ಉಪ್ಪಿ2 ಫಿಲಾಸಫಿ ಅನುಸರಿಸುವೆ ಎಂದ ಶಿವರಾಜ್ ಕುಮಾರ್
ಉಪ್ಪಿ2 ಚಿತ್ರ ನಿಜಕ್ಕೂ ವಿಭಿನ್ನ ಫಿಲಾಸಫಿಯನ್ನು ಹೊಂದಿದೆ. ನಿಜ ಜೀವನದಲ್ಲಿ ನಡೆಯುವಂತಾ ಘಟನಾವಳಿಗಳನ್ನೇ ತೆರೆಯ ಮೇಲೆ ಉಪೇಂದ್ರ ಅವರು ತೆರೆದಿಟ್ಟಿದ್ದಾರೆ...
ಸ್ಯಾಂಡಲ್ವುಡ್ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ತಮ್ಮ ಮಗಳು ನಿರುಪಮ ಮದುವೆಯ ಕರೆಯೋಲೆಯೊಂದಿಗೆ ಇತ್ತೀಚೆಗಷ್ಟೇ ರಿಯಲ್ ಸ್ಟಾರ್ ಉಪೇಂದ್ರರ ಮನೆಗೆ ಆಗಮಿಸಿ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರರನ್ನು ಮದುವೆಗೆ ಆಹ್ವಾನಿಸಿದರು.
ಮದುವೆ ಕರೆಯೋಲೆಯೊಂದಿಗೆ ತೆರಳಿದ ಶಿವರಾಜ್ ಕುಮಾರ್ ಉಪೇಂದ್ರರೊಂದಿಗೆ ಸಮಾಜಮುಖಿ ವಿಷಯಗಳು ಕುರಿತಾಗಿ ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ.
ಇದೇ ವೇಳೆ ಬಹುನಿರೀಕ್ಷಿತ ಉಪ್ಪಿ2 ಚಿತ್ರ ರಾಜ್ಯಾದ್ಯಾಂತ ಬಿಡುಗಡೆಗೊಂಡಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಚಿತ್ರೋದ್ಯಮದ ಗಣ್ಯರಿಗಾಗಿ ಉಪ್ಪಿ2 ಚಿತ್ರದ ವಿಶೇಷ ಪ್ರದರ್ಶನ ಮಾಡಲಾಯಿತು. ಚಿತ್ರವನ್ನು ನೋಡಿದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಉಪ್ಪಿ2 ಚಿತ್ರ ನಿಜಕ್ಕೂ ವಿಭಿನ್ನ ಫಿಲಾಸಫಿಯನ್ನು ಹೊಂದಿದೆ. ನಿಜ ಜೀವನದಲ್ಲಿ ನಡೆಯುವಂತಾ ಘಟನಾವಳಿಗಳನ್ನೇ ತೆರೆಯ ಮೇಲೆ ಉಪೇಂದ್ರ ಅವರು ತೆರೆದಿಟ್ಟಿದ್ದಾರೆ. ಪ್ರಸ್ತುತತೆಯನ್ನು ನಂಬಿ ಬದುಕಿದರೆ ಯಾವುದೇ ತೊಂದರೆಯಾಗ ಎಂಬುದನ್ನು ತೋರಿಸಿದ್ದಾರೆ ಎಂದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.