ಶಿವರಾಜ್ ಕುಮಾರ್ ದಂಪತಿ ತಮ್ಮ ಮಗಳೊಂದಿಗೆ 
ಸಿನಿಮಾ ಸುದ್ದಿ

ಶಿವಣ್ಣನ ಮಗಳ ಮದುವೆಗೆ ವೆಬ್‍ಸೈಟ್‍ನಲ್ಲಿ ಶುಭ ಕೋರಿ

ಕನ್ನಡ ಚಿತ್ರರಂಗದ ದೊಡ್ಮನೆ ಮೊಮ್ಮಗಳ ವಿವಾಹ ಮಹೋತ್ಸವಕ್ಕೆ ಸಾಕ್ಷಿಯಾಗುತ್ತಿದೆ. ಇದೇ ತಿಂಗಳು...

ಕನ್ನಡ ಚಿತ್ರರಂಗದ ದೊಡ್ಮನೆ ಮೊಮ್ಮಗಳ ವಿವಾಹ ಮಹೋತ್ಸವಕ್ಕೆ ಸಾಕ್ಷಿಯಾಗುತ್ತಿದೆ. ಇದೇ ತಿಂಗಳು 31ರಂದು ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ವಿವಾಹ ನಡೆಯಲಿದೆ. ಅಂದಹಾಗೆ ಈ ಅದ್ದೂರಿ ಮದುವೆ ನಟ ಶಿವರಾಜ್‍ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ದಂಪತಿ ಪುತ್ರಿ ಡಾ.ನಿರುಪಮಾ ಅವರದ್ದು.

ಡಾ.ದಿಲೀಪ್ ಅವರನ್ನು ನಿರುಪಮಾ ವರಿಸಲಿದ್ದು, ಈ ವಿವಾಹಕ್ಕೆ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಚಿತ್ರರಂಗದ ಗಣ್ಯರು ಆಗಮಿಸುತ್ತಿದ್ದಾರೆ. ಸಿನಿಮಾ ಕುಟುಂಬದ ಮದುವೆ ಎಂದ ಮೇಲೆ ಅಭಿಮಾನಿಗಳ ನೂಕು ನುಗ್ಗಲು ಇದ್ದಿದ್ದೇ. ಆದರೆ, ತಮ್ಮ ಮಗಳ ಮದುವೆಯಲ್ಲಿ ಅಭಿಮಾನಿಗಳು ಆ ರೀತಿ ಕಷ್ಟಪಡಬಾರದೆಂದು ಶಿವರಾಜ್‍ಕುಮಾರ್ ಒಂದು
ಐಡಿಯಾ ರೂಪಿಸಿದ್ದಾರೆ.

ದೇಶ- ವಿದೇಶದಲ್ಲಿರುವವರು ಕೂತಲ್ಲೇ ಶಿವಣ್ಣನ ಮಗಳ ಮದುವೆಗೆ ಶುಭ ಕೋರಬಹುದು. ಪ್ರತಿಯೊಬ್ಬರ ಪ್ರೀತಿಯ ಮಾತುಗಳನ್ನು ಓದುವುದಕ್ಕಾಗಿಯೇ ಒಂದು ವೆಬ್‍ಸೈಟ್ ಆರಂಭಿಸಿದ್ದು, ಈ ವೆಬ್‍ಗೆ ಲಾಗ್‍ಇನ್ ಆಗಿ ಅಲ್ಲಿ ತಮ್ಮ ಶುಭ ಸಂದೇಶ ನೀಡಬಹುದು. ಜತೆಗೆ
ಈ ವೆಬ್‍ಸೈಟ್‍ನಲ್ಲಿ ವಿವಾಹಕ್ಕೆ ಸಂಬಂಧಿಸಿದ ವಿಡಿಯೋ ಹಾಗೂ ಫೋಟೋಗಳನ್ನು ಅಪ್‍ಲೋಡ್ ಮಾಡಲಾಗುತ್ತದೆ. ವೆಬ್‍ಸೈಟ್ ವಿಳಾಸ: shivannamagalamaduve.com.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ

'ನನ್ನನ್ನಲ್ಲ, ನಿಮ್ ಗಂಡನ ಗುರಾಯಿಸಿ', ಜಯಾ ಬಚ್ಚನ್‌ ಖಡಕ್ ನೋಟಕ್ಕೆ ಫೋಟೋಗ್ರಾಫರ್ ತಿರುಗೇಟು! Video

ಭೀಕರ ಹಿಟ್‌ ಅಂಡ್ ರನ್‌; ಟೀ ಕುಡಿಯುತ್ತಾ ಬೈಕ್ ಮೇಲೆ ಕುಳಿತಿದ್ದವನಿಗೆ ಶಾಕ್ ಕೊಟ್ಟ ಕಾರು, ಗಾಳಿಯಲ್ಲಿ ಹಾರಿದ ವ್ಯಕ್ತಿ! Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ