ಈಕೆ ಚಿತ್ರರಂಗದ ಹೊಸ ನಿಕಿತಾ. ಪೂರ್ತಿ ಹೆಸರು ನಿಕಿತಾ ನಾರಾಯಣ್. ಕನ್ನಡದವರೇ ಆದರೂ ಸದ್ಯ ಹೈದರಾಬಾದ್‍ನಲ್ಲಿ ನೆಲೆಯೂರಿರುವ ನವತಾರೆ. ಟಾಲಿವುಡ್‍ನಲ್ಲಿ ಒಂದು ಅವರೇಜ್ ಸಕ್ಸಸ್‍ನಲ್ಲಿರುವ ಈ ನಟಿ, ಚಿತ್ರದುರ್ಗದ ಜೋಗಿ ಗುಡ್ಡವೇರಲು ಬಂದಿದ್ದಾರೆ.
ಅರ್ಥಾತ್, ನಾಗಚಂದ್ರ ನಿರ್ದೇಶಿಸುತ್ತಿರುವ 'ಜೋಗಿ ಗುಡ್ಡ' ಚಿತ್ರಕ್ಕೆ ಈಕೆಯೇ ನಾಯಕಿ. ನಟ ಧರ್ಮ ಕೀರ್ತಿರಾಜ್ ಈ ಚಿತ್ರದ ನಾಯಕ. ಉದಯ್ ಫಿಲ್ಮಿ ಬ್ಯಾನರ್‍ನಡಿ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಸದ್ಯದಲ್ಲೇ ಮುಹೂರ್ತ ನಡೆಯಲಿದ್ದು, ಕೋಟೆಯ ನಾಡು ಚಿತ್ರದುರ್ಗದ ಬೆಟ್ಟದ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ವಿಶೇಷ ಅಂದರೆ 'ಜೋಗಿ ಗುಡ್ಡ'ದಲ್ಲಿ ನಡೆದ ನೈಜ ಘಟನೆಯೊಂದನ್ನು ಈ ಚಿತ್ರಕ್ಕಾಗಿ ಬಳಸಿಕೊಳ್ಳುವ ಮೂಲಕ ನಿರ್ದೇಶಕ ನಾಗಚಂದ್ರ, ಚಿತ್ರಕಥೆಯಲ್ಲಿ ಕುತೂಹಲ ಮೂಡಿಸುವುದಕ್ಕೆ ಹೊರಟಿದ್ದಾರೆ.
ನಿಕಿತಾ ಗಾಂಧಿನಗರಕ್ಕೆ ಬಂದಿದ್ದು, ನಟ ಶ್ರೀನಗರಕಿಟ್ಟಿ ಅಭಿನಯದ 'ಗೀತಾಂಜಲಿ' ಚಿತ್ರಕ್ಕಾಗಿ. ರಾಜಶೇಖರ್ ಎಂಬುವವರು ನಿರ್ದೇಶನದ ಈ ಚಿತ್ರಕ್ಕೆ ನಾಯಕಿಯಾಗುವ ಮೂಲಕ ಕನ್ನಡಕ್ಕೆ ಬಂದರೂ ಆ ಚಿತ್ರ ಸದ್ಯಕ್ಕೆ ಟೇಕ್ ಆಫ್ ಆಗಿಲ್ಲ. ಈ ನಡುವೆ 'ಸಾಧು' ಎನ್ನುವ ಚಿತ್ರದಲ್ಲೂ ನಿಕಿತಾ ನಟಿಸುತ್ತಿದ್ದು, ಅದು ಇನ್ನೂ ಚಿತ್ರೀಕರಣದ ಹಂತದಲ್ಲೇ ಇದೆ. ಒಟ್ಟಿನಲ್ಲಿ ಮೊದಲ ಚಿತ್ರ ಕೈ ಕೊಟ್ಟರೂ ನಿಕಿತಾ ನಾರಾಯಣ್‍ರನ್ನು ಗಾಂಧಿನಗರ ಕೈ ಬಿಟ್ಟಿಲ್ಲ ಎನ್ನುವುದಕ್ಕೆ 'ಸಾಧು' ಹಾಗೂ 'ಜೋಗಿ ಗುಡ್ಡ' ಚಿತ್ರಗಳೇ ಸಾಕ್ಷಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics