ಇಟಲಿಯಲ್ಲಿ ಪಾಸ್ ಪೋರ್ಟ್ ಕಳೆದುಕೊಂಡ 'ಭಜರಂಗಿ' ನಿರ್ದೇಶಕ
ಸ್ಯಾಂಡಲ್ ವುಡ್ ನ ನಿರ್ದೇಶಕ ಹರ್ಷ ಇಟಲಿಯ ಮಿಲಾನ್ ನಲ್ಲಿ ಪಾಸ್ ಪೋರ್ಟ್ ಕಳೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ...
ಇಟಲಿ: ಸ್ಯಾಂಡಲ್ ವುಡ್ ನ ನಿರ್ದೇಶಕ ಹರ್ಷ ಇಟಲಿಯ ಮಿಲಾನ್ ನಲ್ಲಿ ಪಾಸ್ ಪೋರ್ಟ್ ಕಳೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಜ್ರಕಾಯ ಚಿತ್ರದ ನಿರ್ದೇಶಕ ಹರ್ಷ ಮಿಲಾನ್ ನಲ್ಲಿ ಪಾಸ್ ಪೋರ್ಟ್ ಕಳೆದುಕೊಂಡಿದ್ದು, ಪಾಸ್ ಪೋರ್ಟ್ ಗಾಗಿ ಇಟಲಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಮೊರೆ ಹೋಗಿದ್ದಾರೆ.
ಇಟಲಿಯ ಮಿಲಾನ್ ನಲ್ಲಿ ನಟ ಶಿವರಾಜಕುಮಾರ್ ಅರೊಂದಿಗೆ ವಜ್ರಕಾಯ ಚಿತ್ರದ ಹಾಡುಗಳ ಚಿತ್ರೀಕರಣ ನಡೆಸುತ್ತಿದ್ದ ಹರ್ಷ ಶೂಟಿಂಗ್ ನಡುವೆ ತಿಂಡಿ ತಿನ್ನಲೆಂದು ರೆಸ್ಟೋರೆಂಟ್ ಗೆ ಹೋಗಿದ್ದಾಗ ಅವರ ಪಾಸ್ ಪೋರ್ಟ್ ಇದ್ದ ಬ್ಯಾಗ್ ಕಳುವಾಗಿದೆ. ಬ್ಯಾಗ್ ನಲ್ಲಿ ಪಾಸ್ ಪೋರ್ಟ್ ಸೇರಿದಂತೆ ಮುಖ್ಯವಸ್ತುಗಳು ಇದ್ದವು ಎಂದು ಹೇಳಲಾಗಿದೆ.
ಭಾರತಕ್ಕೆ ಹಿಂದಿರುಗಲು ಪಾಸ್ ಪೋರ್ಟ್ ಅತ್ಯವಶ್ಯಕವಾಗಿ ಬೇಕಾಗಿದೆ. ಈ ಹಿನ್ನಲೆಯಲ್ಲಿ ಹರ್ಷ ಪಾಸ್ ಪೋರ್ಟ್ ಪಡೆಯಲು ಭಾರತೀಯ ರಾಯಭಾರ ಕಚೇರಿಯ ಮೊರೆ ಹೋಗಿದ್ದಾರೆ. ಒಂದೊಮ್ಮೆ ಪಾಸ್ರ್ ಪೋರ್ಟ್ ಸಿಗದಿದ್ದರೆ ಹರ್ಷ ಬಂಧನಕ್ಕೊಳಗಾಗುವ ಸಾಧ್ಯತೆಯೂ ಇದೆ ಎಂದು ತಿಳಿದು ಬಂದಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.