ಮುಂಬೈ: ಬಾಲಿವುಡ್ 'ಕ್ವೀನ್' ಕಂಗನಾ ರನೌತ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವ ರಣಬೀರ್ ಕಪೂರ್ ಜೊತೆ ಕೆಲಸ ಮಾಡಲು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತೆ ತನ್ನ ಅಭ್ಯಂತರ ಏನಿಲ್ಲ ಎಂದಿದ್ದಾರೆ.
ವಿಕಾಸ್ ಭಾಲ್ ಅವರ 'ಕ್ವೀನ್' ಚಿತ್ರವನ್ನು ಇತ್ತೀಚೆಗೆ ಹೊಗಳಿ ಕಂಗನಾ ಅವರ ಜೊತೆ ನಟಿಸುವ ತಮ್ಮ ಇರಾದೆಯನ್ನು ರಣಬೀರ್ ವ್ಯಕ್ತಪಡಿಸಿದ್ದರು.
ಇದರ ಬಗ್ಗೆ ಕಂಗನಾ ಅವರನ್ನು ಪ್ರಶ್ನಿಸಿದಾಗ "ಖಂಡಿತಾ, ಯಾಕಾಗಬಾರದು? ರಣಬೀರ್ ಅವರ ಕೆಲಸವನ್ನು ನಾನು ಇಷ್ಟ ಪಡುತ್ತೇನೆ. ನನ್ನ 'ಕ್ವೀನ್' ಸಿನೆಮಾವನ್ನು ಬೆಂಬಲಿಸಿದವರಲ್ಲಿ ಅವರು ಮೊದಲಿಗರು. ಅವರು ನನ್ನ ಜೊತೆ ನಟಿಸುವ ಆಸೆ ವ್ಯಕ್ತಪಡಿಸಿದ್ದರೆ ಅದು ನನ್ನ ಗೌರವ. ನಾನೇಕೆ ಅವರ ಜೊತೆ ನಟಿಸದೆ ಇರಲಾರೆ?" ಎಂದಿದ್ದಾರೆ ಕಂಗನಾ.
"ನಾನು ಅವರ ಜೊತೆ ಕೆಲಸ ಮಾಡಲು ಇಷ್ಟ ಪಡುತ್ತೇನೆ. ಆದರೆ ನನ್ನದ್ದು ಗಟ್ಟಿ ಪಾತ್ರವಾಗಿರಬೇಕು" ಎಂದಿರುವ ೨೮ ವರ್ಷದ ಕಂಗನಾ ತನ್ನ ಪಾತ್ರದ ಜೊತೆ ರಾಜಿ ಮಾಡಿಕೊಳ್ಳುವ ಸಂದರ್ಭ ಬಂದರೆ ಪಾತ್ರವನ್ನು ತಿರಸ್ಕರಿಸುವುದಾಗಿ ಹೇಳಿದ್ದಾರೆ.
ಸದ್ಯಕ್ಕೆ ಕಂಗನಾ 'ತನು ವೆಡ್ಸ್ ಮನು ರಿಟರ್ನ್ಸ್' ಚಿತ್ರದ ಬಿಡುಗಡೆಗೆ ಸಿದ್ಧರಾಗುತ್ತಿದ್ದಾರೆ, ರಣಬೀರ್ ಅನುರಾಗ್ ಕಶ್ಯಪ್ ಅವರ 'ಬಾಂಬೆ ವೆಲ್ವೆಟ್' ನಲ್ಲಿ ನಿರತರಾಗಿದ್ದಾರೆ.