ಶ್ವೇತಾ ಬಸು ಪ್ರಸಾದ್ 
ಸಿನಿಮಾ ಸುದ್ದಿ

ನಟಿ ಶ್ವೇತಾ ಬಸು ಈಗ ಚಿತ್ರಕಥೆ ಬರಹಗಾರ್ತಿ!

ವೇಶ್ಯಾವಾಟಿಕೆ ಪ್ರಕರಣದಲ್ಲಿ ಸಿಕ್ಕಿ..

ಹೈದ್ರಾಬಾದ್: ವೇಶ್ಯಾವಾಟಿಕೆ ಪ್ರಕರಣದಲ್ಲಿ ಸಿಕ್ಕಿ ಬಿದ್ದು, ಪುನರ್ವಸತಿ ಕೇಂದ್ರದಿಂದ ಬಿಡುಗಡೆಗೊಂಡಿದ್ದ ಟಾಲಿವುಡ್ ನಟಿ ಶ್ವೇತಾ ಬಸು ಪ್ರಸಾದ್ ಅವರು ಸದ್ಯ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಕಥೆ ಸಲಹೆಗಾರ್ತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಸಿನಿಮಾಗಳಲ್ಲಿ ತಮಗೆ ಅವಕಾಶ ಸಿಗುವುದು ಕಡಿಮೆಯಾದ ಕಾರಣ ಜೀವನ ನಿರ್ವಹಣೆಗಾಗಿ ವೇಶ್ಯಾವಾಟಿಕೆ ದಂದೆಗೆ ಇಳಿಯಬೇಕಾಯಿತು ಎಂದು ಹೇಳಿದ್ದ ರಾಷ್ಟ್ರೀಯ ಪ್ರಶಸ್ತಿ ವಿಜೇತೆ ಶ್ವೇತಾ ಪುನರ್ವಸತಿ ಕೇಂದ್ರದಿಂದ ಬಿಡುಗಡೆಗೊಂಡ ನಂತರ ಇದೀಗ ಬಾಲಿವುಡ್ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಫ್ಯಾಂಟಮ್ ಪ್ರೊಡಕ್ಷನ್‌ನಲ್ಲಿ ಸ್ಕ್ರೀಪ್ಟ್ ಸಲಹೆಗಾರ್ತಿಯಾಗಿ ಕೆಲಸ ಸಂಪಾದಿಸಿದ್ದಾರೆ.

ಫ್ಯಾಂಟಮ್ ಪ್ರೊಡಕ್ಷನ್‌ನಲ್ಲಿ ಕಥೆ ಸಲಹೆಗಾರ್ತಿಯಾಗಿ ಕಾರ್ಯನಿರ್ವಹಿಸಲು ಅವಕಾಶ ಬಂದಿದೆ ಎಂದು ಶ್ವೇತ ಖಚಿತಪಡಿಸಿದ್ದಾರೆ. ಇದರಿಂದಾಗಿ ನನಗೆ ಒಳ್ಳೆಯ ಕಥೆಗಳನ್ನು ಕೇಳುವ ಅವಕಾಶ ನಿಗಲಿದೆಯಲ್ಲದೇ ಮುಂದೆ ಇದು ತಮ್ಮ ನಟನೆಗೂ ಸಹಾಯಕವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಹನ್ಸಲ್ ಮೆಹ್ತಾರವರ ಚಿತ್ರದಲ್ಲಿ ತಾವು ಕಾರ್ಯ ನಿರ್ವಹಿಸುವುದಾಗಿ ಕೇಳಿ ಬಂದಿರುವ ವದಂತಿಯನ್ನು  ನಿರಾಕರಿಸಿದ ನಟಿ ಶ್ವೇತಾ ಪ್ರಸಾದ್, ತಾವು ಸಾಕ್ಷ್ಯ ಚಿತ್ರದಲ್ಲಿ ಕಾರ್ಯ ನಿರ್ವಹಿಸುವುದು ಹೇಗೆ ಸಾಧ್ಯ ಎಂದು ಮರು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕಾ–ಇರಾನ್ ಶಾಂತಿ ಮಾತುಕತೆ ವಿಫಲ: ಷೇರು ಮಾರುಕಟ್ಟೆ ಮೇಲೆ ಪರಿಣಾಮ; ಸೆನ್ಸೆಕ್ಸ್ 1600 ಅಂಕ ಕುಸಿತ, ತೈಲ ಬೆಲೆ ಏರಿಕೆ..!

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

ನೀವು ಪೋಪ್ ಆಗಲು ನಾನು ಕಾರಣ, ರಾಜಕಾರಣ ಬಿಟ್ಟು ಧರ್ಮಗುರುವಿನ ಕೆಲಸ ಮಾಡಿ: ಪೋಪ್ ಲಿಯೋ XIV ವಿರುದ್ಧ ಟ್ರಂಪ್ ವಾಗ್ದಾಳಿ

ಕಾಂಗ್ರೆಸ್‌ನಲ್ಲಿ ಕುರ್ಚಿ ಕಸರತ್ತು: ದೆಹಲಿಗೆ 'ಕೈ' ಶಾಸಕರ ಪ್ರಯಾಣ, ಸಚಿವ ಸ್ಥಾನಕ್ಕಾಗಿ ಲಾಬಿ..!

'ಕೆಲವು ಸಚಿವರು ಕೈಗೂ ಸಿಗಲ್ಲ, ಫೋನಿಗೂ ಸಿಗಲ್ಲ: ದೇವಲೋಕದಿಂದ ಬಂದಂತೆ ಆಡ್ತಾರೆ; ಅಂತವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಿ'

SCROLL FOR NEXT