ನಾಟಿ ಕೋಳಿ ಚಿತ್ರ ಸ್ಟಿಲ್ (ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

'ನಾಟಿ ಕೋಳಿ' ರಾಗಿಣಿ ವಿರುದ್ಧ ವಂಚನೆ ಕೇಸ್ ದಾಖಲು

ಸ್ಯಾಂಡಲ್‌ವುಡ್‌ನ‌ ಹಾಟ್‌ ನಟಿ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ವಿರುದ್ಧ 'ನಾಟಿ ಕೋಳಿ' ಚಿತ್ರದ ನಿರ್ಮಾಪಕ ವೆಂಕಟೇಶ್...

ಬೆಂಗಳೂರು: ಸ್ಯಾಂಡಲ್‌ವುಡ್‌ನ‌ ಹಾಟ್‌ ನಟಿ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ವಿರುದ್ಧ 'ನಾಟಿ ಕೋಳಿ' ಚಿತ್ರದ ನಿರ್ಮಾಪಕ ವೆಂಕಟೇಶ್ ಅವರು ಮಂಗಳವಾರ ಜೆ.ಪಿನಗರ ಪೊಲೀಸ್ ಠಾಣೆಯಲ್ಲಿ ವಂಚನೆ ದೂರು ದಾಖಲಿಸಿದ್ದಾರೆ.

ನಾಟಿ ಕೋಳಿ ಚಿತ್ರದಲ್ಲಿ ನಟಿಸಲು ಹಾಗೂ ವಸ್ತ್ರ ವಿನ್ಯಾಸಕ್ಕಾಗಿ 16.30 ಲಕ್ಷ ಮುಂಗಡ ಹಣ ಪಡೆದಿದ್ದ ನಟಿ ರಾಗಿಣಿ, ಚಿತ್ರದಿಂದ ಹಿಂದೆ ಸರಿದ ನಂತರ ಹಣ ವಾಪಸ್ ನೀಡುತ್ತಿಲ್ಲ ಎಂದು ಆರೋಪಿಸಿ ವೆಂಕಟೇಶ್ ಅವರು ದೂರು ನೀಡಿದ್ದಾರೆ.

ಹಣ ಹಿಂದಿರುಗಿಸುವಂತೆ ಹಲವು ಬಾರಿ ಕೇಳಿಕೊಂಡರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಹಣ ನೀಡದೆ ಸತಾಯಿಸುತ್ತಿರುವ ರಾಗಿಣಿಯವರು ಬೇಕಾದರೆ ಮತ್ತೊಂದು ಚಿತ್ರದಲ್ಲಿ ನಟಿಸುತ್ತೇನೆ. ಹಣ ಹಿಂದಿರುಗಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ನಾನು ಮತ್ತೊಂದು ಚಿತ್ರ ನಿರ್ಮಾಣ ಮಾಡುವುದಿಲ್ಲ. ನನಗೆ ನಾನು ಕೊಟ್ಟಿರುವ ಹಣ ವಾಪಸ್ ಬೇಕು ಎಂದು ನಿರ್ಮಾಪಕ ಆಗ್ರಹಿಸಿದ್ದಾರೆ.

ನಿರ್ಮಾಪಕ ವೆಂಕಟೇಶ್ ಅವರು ಈ ಹಿಂದೆ ರಾಗಿಣಿಯಿಂದ ಹಣ ವಾಪಸ್ ಕೊಡಿಸುವಂತೆ ಚಲನಚಿತ್ರ ವಾಣಿಜ್ಯ ಮಂಡಳಿಗೂ ದೂರು ನೀಡಿದ್ದರು.

ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ವೆಂಕಟೇಶ್ ಅವರು, ನನ್ನ ದುಡ್ಡು ನನಗೆ ಕೊಡಲು ರಾಗಿಣಿಗೆ ಏನು ನೋವು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ನನ್ನಿಂದ ಪಡೆದ ಹಣ ವಾಪಸ್ ಕೊಡದೆ ರಾಗಿಣಿ ವಂಚಿಸುತ್ತಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಕಲಾವಿದರ ಸಂಘಕ್ಕೂ ದೂರು ನೀಡಿದ್ದೆ. ಆದರೂ ಯಾವುದೇ ಪ್ರಯೋಜನ ಆಗಿಲ್ಲ ಹೀಗಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Geneva ಸಭೆಯಲ್ಲಿ ಭಾರತದ ವಿರುದ್ಧ ಟೀಕೆ; ‘ರಾಜಕೀಯ ಪ್ರೇರಿತ ಹೇಳಿಕೆಗಳ ಒಪ್ಪಲ್ಲ’ ಎಂದ MEA, ವಿಶ್ವಸಂಸ್ಥೆ ಸಮಿತಿ ವಿರುದ್ಧ ಕಿಡಿ..!

'ವಿರೋಧವಿದ್ದರೂ ಮೋಹನ್ ಭಾಗವತ್ ಅಮೆರಿಕಕ್ಕೆ ಯಾಕೆ ಹೋದ್ರು? ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ನಾನಾ ಪಟೋಲೆ ಪ್ರಶ್ನೆ!

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

'ಟಾಕ್ಸಿಕ್' ಸಿನಿಮಾ ವಿರುದ್ಧ ಸುಳ್ಳು ಮಾಹಿತಿ ಪ್ರಕಟಿಸದಂತೆ ಕೋರ್ಟ್ ತಡೆಯಾಜ್ಞೆ!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!