಿತ್ರಗಳಾಗಿರುವ ಕಾರಣ ಚಿತ್ರದ ನಿರ್ದೇಶಕರೇ ಹೇಳುವ ತನಕ ಈ ಎರಡು ಚಿತ್ರಗಳ ಬಗ್ಗೆ ಅನಿತಾ ಭಟ್ ಹೆಚ್ಚಿನ ಮಾಹಿತಿ ಬಿಟ್ಟುಕೊಡುತ್ತಿಲ್ಲ.

ಒಟ್ಟಿನಲ್ಲಿ ವರ್ಷದ ಕೊನೆಯಲ್ಲಿ ನಟಿ ಅನಿತಾ ಭಟ್ ಅವರಿಗೆ ಅದೃಷ್ಟ ಹುಡುಕಿಕೊಂಡು ಬಂದಿದೆ. ಅಲ್ಲದೆ ನಾಳೆ (ಡಿ.9) ಅನಿತಾ ಭಟ್ರ ಜನ್ಮದಿನ. ಹುಟ್ಟುಹಬ್ಬದ ಉಡುಗೊರೆ ಎಂಬಂತೆ ಎರಡು ಚಿತ್ರಗಳಿಗೆ ನಾಯಕಿಯಾಗುವ ಅವಕಾಶ ಬಂದಿರುವುದು ವಿಶೇಷ. 'ಈ ವರ್ಷಧ ಕೊನೆ ತಿಂಗಳಿನಿಂದ ನನ್ನ ವೃತ್ತಿ ಪಯಣದಲ್ಲಿ ಹೊಸ ತಿರುವು ಕಾಣಿಸಿಕೊಳ್ಳಲಿದೆ. ಒಳ್ಳೆಯ ಸಿನಿಮಾಗಳು ಸಿಗುವ ನಿರೀಕ್ಷೆಯಲ್ಲಿದ್ದೇನೆ. ಈಗಾಗಲೇ ಎರಡು ಚಿತ್ರಗಳು ಅಂತಿಮಗೊಂಡಿದ್ದು. ಉಳಿದ ಚಿತ್ರಗಳ ಬಗ್ಗೆ ಸದ್ಯದಲ್ಲೇ ಹೇಳುತ್ತೇನೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಿತ್ವಾ ಚಂಡಮಾರುತಕ್ಕೆ ಶ್ರೀಲಂಕಾ ತತ್ತರ: ನೆರವು ನೀಡುವ ವಿಮಾನಗಳಿಗೆ ಅನುಮತಿ ವಿಳಂಬ, ಪಾಕ್ ಆರೋಪದ ವಿರುದ್ಧ ಭಾರತ ತೀವ್ರ ಕಿಡಿ

ಕುಡುಕರಿಗೊಬ್ಬ, ಬ್ಯಾಚುಲರ್‌ಗಳಿಗೆ ಮತ್ತೊಬ್ಬ ದೇವರು: ಹಿಂದೂಗಳಲ್ಲಿ ಎಷ್ಟು ದೇವರಿದ್ದಾರೆ: 3 ಕೋಟಿ ಇದ್ದಾರಾ? ವಿವಾದವೆಬ್ಬಿಸಿದ ರೇವಂತ್ ರೆಡ್ಡಿ ಹೇಳಿಕೆ

Imran Khan ಸಾವಿನ ಊಹಾಪೋಹ ನಡುವೆ ಜೈಲಿನಲ್ಲಿ ಮಾಜಿ ಪ್ರಧಾನಿ ಭೇಟಿಯಾಗಿ ಬಂದ ಸಹೋದರಿ ಉಜ್ಮಾ ಖಾನಮ್ ಹೇಳಿದ್ದೇನು?

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಇದ್ದ ವೇದಿಕೆಗೆ ನುಗ್ಗಿದ ಆಗಂತುಕ!

ದರ್ಶನ್ ಲಾಕಪ್ ಡೆತ್: ಇನ್ಸ್ ಪೆಕ್ಟರ್ ಶಿವಕುಮಾರ್ ಸೇರಿ 4 ಮಂದಿ ಅಮಾನತು!

SCROLL FOR NEXT