ಮಾದ ಮತ್ತು ಮಾನಸಿ ಚಿತ್ರದಲ್ಲಿ ಅನುಶ್ರೀ
ಮಾದ ಮತ್ತು ಮಾನಸಿ ಸಿನಿಮಾದ ಹಾಡೊಂದರಲ್ಲಿ ಕಾಣಿಸಿಕೊಂಡಿರುವುದು ಅಲ್ಲದೇ ಅನುಶ್ರೀ ಪ್ರಧಾನ ಪಾತ್ರದಲ್ಲೂ ನಟಿಸಲು ಒಪ್ಪಿದ್ದಾರೆ.
ನಟಿ ಅನುಶ್ರೀ ಇತ್ತೀಚಿನ ದಿನಗಳಲ್ಲಿ ಬೆಳ್ಳಿ ತೆರೆಯಲ್ಲಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಯಾಂಡಲ್ ವುಡ್ ನ ಮಾದ ಮತ್ತು ಮಾನಸಿ ಸಿನಿಮಾದ ಹಾಡೊಂದರಲ್ಲಿ ಕಾಣಿಸಿಕೊಂಡಿರುವುದು ಅಲ್ಲದೇ ಅನುಶ್ರೀ ಪ್ರಧಾನ ಪಾತ್ರದಲ್ಲೂ ನಟಿಸಲು ಒಪ್ಪಿದ್ದಾರೆ.
ಮಾಡ ಮತ್ತು ಮಾನಸಿ ಸಿನಿಮಾಗೆ ಸತೀಶ್ ಪ್ರಧಾನ್ ನಿರ್ದೇಶನ ಮಾಡಿದ್ದು, ಮನೋಮೂರ್ತಿ ನಿರ್ಮಾಣದಲ್ಲಿ ತಯಾರಾಗುತ್ತಿದೆ. ಪ್ರಜ್ವಲ್ ದೇವರಾಜ್ ಹಾಗೂ ಶ್ರುತಿ ಹರಿಹರನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರಗಳನ್ನು ಕಲಾತ್ಮಕವಾಗಿ ಪರಿಚಯಿಸಲು ನಿರ್ಧರಿಸಿದ್ದೇನೆ. ಹಾಡಿನಲ್ಲಿ ಅನುಶ್ರೀ ಮೂಲಕ ಚಿತ್ರದ ಪಾತ್ರಗಳನ್ನು ಪರಿಚಯಿಸಲಾಗುವುದು, ಮೊಘಲ್ ಲುಕ್ ನಲ್ಲಿ ಈ ಹಾಡನ್ನು ರೂಪಿಸಲಾಗಿದೆ ಎಂದು ನಿರ್ದೇಶಕ ಸತೀಶ್ ಪ್ರಧಾನ್ ಹೇಳಿದ್ದಾರೆ. ರಾಕ್ ಲೈನ್ ಸ್ಟುಡಿಯೋದಲ್ಲಿ ಹಾಡಿನ ಸೆಟ್ ನಿರ್ಮಾಣವಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.