ಕಂಗನಾ ರನೌತ್ 
ಸಿನಿಮಾ ಸುದ್ದಿ

ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದು ಆಕಾಶದಲ್ಲಿ ತೇಲುತ್ತಿರುವ ಕಂಗನಾ

'ಕ್ವೀನ್' ಚಲನಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಮೇಲೆ ನನ್ನ ಜೀವನದಲ್ಲಿ ಹೆಚ್ಚೇನು ಬದಲಾವಣೆ ಆಗಿಲ್ಲ ಎಂದಿದ್ದಾರೆ ಬಾಲಿವುಡ್ ನಟಿ ಕಂಗನಾ ರಾವುತ್.

ಮುಂಬೈ: 'ಕ್ವೀನ್' ಚಲನಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಮೇಲೆ ನನ್ನ ಜೀವನದಲ್ಲಿ ಹೆಚ್ಚೇನು ಬದಲಾವಣೆ ಆಗಿಲ್ಲ ಎಂದಿದ್ದಾರೆ ಬಾಲಿವುಡ್ ನಟಿ ಕಂಗನಾ ರನೌತ್. ಆದರೆ ಜನರು ನನ್ನ ನಟನ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟಿದ್ದಾರೆ ಹಾಗೂ ಮಹಿಳಾ ಕೇಂದ್ರಿತ ಸಿನೆಮಾಗಳಲ್ಲಿ ನಟಿಸಲು ದೊಡ್ಡ ದೊಡ್ಡ ನಿರ್ದೇಶಕರಿಂದ ಹೆಚ್ಚೆಚ್ಚು ಅವಕಾಶಗಳು ಬರುತ್ತಿವೆ. ಇದು ನನಗೆ ಬಹಳ ಸಂತಸ ತಂದಿದೆ ಎಂದಿದ್ದಾರೆ.

"ನನಗೆ ಎರಡನೇ ರಾಷ್ಟೀಯ ಪ್ರಶಸ್ತಿ ಬಂದ ನಂತರ ನನ್ನ ಜೀವನದಲ್ಲಿ ಏನೋ ಬದಲಾಗಿದೆ ಎಂದೇನಿಲ್ಲ. ಆದರೆ ಹೌದು ನನ್ನ ಜೀವನದಲ್ಲಿ ಇದೊಂದು ದೊಡ್ಡ ದಾಪುಗಾಲು. ಈಗ ಜನ ನನ್ನನ್ನು ನಂಬಲು ಪ್ರಾರಂಬಿಸಿದ್ದಾರೆ" ಎಂದು ಗುರುವಾರ ಅವರು ಹೇಳಿದ್ದಾರೆ.

"ಮಹಿಳಾ ಕೇಂದ್ರಿತ ಸಿನೆಮಾಗಳಲ್ಲಿ ಕೆಲಸ ಮಾಡಲು ಹಲವಾರು ನಿರ್ದೇಶಕರು ಅವಕಾಶ ನೀಡಲು ಮುಂದೆ ಬಂದಿದ್ದರೆ. ಈ ನಿರ್ದೇಶಕ ಜೊತೆ ನಟಿಸಲು ನಾನು ಯಾವಾಗಲೂ ಇಷ್ಟಪಡುತ್ತಿದ್ದೆ" ಎಂದಿದ್ದರೆ.

ಕ್ವೀನ್ ಚಿತ್ರಕ್ಕೂ ಮೊದಲು "ಫ್ಯಾಶನ್" ಚಲನಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಕಂಗನಾಗೆ ಒಲಿದುಬಂದಿತ್ತು. ೨೮ನೆ ವಯಸ್ಸಿಗೇ ಎರಡು ರಾಷ್ಟಪ್ರಶಸ್ತಿಗಳು ಒಲಿದುಬಂದಿರುವುದಕ್ಕೆ ಕಂಗನಾ ಥ್ರಿಲ್ ಆಗಿದ್ದಾರೆ.

"ನನಗೆ ೨೮ನೆ ವಯಸ್ಸಿಗೆ ೨ ರಾಷ್ಟ್ರೀಯ ಪ್ರಶಸ್ತಿಗಳು ದೊರಕಿರುವುದು ಸಂತಸ ತಂದಿದೆ" ಎಂದಿದ್ದಾರೆ ಅವರು. ಈ ಮಧ್ಯೆ ಕಂಗನಾ "ತನು ವೆಡ್ಸ್ ಮನು" ಮತ್ತು "ಕಟ್ಟಿ ಬಟ್ಟಿ" ಸಿನೆಮಾಗಳಲ್ಲಿ ನಿರತರಾಗಿದ್ದಾರೆ. ಹಾಗೆಯೆ ದಿವಂಗತ ಬಾಲಿವುಡ್ ನಟಿ ಮೀನಾ ಕುಮಾರಿ ಜೀವನಾಧಾರಿತ ಸಿನೆಮಾದಲ್ಲೂ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT