ತ್ರೀ ಈಡಿಯಟ್ಸ್ - ಸಿನೆಮಾ ಸ್ಟಿಲ್ 
ಸಿನಿಮಾ ಸುದ್ದಿ

ವಿಶ್ವ ಭಾಷೆಗಳಲ್ಲಿ 'ತ್ರೀ ಈಡಿಯಟ್ಸ್' ಮಾಡುವಾಸೆ: ವಿಧು ವಿನೋದ್ ಚೋಪ್ರಾ

'ತ್ರೀ ಈಡಿಯಟ್ಸ್' ಸಿನೆಮಾವನ್ನು ವಿವಿಧ ವಿಶ್ವ ಭಾಷೆಗಳಲ್ಲಿ ಮಾಡುವ ಒಲವಿದೆ ಎಂದಿದ್ದಾರೆ...

ಪಣಜಿ: 'ತ್ರೀ ಈಡಿಯಟ್ಸ್' ಸಿನೆಮಾವನ್ನು ವಿವಿಧ ವಿಶ್ವ ಭಾಷೆಗಳಲ್ಲಿ ಮಾಡುವ ಒಲವಿದೆ ಎಂದಿದ್ದಾರೆ ನಿರ್ದೇಶಕ-ನಿರ್ಮಾಪಕ ವಿಧು ವಿನೋದ್ ಚೋಪ್ರ.

"'ತ್ರೀ ಈಡೀಯಟ್ಸ್' ಅನ್ನು ಚೈನೀಸ್, ಫ್ರೆಂಚ್ ಮತ್ತು ಇಂಗ್ಲಿಶ್ ಭಾಷೆಗಳಲ್ಲಿ ಮಾಡುವ ಒಲವಿದೆ. ವಿಶ್ವದ ಎಲ್ಲ ಭಾಷೆಗಳಲ್ಲೂ ಈ ಸಿನೆಮಾ ಮಾಡುವ ಆಸೆಯಿದೆ. ನನ್ನ ಮಗಳ ಬದುಕನ್ನೂ ಸೇರಿದಂತೆ ಹಲವರ ಜೀವನವನ್ನು ಬದಲಾಯಿಸಿದ ಸಿನೆಮಾ ಇದು. ನನ್ನ ಮಗಳು ಮಾಧ್ಯಮ ಅಧ್ಯಯನವನ್ನು ಬಿಟ್ಟು ಕಥಕ್ ಕಲಿಯಲು ಮುಂದಾದಳು. ಈಗ ಅವಳು ನೃತ್ಯ ಕಲಿಸುತ್ತಿದ್ದಾಳೆ." ಎಂದಿರುವ ಚೋಪ್ರಾ, ನನ್ನ ತಂದೆಗೆ ನಾನು ಡಾಕ್ಟರ್ ಆಗುವುದಿಲ್ಲ ಬದಲಿಗೆ ಸಿನೆಮಾ ನಿರ್ದೇಶಕನಾಗುತ್ತೇನೆ ಎಂದು ಹೇಳಲು ಧೈರ್ಯ ಸಾಲಲಿಲ್ಲ ಎಂದಿದ್ದಾರೆ.

ಭಾರತದ ಶೈಕ್ಷಣಿಕ ವ್ಯವಸ್ಥೆಯನ್ನು ಟೀಕಿಸಿ, ಬೋಧನೆ ರೀತಿಯಲ್ಲಿಲ್ಲದ ಈ ಸಿನೆಮಾವನ್ನು ರಾಜಕುಮಾರ್ ಹಿರಾನಿ ನಿರ್ದೇಶಿಸಿದ್ದರು. ಅಮೀರ್ ಖಾನ್, ಶರ್ಮನ್ ಜೋಶಿ, ಆರ್ ಮಾಧವನ್ ಮತ್ತು ಕರೀನಾ ಕಪೂರ್ ನಟಿಸಿದ್ದ ಈ ಚಲನಚಿತ್ರವನ್ನು ಚೋಪ್ರಾ ನಿರ್ಮಾಣ ಸಂಸ್ಥೆ ನಿರ್ಮಿಸಿತ್ತು. ೨೦೦೯ ರಲ್ಲಿ ಈ ಸಿನೆಮಾ ಬಿಡುಗಡೆ ಕಂಡಿತ್ತು.

ಗೋವಾದಲ್ಲಿ ನಡೆಯುತ್ತಿರುವ ಫಿಲಂ ಬಾಜಾರ್ ನ ಕಾರ್ಯಕ್ರಮದಲ್ಲಿ ಚೋಪ್ರಾ ೧೯೮೫ ರ ಕಾಮೋಶ್ ಚಲನಚಿತ್ರದಲ್ಲಿ ತಮ್ಮ ಜೊತೆ ಕೆಲಸ ಮಾಡಿದ್ದ ಸುಧೀರ್ ಮಿಶ್ರಾ ಅವರ ಜೊತೆ ಸಂವಾದದಲ್ಲಿ ಮಾತನಾಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

17 ಭಾಷೆಗಳಲ್ಲಿ ಹಾಡಿದರೂ ಕನ್ನಡದ ನೆಲದಲ್ಲೇ ಮಣ್ಣಾದ ಗಾನಕೋಗಿಲೆ: ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಎಸ್.ಜಾನಕಿ ಅಂತ್ಯಕ್ರಿಯೆ!

ನಿಮ್ಮ ತಲೆ ತೆಗಿತೀವಿ: ಟ್ರಂಪ್, ನೆತನ್ಯಾಹು, ಮೆಲೋನಿ ಹಾಗೂ ಯುರೋಪಿಯನ್ ನಾಯಕರು ನಮ್ಮ ಟಾರ್ಗೆಟ್; ಇರಾನ್ ಪತ್ರಿಕೆ

'96 ' ಚಿತ್ರದಲ್ಲಿ ಜಾನಕಿ ಹೆಸರಿನ ಪಾತ್ರ: ನೆನಪಿಸಿಕೊಂಡ ನಟಿ ತ್ರಿಶಾ ಕೃಷ್ಣನ್, Deleted scene ಹಂಚಿಕೊಂಡ ಅಭಿಮಾನಿಗಳು! ಅದ್ರಲ್ಲಿ ಏನಿದೆ..? Video..

ಮಾರುವೇಷ ಯಾಕೆ ಸ್ವಾಮಿ... ಇದು ಚಿಲ್ಲರೆ ಕಾಲವಲ್ಲ, ಕ್ಯೂಆರ್ ಕೋಡ್ ಕಾಲ: ಸಚಿವ ಸುರೇಶ್‌ಗೆ ಶಾಸಕ ಸುರೇಶ್ ಕುಮಾರ್ ಪಾಠ

'Health camp' ಚಿಕಿತ್ಸೆಯಿಂದ ಕಾಲು ಕಳೆದುಕೊಂಡ ಮಹಿಳೆ! ಪೊಲೀಸರಿಗೆ ದೂರು, ಅಭಿಷೇಕ್ ಬ್ಯಾನರ್ಜಿ ವಿರುದ್ಧ ಕೇಸ್ ದಾಖಲು