ಸಿನಿಮಾ ಸುದ್ದಿ

ಕಬಾಲಿ ಚಿತ್ರದಲ್ಲಿ ರಾಜನೀಕಾಂತ್ ಗೆ ಮಧ್ಯವಯಸ್ಕನ ಲುಕ್

Srinivas Rao BV

ಚೆನ್ನೈ: ರಜನಿಕಾಂತ್ ತಮ್ಮ ಮುಂದಿನ ತಮಿಳು ಚಿತ್ರ ಕಬಾಲಿಯಲ್ಲಿ ಮಧ್ಯವಯಸ್ಕನ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದು, ಗ್ಯಾಂಗ್ ಸ್ಟರ್ ಪಾತ್ರ ನಿರ್ವಹಿಸಿದ್ದಾರೆ. ಕಬಾಲಿ ರಜನಿಕಾಂತ್ ಅವರ 159 ನೇ ಚಿತ್ರವಾಗಲಿದೆ.

ಕಳೆದ ವಾರ ನಡೆದ ಫೋಟೋ ಶೂಟ್ ನಡೆದಿದ್ದು ರಜನಿಕಾಂತ್ ಭಾಗವಹಿಸಿದ್ದರು, ದಟ್ಟ ಗಡ್ಡ ಬಿಟ್ಟಿರುವ ಮಧ್ಯವಯಸ್ಕನ ಲುಕ್ ನಲ್ಲಿ ರಜನಿಕಾಂತ್ ಕಾಣಿಸಿಕೊಂಡಿದ್ದರು ಎಂದು ಚಿತ್ರತಂಡದ ಸದಸ್ಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಚೆನ್ನೈ ಮೂಲದ ಭೂಗತ ಪಾತಕಿ ಕಬಾಲಿ ಕಥೆಯನ್ನು ಆಧರಿಸಿ ಈ ಚಿತ್ರವನ್ನು ತಯಾರಿಸಲಾಗುತ್ತಿದ್ದು ಪಿ.ಎ ರಂಜಿತ್ ನಿರ್ದೇಶನ ಮಾಡುತ್ತಿದ್ದಾರೆ. ರಾಧಿಕಾ ಆಪ್ಟೆ ಚಿತ್ರದ ನಾಯಕಿ ಪಾತ್ರ ನಿರ್ವಹಿಸುತ್ತಿದ್ದಾರೆ.  ಸೆ.17 ಕ್ಕೆ ಚಿತ್ರೀಕರಣ ಮಲೇಷ್ಯಾದಲ್ಲಿ  ಪ್ರಾರಂಭವಾಗಲಿದ್ದು, ಫಸ್ಟ್ ಲುಕ್ ನ್ನು ಅಂದೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಪ್ರಕಾಶ್ ರೈ ಸಹ ಈ ಚಿತ್ರದಲ್ಲಿ ನಟಿಸಿದ್ದಾರೆ.

SCROLL FOR NEXT