ಡಿಸೆಂಬರ್ ನಲ್ಲಿ ಬಾಹುಬಲಿ ಹೀರೋ ಪ್ರಭಾಸ್ ವಿವಾಹ!
ಪ್ರಭಾಸ್ ಫ್ಯಾನ್ ಗಳಿಗೆ ಇಲ್ಲೊಂದು ಸಿಹಿಸುದ್ದಿ. ಬಾಹುಬಲಿ ಹೀರೋ ಪ್ರಭಾಸ್ ಬರುವ ಡಿಸೆಂಬರ್ ನಲ್ಲಿ ಸಪ್ತಪದಿ ತುಳಿಯಲಿದ್ದಾರಂತೆ...
ಮುಂಬಯಿ: ಪ್ರಭಾಸ್ ಫ್ಯಾನ್ ಗಳಿಗೆ ಇಲ್ಲೊಂದು ಸಿಹಿಸುದ್ದಿ. ಬಾಹುಬಲಿ ಹೀರೋ ಪ್ರಭಾಸ್ ಬರುವ ಡಿಸೆಂಬರ್ ನಲ್ಲಿ ಸಪ್ತಪದಿ ತುಳಿಯಲಿದ್ದಾರಂತೆ.
ಬಾಹುಬಲಿ ಚಿತ್ರದ ನಂತರ ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಂಡಿರುವ ಪ್ರಭಾಸ್ ಮದುವೆ ವಿಷಯ ಕೇಳಿ ಅನೇಕ ಹುಡುಗಿಯರಿಗೆ ಬೇಸರವಾಗಿದೆಯಂತೆ.
ಬಾಲಿವುಡ್ ನಟ ಶಾಹೀದ್ ಕಪೂರ್ ರೀತಿಯೇ ಪ್ರಬಾಸ್ ತನ್ನ ಪೋಷಕರು ನೋಡಿ ಒಪ್ಪಿಕೊಂಡಿರುವ ಹುಡುಗಿಯ ಕೈ ಹಿಡಿಯಲು ನಿರ್ಧರಿಸಿದ್ದಾರಂತೆ. 35 ವರ್ಷದ ಪ್ರಭಾಸ್ 22 ವರುಷದ ಯುವತಿಯ ಜೊತೆ ಹಸೆಮಣೆ ಏರಲಿದ್ದಾರೆ.
ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಭಾಗ 2 ಸೆಪ್ಟಂಬರ್ ನಿಂದ ಆರಂಭವಾಗಲಿದ್ದು. ಡಿಸೆಂಬರ್ ನಲ್ಲಿ ವಿವಾಹ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ.
ಪ್ರಭುದೇವ್ ಮತ್ತು ಅಜಯ್ ದೇವಗನ್ ಪ್ರಧಾನ ಭೂಮಿಕೆಯಲ್ಲಿ ಅಭಿನಯಿಸಿರುವ ಆಕ್ಷನ್ ಜಾಕ್ಷನ್ ಎಂಬ ಬಾಲಿವುಡ್ ಚಿತ್ರದಲ್ಲಿ ಪ್ರಭಾಸ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ,
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.