ಸಿನಿಮಾ ಸುದ್ದಿ

‘ಊಜ’ ಚಿತ್ರೀಕರಣ ಮುಕ್ತಾಯ

Lingaraj Badiger

ಆರಂಭದಿಂದಲೇ ಬಹು ನಿರೀಕ್ಷೆ ಹುಟ್ಟಿಸಿರುವ ‘ಊಜ’ ಕನ್ನಡ ಸಿನೆಮಾ 20 ದಿವಸಗಳ ಕಾಲ ಮಲೈಶಿಯ ದೇಶದಲ್ಲಿ ಹಾಗೂ 25 ದಿವಸಗಳ ಕಾಲ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಿ ಈಗ ತಾಂತ್ರಿಕ ಕೌಶಲ್ಯವನ್ನು ಅಳವಡಿಸಿಕೊಳ್ಳುತ್ತಿದೆ.

ಕನ್ನಡದ ಜನಪ್ರಿಯ ನಟಿ ರಾಗಿಣಿ ದ್ವಿವೇದಿ ಅಭಿನಯದ ‘ಊಜ’ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಸಿದ್ಧವಾಗುತಿದ್ದು, ಎಸ್ ವಿಕ್ರಮ್ ರಾಜು ಅವರ ನಿರ್ಮಾಣದಲ್ಲಿ ರಾಜ್ ಕುಮಾರ್ ರೆಡ್ಡಿ ಅವರು ನಿರ್ದೇಶನ ಮಾಡಿದ್ದಾರೆ.

ಇದೊಂದು ಹರಾರ್ ಸಿನೆಮಾ ಎಂದು ನಿರ್ಮಾಪಕ ವಿಕ್ರಮ್ ರಾಜು ಅವರು ತಿಳಿಸಿದ್ದಾರೆ. ರವಿ ಅವರು ಛಾಯಾಗ್ರಹಣ ಮಾಡಿದ್ದಾರೆ, ಹರಿ ಅವರ ಸಂಗೀತ, ಎಸ್ ಬಿ ಶೇಖರ್ ಅವರ ಸಂಕಲನ ಇರುವ ಚಿತ್ರ ಅದ್ಧೂರಿಯಾಗಿ ನಿರ್ಮಾಣ ಆಗಲಿದ್ದು ತಾತ್ರಿಕ ಕೌಶಲ್ಯ ಸಹ ಪ್ರೇಕ್ಷಕನಿಗೆ ಮನರಂಜನೆ ನೀಡಲಿದೆ. ತೆಲುಗು ಭಾಷೆಯಲ್ಲಿ ಆರ್ಯ 2, ಮಿರ್ಚಿ ಹಾಗೂ ಇನ್ನಿತರ ಸಿನಿಮಾಗಳಿಗೆ ನೃತ್ಯ ನಿರ್ದೇಶನ ಮಾಡಿದ ರಘು ಅವರು ಈ ಸಿನಿಮಾಕ್ಕೆ ಹೆಜ್ಜೆ ಹಾಕಿಸಿದ್ದಾರೆ. ಕೀರ್ತಿ ಗೌಡ ಈ ಚಿತ್ರದ ಕಾರ್ಯಕಾರಿ ನಿಮಾಪಕರು.
 
ರಾಗಿಣಿ ದ್ವಿವೇದಿ ಜೊತೆ ಮಾಧುರಿ ಇಟಗಿ, ಗಾಯತ್ರಿ ವೆಂಕಟಗಿರಿ, ಭರತ್ (10 ಕ್ಲಾಸ್ ತೆಲುಗು ಸಿನಿಮಾ), ಶ್ರದ್ದ ದಾಸ್, ಕಾದಂಬರಿ, ಅವಿನಾಷ್, ಶಯ್ಯಾಜಿ ಶಿಂದೆ, ರಘು ಕುಂಚೆ, ರಾಜ ರವೀಂದ್ರ ಹಾಗೂ ಇನ್ನಿತರರು ಪಾತ್ರವರ್ಗದಲ್ಲಿ ಇದ್ದಾರೆ.

SCROLL FOR NEXT