ನಿಶ್ಚಿತಾರ್ಥದಲ್ಲಿ ಗೀತಾ, ಶಿವರಾಜ್ ಕುಮಾರ್ ಮತ್ತು ಹಿರಿಯ ಪುತ್ರಿ ನಿರುಪಮಾ 
ಸಿನಿಮಾ ಸುದ್ದಿ

ವೈಭವಯುತ ಮದುವೆಗೆ ಸ್ಯಾಂಡಲ್ವುಡ್ ಸಜ್ಜು

ಕನ್ನಡ ಚಿತ್ರರಂಗದ ಮೇರು ಕುಟುಂಬದ ಮದುವೆ ಕುಟುಂಬಕ್ಕಷ್ಟೇ ಸೀಮಿತವಾಗದೆ ಇರುವುದಕ್ಕೆ ಎಲ್ಲಾ ಕಾರಣಗಳಿವೆ. ಶಿವರಾಜ್ ಕುಮಾರ್ ಅವರ ಹಿರಿಯ

ಬೆಂಗಳೂರು: ಕನ್ನಡ ಚಿತ್ರರಂಗದ ಮೇರು ಕುಟುಂಬದ ಮದುವೆ ಕುಟುಂಬಕ್ಕಷ್ಟೇ ಸೀಮಿತವಾಗದೆ ಇರುವುದಕ್ಕೆ ಎಲ್ಲಾ ಕಾರಣಗಳಿವೆ. ಶಿವರಾಜ್ ಕುಮಾರ್ ಅವರ ಹಿರಿಯ ಪುತ್ರಿ ನಿರುಪಮಾ ತಮ್ಮ ಕಾಲೇಜು ಗೆಳೆಯ ದಿಲೀಪ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧತೆಗಳು ಭರದಿಂದ ಸಾಗಿವೆ. ನಟ ಶಿವರಾಜ್ ಕುಮಾರ್ ಮತ್ತು ಅವರ ಪತ್ನಿ ಗೀತಾ ಈ ಕಾರ್ಯಕ್ರಮವನ್ನು ನೆನಪಿನಲ್ಲುಳಿಯುವಂತೆ ಮಾಡಲು ಸರ್ವತಾ ಶ್ರಮವಹಿಸಿದ್ದಾರೆ.

ಈ ಮೆಗಾ ಮದುವೆ ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ ನ ಹಿರಿಯ ಮತ್ತು ಕಿರಿಯ ತಾರೆಗಳ ದಂಡೇ ನೆರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ತಮ್ಮ ಪೂರ್ವನಿಯೋಜಿಕ ಕೆಲಸಗಳನ್ನೆಲ್ಲಾ ಬದಿಗಿಟ್ಟು ಮದುವೆಯ ಉಸ್ತುವಾರಿ ಹೊತ್ತಿದ್ದಾರೆ.

ಪ್ಯಾಲೇಸ್ ಮೈದಾನದಲ್ಲಿ ಖಾಯಂ ಮಂಟಪ


ಆಗಸ್ಟ್ ೩೧ರಂದು ನಡೆಯಲಿರುವ ಮದುವೆ ಮುಹೂರ್ತ ಕಾರ್ಯಕ್ರಮಕ್ಕೆ ೩.೫ ಕೋಟಿ ವೆಚ್ಚದಲ್ಲಿ ಮಂಟಪವೊಂದನ್ನು ನಿರ್ಮಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಮಂಟಪ ಖಾಯಂ ಆಗಿ ಉಳಿಯಲಿದೆ ಎನ್ನಲಾಗಿದೆ.

ಮದುವೆಗೆ ಸುಮಾರು ೧ ಲಕ್ಷ ಜನ ಬರುವ ನಿರೀಕ್ಷೆಯಿದ್ದು, ಏಕಕಾಲಕ್ಕೆ ೭೦೦೦ ಜನ ಊಟ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ. ಗಣ್ಯರಿಗೆ ಪ್ರತ್ಯೇಕ ಆಗಮನದ ವ್ಯವಸ್ಥೆ ಮಾಡಲಾಗಿದ್ದು, ಊಟದ ವ್ಯವಸ್ಥೆ ಮಾತ್ರ ಎಲ್ಲರಿಗೂ ಏಕರೂಪದ್ದಾಗಿರುತ್ತದಂತೆ.

ಇಂದು ಗಾಜನೂರಿಗೆ ಭೇಟಿ


ಸಂಪ್ರದಾಯದ ಪ್ರಕಾರ ಶಿವರಾಜ್ ಕುಮಾರ್ ಅವರ ಕುಟುಂಬ ಡಾ. ರಾಜಕುಮಾರ್ ಅವರ ಹುಟ್ಟೂರಾದ ಗಾಜನೂರಿಗೆ ಭೇಟಿ ನೀಡಲಿದೆ. ಕುಟುಂಬ ವರಮಹಾಲಕ್ಷಿ ಹಬ್ಬ ಕೂಡ ಅಲ್ಲೇ ಆಚರಿಸಲಿದ್ದು ಭಾನುವಾರ ವರಪೂಜೆ ಮತ್ತು ಸೋಮವಾರ ಮುಹೂರ್ತ ಕಾರ್ಯಕ್ರಮ ನಿಗದಿಯಾಗಿದೆ.

ವಿವಿಧ ಚಿತ್ರರಂಗದ ಗಣ್ಯರ ನಿರೀಕ್ಷೆ


ವಿವಿಧ ಭಾಷೆಯ ಚಿತ್ರರಂಗದ ಗಣ್ಯರಾದ ಎಸ್ ಎಸ್ ರಾಜಮೌಳಿ, ನಾಗಾರ್ಜುನ, ರಜನಿಕಾಂತ್, ಬಾಲಕೃಷ್ಣ, ವೆಂಕಟೇಶ್, ರವಿ ತೇಜ, ಅಮಿತಾಬ್ ಬಚ್ಚನ್, ಕಮಲ್ ಹಾಸನ್, ಧನುಶ್, ಚಿರಂಜೀವಿ ಮುಂತಾದವರು ಮದುವೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

ಮದುವೆ ಆರತಕ್ಷತೆಯಲ್ಲಿ ಪ್ರವೀಣ್ ಗೋಡ್ಕಿಂಡಿ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್