ಕಮಲ್ ಹಾಸನ್ ಸಾಂಧರ್ಭಿಕ ಚಿತ್ರ 
ಸಿನಿಮಾ ಸುದ್ದಿ

ಸಕಲಕಲಾ ವಲ್ಲಭನಿಗೆ 60

ಭಾರತೀಯ ಚಿತ್ರರಂಗದ ಹೆಮ್ಮೆ, ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವ...


ಭಾರತೀಯ ಚಿತ್ರರಂಗದ ಹೆಮ್ಮೆ, ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವ, ಪ್ರಯೋಗಗಳಿಂದಲೇ ಅದ್ಭುತ ಸಿನಿಮಾಗಳನ್ನು ನಿರ್ಮಿಸುತ್ತ ಬಂದಿರುವ ಡಾ.ಕಮಲ್ ಹಾಸನ್ (ನವೆಂಬರ್7)  ಇಂದು 60ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ.

ಸಿನಿಮಾ ನೋಡುವುದು ಒಂದು ಕಲೆ ಎನ್ನುವವರಿದ್ದಾರೆ. ಅನೇಕರು ಎಲ್ಲಾ ಸಿನಿಮಾವನ್ನು ನೋಡುವುದಿಲ್ಲ. ಕತೆ, ಚಿತ್ರಕತೆಗಳಲ್ಲಿ ಪುನರಾವರ್ತನೆ ಆಗಬಹುದಾದ ಸಾಧ್ಯತೆಯಿರುವ ನಟರ, ನಿರ್ದೇಶಕರ ಸಿನಿಮಾಗಳಿಂದ ಇಂಥವರು ದೂರವೇ ಇರುತ್ತಾರೆ. ಯಾಕೆಂದರೆ ಕೆಲವು ನಟರ ಸಿನಿಮಾಗಳು ಪುನರಾವರ್ತನೆ ಎಂದೆನಿಸುವುದು ಬಹಳ ಕಡಿಮೆ ಅಂಥವರಲ್ಲಿ ಭಾರತದ ಮಟ್ಟಿಗಂತೂ ಕಮಲ್ ಹಾಸನ್ ಪ್ರಮುಖರು.

ಕೆಲವು ವಿಮರ್ಶಕರು ಕಮಲ್ ಅವರನ್ನು ಕಾಪಿ ಕ್ಯಾಟ್ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಕ್ರಮವನ್ನು ಇನ್‌ಸ್ಪಿರೇಶನ್ ಅಂತಲೂ ವಿವರಿಸಬಹುದು. ಕಮಲ್ ಎಂದೂ ನಕಲು ಮಾಡಿಲ್ಲ. ಬದಲಿಗೆ ಅವರ ಸೃಜನಶೀಲತೆ ಮೂಲಕ ಹೊಸ ಆಯಾಮವನ್ನೇ ಅವರು ಕರುಣಿಸಿದ್ದಾರೆ. ಪುಷ್ಪಕ ವಿಮಾನ ಸಿನಿಮಾ ರಿಲೀಸ್ ಆದಾಗ ನಾನಿನ್ನೂ ಚಿಕ್ಕವನು. ನಂತರ ನನ್ನ ಅಪ್ಪ ಕಮಲ್ ಹಾಸನ್ ಅಭಿಮಾನಿ ಎಂದು ಗೊತ್ತಾಗಿದ್ದು ನಾನು ಹತ್ತನೇ ತರಗತಿ ಓದುವ ಸಮಯದಲ್ಲಿ.
ಆಗಿನ್ನೂ ಟಿವಿ ಮಾಧ್ಯಮ ಹಳ್ಳಿಗಳಿಗೆ ಬಂದಿದ್ದ ಸಮಯ. ಅಕ್ಕಪಕ್ಕದ ಮನೆಯವರೆಲ್ಲಾ ಸೇರಿ ಸಿನಿಮಾವನ್ನು ನೋಡುತ್ತಿದ್ದೆವು. ನಮ್ಮ ಊರಿಂದ ದೂರದ ನಗರವೆಂದರೆ ಶಿರಸಿ. ವಿಚಿತ್ರವೆಂದರೆ ನನ್ನ ಅಪ್ಪನಿಗೆ ಇದ್ದ ಕಮಲ್ ಹಾಸನ್ ಸಿನಿಮಾ ನೋಡುವ ಖಯಾಲಿ ಹೇಗಿತ್ತೆಂದರೆ, ನನಗೆ ಬುದ್ಧಿ ಬರುವುದಕ್ಕಿಂತ ಮೊದಲೇ ಸಿನಿಮಾ ಮಂದಿರದಲ್ಲಿ ಕಮಲ್ ಹಾಸನ್ ಸಿನಿಮಾಗಳನ್ನು ನೋಡುತ್ತಿದ್ದ ಅಪ್ಪ, ಕೊನೆಗೆ ಟಿವಿ ತಂದ ಮೇಲಂತೂ ವಿಸಿಪಿಯನ್ನು  ಮನೆಗೆ ತರ ತೊಡಗಿದರು.

ನಾಯಗನ್, ಸಿಗಪ್ಪು ರೊಜಾಕಲ್, ಸದ್ಮಾ (ಮೂನ್ರ ಪಿರೈ), ದೇವರ್ ಮಗನ್, ಕುರುತ್ತಿ ಪುನಾಲ್ ಮುಂತಾದ ಸಿನಿಮಾಗಳನ್ನು ನಾನು ನೋಡಿದ್ದು ಅಪ್ಪನಿಗೆ ಕಮಲ್ ಮೇಲಿದ್ದ ಅಭಿಮಾನದಿಂದ. 'ಕಮಲ್ ಕೇವಲ ನಟನಲ್ಲ, ಆತನಲ್ಲಿ ಅಭಿನಯದ ಸಾಂಕೇತಿಕ ಶಕ್ತಿಯಿದೆ'. ಎಂದು ಅಪ್ಪ ಹೇಳುತ್ತಿದ್ದರು.

200ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿರುವ ಕಮಲ್ ಶಕ್ತಿ ಬಗ್ಗೆ ನನ್ನಂತಹ ಎರಡನೆ ತಲೆಮಾರಿನ ಅಭಿಮಾನಿಗಳಿಗೆ ಅಚ್ಚರಿ. ಇತ್ತೀಚೆಗೆ ರಿಲೀಸ್ ಆದ ವಿಶ್ವರೂಪಂ ಚಿತ್ರ ಹೇಗೆ ಭಾರತೀಯ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲು ಎಂಬುದನ್ನು ಗಮನಿಸಿ.

ಉಗ್ರವಾದದ ಮೇಲೆ ಯಾರೂ ಚಿತ್ರ ಮಾಡಿಲ್ಲ ಎಂದಲ್ಲ, ಆದರೆ ಕಮಲ್ ಅವರ ನಿರೂಪಣೆ ಅತ್ಯಂತ ಮನೋಜ್ಞವಾದದ್ದು. ಈ ಕಲಾವಿದ ಇಂಥ ಚಮತ್ಕಾರವನ್ನು ದಶಾವತಾರಂ ಸಿನಿಮಾದಲ್ಲೂ ಮಾಡಿದ್ದಾರೆ. ಅಂದರೆ ಪಾತ್ರಗಳಲ್ಲಿ ಆಟವಾಗುವ ಬಗೆ. ಒಂದೇ ವ್ಯಕ್ತಿ ಹಲವು ವಿವರಗಳನ್ನೊಳಗೊಂಡ ಪಾತ್ರದಲ್ಲಿ ತೊಡಗಿಕೊಳ್ಳುವುದು. ವಿಶ್ವರೂಪದಲ್ಲಿ ಒಂದೇ ಪಾತ್ರ ಹಿಂದೂ ವ್ಯಕ್ತಿ ಆಗಿಯೂ, ಮುಸ್ಲಿಂ ವ್ಯಕ್ತಿ ಆಗಿಯೂ ಕಾಣಿಸಿ ಪ್ರೇಕ್ಷಕರನ್ನು ಕಾಡುತ್ತಾರೆ.

ಕಮಲ್ ಚಿತ್ರಗಳನ್ನು ಯಾಕೆ ನೋಡಬೇಕು ಎಂಬ ಪ್ರಶ್ನೆಗೆ ಸೂಕ್ತ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಅನೇಕ ಅವರ ಅಭಿಮಾನಿಗಳು ಗಮನಿಸಿರಬಹುದು, ಅಥವಾ ಇದು ಗೊತ್ತಿರುವ ಸಂಗತಿಯೇ.
ಕಮಲ್ ಹಿಂದಿನಿಂದಲೂ ತಮ್ಮ ಪಾತ್ರದ ಮೂಲಕ 'ಗುಡ್‌' ಅಂಡ್ 'ಬ್ಯಾಡ್‌' ಪರಿಕಲ್ಪನೆಯನ್ನು ವಿವಿಧ ರೂಪದಲ್ಲಿ ಅಭಿವ್ಯಕ್ತಿಸುತ್ತ ಬಂದಿದ್ದಾರೆ. ಸಿಗಪ್ಪು ರೋಜಾಕಲ್ ಸಿನಿಮಾವಂತೂ ಅದ್ಬುತಉದಾಹರಣೆ. ಕಮಲ್ ಸ್ಟಾರ್ ಗುಣಗಳಿಂದ ಬಿಡುಗಡೆ ಪಡೆದ ನಟ ಮತ್ತು ಸ್ಟಾರ್ ಪಂಥದಿಂದ ಮುಕ್ತವಾಗಿ ಸಿನಿಮಾ ಮಾಡುತ್ತಿರುವ ನಟ. ಇದೇ ಕಾರಣಕ್ಕೆ ಅವರು ಸಿನಿಮಾದಲ್ಲಿ ಕಥೆ ಬಯಸಿದರೆ ಸಾಯುತ್ತಾರೆ.

ಇನ್ನು ಕಮಲ್ ಸಿನಿಮಾದಲ್ಲಿ ಇಷ್ಟವಾಗುವ ಗುಣ: ಕಮಲ್ ತನ್ನ ಸಿನಿಮಾದಲ್ಲಿ ಇಷ್ಟವಾಗುವ ಗುಣ; ಕಮಲ್ ತನ್ನ ಸಿನಿಮಾದಲ್ಲಿ ಅಬ್ಬರದ ಮಾತಾಡುವುದಿಲ್ಲ, ದೃಶ್ಯದಲ್ಲಿ ತಿಳಿಸುತ್ತಾರೆ. ಕಮಲ್ ಯಾರೂ ಮುಟ್ಟದ ಸಬ್ಜೆಕ್ಟ್‌ನ್ನು ತೆಗೆದುಕೊಂಡು ಊಹೆಗೂ ಮೀರಿದ ದೃಶ್ಯಗಳು ಹೃದಯಸ್ಪರ್ಶಿ ಎನಿಸುವಂತೆ ಮಾಡುತ್ತಾರೆ.

ಇನ್ನು ನನ್ನಂತಹ ಎರಡನೇ ತಲೆಮಾರಿನ ಅಭಿಮಾನಿಗಳನ್ನು ಕಮಲ್ ಹೇಗೆ ಸೃಷ್ಠಿಸಿಕೊಂಡರು ಎಂಬುದನ್ನು ನೋಡಿದರೆ, ಕಮಲ್ ಕಾಲಕ್ಕೆ ತಕ್ಕಂತೆ ಬದಲಾಗುತ್ತ ಬಂದಿದ್ದು. ಚಲನಶೀಲತೆ, ಪ್ರಯೋಗಶೀಲತೆ ಅವರ ಯಶಸ್ಸಿನ ಗುಟ್ಟು. ಕಮಲ್ ಹೊಸತನ್ನು ಶೋಧಿಸುತ್ತಾರೆ. ಅಷ್ಟೇ ಅಧ್ಯಯನ ನಡೆಸಿ ಈ ಕಾಲಕ್ಕೆ ಸೂಕ್ತವೆನಿಸುವಂತೆ ಚಿತ್ರ ಮಾಡುತ್ತಾರೆ. ಹೀಗಾಗಿ ಕಮಲ್ ಸಿನಿಮಾವನ್ನು ಯುವಕರು ನೋಡುತ್ತಾರೆ.

ಕಮಲ್ ಈ ಒಂದು ದಶಕದಲ್ಲಿ ಅತಿ ಹೆಚ್ಚಾಗಿ ಧರ್ಮ, ಜ್ಞಾನ, ವಾಸ್ತವತೆ ಕುರಿತಾಗಿ ಸಿನಿಮಾ ಮಾಡುತ್ತಿರುವುದರಿಂದ ಸಿನಿಮಾದ ಆಯಾಮವನ್ನೇ ಇನ್ನೊಂದು ದೃಷ್ಠಿಕೋನದಲ್ಲಿ ನೋಡುತ್ತಿರುವುದರಿಂದ ಹೀಗಾಗುತ್ತಲೂ ಇರಬಹುದು, ಆದರೆ ಕಮಲ್ ನಿಂತ ನೀರಾಗುವುದು ನನಗಂತೂ ಇಷ್ಟ ಇಲ್ಲ. ಹಾಗೆ ಅವರು ನಿಂತಿರುವ ನೀರಲ್ಲ ಎಂಬುದನ್ನು ಅವರ ಸಿನಿಮಾಗಳೇ ಹೇಳುತ್ತವೆ.

60ನೇ ವಯಸ್ಸಿಗೆ ಕಾಲಿಟ್ಟಿರುವ ಪ್ರಜಾಪ್ರಭುತ್ವವಾದಿ (ಆತನ ಸಿನಿಮಾಗಳೆಲ್ಲವೂ ಸಾಬೀತು ಮಾಡುತ್ತವೆ), ಅಧ್ಯಯನಶೀಲ ಕಮಲ್ ಭಾರತದ ಹೆಮ್ಮೆ. ಅವರು ಇನ್ನಷ್ಟು ಅದ್ಭುತ ಸಿನಿಮಾಗಳನ್ನು ನೀಡಲು ಎಂಬುದರ ಜೊತೆಗೆ, ಅವರು ಅಂದುಕೊಂಡಿರುವ, ಮುಖ್ಯವಾಗಿ ನನ್ನಂತಹ ಅಭಿಮಾನಿಗಳು ಕಾದುಕುಳಿತಿರುವ ಮರುದನಾಯಕ ಚಿತ್ರವನ್ನು ಮಾಡಲಿ ಎಂಬುದು ಎಲ್ಲರ ಆಶಯ.

-ಕಿರಣ್ ಹೆಗಡೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!