ಸಿನಿಮಾ ಸುದ್ದಿ

ಹಾಟ್ ಅವತಾರದಲ್ಲಿ ತೇಜಸ್ವಿನಿ

Vishwanath S
ಸ್ಯಾಂಡಲ್ ವುಡ್ ನಟಿ ತೇಜಸ್ವಿನಿ ಮೊದಲ ಬಾರಿಗೆ ಹೊಸ ಲುಕ್‍ನಲ್ಲಿ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದ್ದಾರೆ. 
ಈ ಹಿಂದೆ 'ಮಸಣದ ಮಕ್ಕಳು' ಎನ್ನುವ ಮಕ್ಕಳ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿಯಾಗಿ, ಈಗಾಗಲೇ ಹಲವು ಚಿತ್ರಗಳಲ್ಲಿ ನಟಿಸಿರುವ ತಾನಿಷ್ಕಾ ಅಲಿಯಾಸ್ ತೇಜಸ್ವಿನಿ ಪ್ರಕಾಶ್, ಕನ್ನಡದ ಸಿನಿರಸಿಕರಿಗೆ ಅಪರಿಚಿತರೇನಲ್ಲ. ತೀರಾ ಇತ್ತೀಚೆಗೆ `ಗೂಳಿಹಟ್ಟಿ' ಚಿತ್ರದಲ್ಲೂ ನಾಯಕಿ ಆಗಿದ್ದರು. ಆದರೆ ಇಲ್ಲಿಯ ತನಕ ಇವರು ಮೈ ತುಂಬಾ ಬಟ್ಟೆ ತೊಟ್ಟು ಹೋಮ್ಲಿ ಕ್ಯಾರೆಕ್ಟರ್‍ಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. 
ಈಗ ಇದೇ ಮೊದಲ ಬಾರಿಗೆ 'ನಿತ್ಯ ಜೊತೆ ಸತ್ಯ' ಚಿತ್ರದ ಮೂಲಕ ಹಾಟ್ ಅವತಾರ ತಾಳುತ್ತಿದ್ದಾರೆ! ಈಗಷ್ಟೇ ಈ ಚಿತ್ರದ ಫ್ರೋಮೊ ಮತ್ತು ಹಾಡುಗಳ ಆಡಿಯೋ ಸೀಡಿ ಹೊರಬಂದಿದ್ದು, ತೇಜಸ್ವಿನಿಯ ಹಾಟ್‍ಲುಕ್ ಇಲ್ಲಿ ಪಡ್ಡೆಗಳ ಕಣ್ಣು ಕುಕ್ಕುವಂತಿದೆ. ಬೆಡ್‍ರೂಂ ಹಾಡಿನ ಸನ್ನಿವೇಶಗಳಲ್ಲಂತೂ ಮೊಣಕಾಲು ಕಾಣುವ ಮಿನಿಸ್ಕರ್ಟ್ ತೊಟ್ಟು ನಾಯಕ ಮನೀಶ್ ಬಾಬು ಜತೆ ಹಸಿ ಹಸಿಯಾಗಿ ಕಾಣಿಸಿಕೊಂಡಿದ್ದಾರೆ.
SCROLL FOR NEXT