ಬಾಲಿವುಡ್ ನಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಹಾಗೂ ಅನುಷ್ಕಾ ಶರ್ಮಾ ನಟನೆಯ 'ಪಿಕೆ' ಚಿತ್ರದ ಮತ್ತೊಂದು ಹಾಡನ್ನು ಚಿತ್ರ ತಂಡ ಬಿಡುಗಡೆ ಮಾಡಿದ್ದು, ಬಾರಿ ಸದ್ದು ಮಾಡುತ್ತಿದೆ.
'ಲವ್ ಇಸ್ ಎ ವೆಸ್ಟ್ ಆಫ್ ಟೈಮ್' ಎಂಬ ಸಾಹಿತ್ಯದೊಂದಿಗೆ ಶುರುವಾಗುವ ಹಾಡಿನಲ್ಲಿ ಅಮೀರ್ ಖಾನ್ ಮುಗ್ಧನಂತೆ ಕಾಣಿಸಿಕೊಂಡಿದ್ದು, ಶಾರ್ಟ್ ಹೇರ್ ಕಟ್ ಮಾಡಿಸಿಕೊಂಡು ಚಲ್ಲು ಚಲ್ಲಾಗಿ ಆಡುವ ಅನುಷ್ಕಾರ ಅಭಿನಯ ಹೆಚ್ಚು ಫನ್ನಿಯಾಗಿದೆ.
ಈ ಹಾಡನ್ನ ಒಮ್ಮೆ ನೋಡಿದ್ರೆ ಮತ್ತೆ ಮತ್ತೆ ನೋಡಬೇಕು ಅನ್ನಿಸುತ್ತೆ. ಅಷ್ಟು ಚೆನ್ನಾಗಿ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಚಿತ್ರೀಕರಿಸಿದ್ದಾರೆ. ಚಿತ್ರದ ಟ್ರೈಲರ್ ಹಾಗೂ ಹಾಡುಗಳಿಂದ ಬಾಲಿವುಡ್‘ನಲ್ಲಿ ಪಿ ಕೆ ಬಾರಿ ಸದ್ದು ಮಾಡುತ್ತಿದೆ.