'ಮದುವೆಯ ಮಮತೆಯ ಕರೆಯೋಲೆ' ಸಿನೆಮಾದ ಸ್ಟಿಲ್ 
ಸಿನಿಮಾ ಸುದ್ದಿ

'ಮದುವೆಯ ಮಮತೆಯ ಕರೆಯೋಲೆ'ಗೆ ಮಲೇಶಿಯಾಕ್ಕೆ ತೆರಳಲಿರುವ ಕವಿರಾಜ್

ಗೀತರಚನಕಾರನಿಂದ ನಿರ್ದೇಶಕನಾಗಿ ಭಡ್ತಿ ಹೊಂದಿರುವ ಕವಿರಾಜ್ ತಮ್ಮ ಚೊಚ್ಚಲ ಸಿನೆಮಾ 'ಮದುವೆಯ ಮಮತೆಯ ಕರೆಯೋಲೆ' ಸಿನೆಮಾದ ಚಿತ್ರೀಕರಣವನ್ನು...

ಬೆಂಗಳೂರು: ಗೀತರಚನಕಾರನಿಂದ ನಿರ್ದೇಶಕನಾಗಿ ಭಡ್ತಿ ಹೊಂದಿರುವ ಕವಿರಾಜ್ ತಮ್ಮ ಚೊಚ್ಚಲ ಸಿನೆಮಾ 'ಮದುವೆಯ ಮಮತೆಯ ಕರೆಯೋಲೆ' ಸಿನೆಮಾದ ಚಿತ್ರೀಕರಣವನ್ನು ಭರದಿಂದ ಮುಂದುವರೆಸಿದ್ದಾರೆ. ಇತ್ತೀಚೆಗಷ್ಟೇ ಮತ್ತೊಂದು ಹಾಡಿನ ಚಿತ್ರೀಕರಣ ಸಂಪೂರ್ಣಗೊಳಿಸಿದ್ದಾರೆ.

ಅಮೂಲ್ಯ ಮತ್ತು ಸೂರಜ್ ಗೌಡ ಮುಖ್ಯಭೂಮಿಕೆಯಲ್ಲಿರುವ ಈ ಸಿನೆಮಾದ ಈ ಹಾಡು ಆಚಾರ್ಯ ಕಾಲೇಜು, ಒರಿಯಾನ್ ಮಾಲ್, ಜೆಪಿ ಪಾರ್ಕ್, ಜೆನ್ ಪಾರ್ಕ್ ಗಳಲ್ಲಿ ಚಿತ್ರೀಕರಣಗೊಂಡಿದೆ.

ಈಗ ಮುಂದಿನ ಹಂತದ ಚಿತ್ರೀಕರಣಕ್ಕೆ ಕವಿರಾಜ್ ಸೆಪ್ಟಂಬರ್ ನಲ್ಲಿ ಮಲೇಶಿಯಾಕ್ಕೆ ತೆರಳಲಿದ್ದಾರೆ. "ಬಹಳ ಚಿಂತಿಸಿದ ಮೇಲೆ ಮಲೇಶಿಯಾವನ್ನು ಆಯ್ಕೆ ಮಾಡಿದೆವು ಏಕೆಂದರೆ ಅಲ್ಲಿನ ನಗರಗಳಲ್ಲೇ ಬೀಚುಗಳು ಇರುವುದರಿಂದ" ಎನ್ನುತ್ತಾರೆ ಕವಿರಾಜ್.

'ಮದುವೆಯ ಮಮತೆಯ ಕರೆಯೋಲೆ' ಸಿನೆಮಾವನ್ನು ಡಿಸೆಂಬರ್ ನಲ್ಲಿ ಬಿಡುಗಡೆ ಮಾಡಲು ತಂಡ ಸಿದ್ಧತೆ ನಡೆಸುತ್ತಿದೆ. "ಎಲ್ಲ ಯೋಜನೆಯಂತೆಯೇ ಮುಂದುವರೆದಿದೆ. ಸಂಬಾಷಣೆಯ ಭಾಗ ಮತ್ತು ಹಾಡುಗಳನ್ನು ಅಕ್ಟೋಬರ್ ಒಳಗೆ ಮುಗಿಸುತ್ತೇವೆ. ಎಡಿಟಿಂಗ್ ಕಾರ್ಯ ಕೂಡ ಜಾರಿಯಲ್ಲಿದ್ದು, ಡಬ್ಬಿಂಗ್ ಕೂಡ ಪ್ರಗತಿಯಲ್ಲಿದೆ" ಎನ್ನುತ್ತಾರೆ ಅವರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?