ಕರ್ನಾಟಕದಲ್ಲಿ ಅತಿ ಹೆಚ್ಚು ಗೂಗಲ್‍ನಿಂದ ಸರ್ಚ್ ಆಗಿದ್ದು ಪರ ಭಾಷಾ ತಾರೆ ಕಾಜೋಲ್ ಅಗರ್‍ವಾಲ್! ಹೀಗಂತ ಗೂಗಲ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಗೊತ್ತಾಗಿದೆ. ನಟ ಅಜಿತ್ ಮತ್ತು ನಟಿ ಕಾಜೋಲ್ ಹೆಚ್ಚು ಹುಡುಕಾಟಕ್ಕೆ ಒಳಗಾಗಿದ್ದಾರೆ. ಉಳಿದಂತೆ ಪ್ರಭಾಸ್, ಅಲ್ಲು ಅರ್ಜುನ್, ರಜನಿಕಾಂತ್, ಧನುಷ್, ಮಹೇಶ್ ಬಾಬು, ವಿಕ್ರಮ್, ಸುದೀಪ್, ಪವನ್ ಕಲ್ಯಾಣ, ಜೂನಿಯರ್ ಎನ್.ಟಿ.ಆರ್. ನಾಯಕರ ಪೈಕಿಯಾದರೆ, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ, ಸಮಂತ ರುತ್ ಪ್ರಭು, ನಯನತಾರಾ, ತ್ರಿಷಾ, ರಮ್ಯಾ, ಪ್ರಿಯಮಣಿ, ಸ್ನೇಹ, ಭಾವನ್ ಮೆನನ್ ಟಾಪ್ ಟೆನ್ ಪಟ್ಟಿಯಲ್ಲಿದ್ದಾರೆ. ಆದರೆ, ಈ ಹುಡುಕಾಟದಲ್ಲಿ ಕನ್ನಡ ನಟಿಯರೇ ಹಿಂದಿರುವುದು ವಿಪರ್ಯಾಸ. ರಾಜ್ಯದ ಸ್ಥಳಗಳ ಪೈಕಿ ಲಾಲ್‍ಬಾಗ್ ಬಟಾನಿಕಲ್ ಗಾರ್ಡನ್ ಬಗ್ಗೆ ಗೂಗಲ್‍ನಲ್ಲಿ ಇತ್ತೀಚಿಗೆ ಹೆಚ್ಚು ಹುಡಾಕಾಟ ನಡೆದಿದೆ. ಅದೇ ರೀತಿ ಬೆಂಗಳೂರು ಅರಮನೆ, ಇಸ್ಕಾನ್ ಬೆಂಗಳೂರು, ಕಬ್ಬನ್ ಪಾರ್ಕ್, ಬನ್ನೇರುಘಟ್ಟ ಪಾರ್ಕ್, ವಂಡರ್ಲಾ, ಎಚ್‍ಎಎಲ್ ಹೆರಿಟೇಜ್ ಮ್ಯೂಸಿಯಂ, ಬಂಡೀಪುರ ಪಾರ್ಕ್, ಮೈಸೂರು ಅರಮನೆ ಬಗ್ಗೆ ಜನ ಹೆಚ್ಚು ಗೂಗಲ್ ಮಾಡಿದ್ದಾರೆ.