ನಟಿ ಸುಮನ್ ರಂಗನಾಥನ್ 
ಸಿನಿಮಾ ಸುದ್ದಿ

'ನೀರ್ ದೋಸೆ' ಸಿನೆಮಾಗೆ ಸುಮನ್ ಅವರ ಶಾಸ್ತ್ರೀಯ ನೃತ್ಯ

ಜಗ್ಗೇಶ್, ದತ್ತಣ್ಣ ಮತ್ತು ಹರಿಪ್ರಿಯ ಜೊತೆಗೆ ವಿಜಯ್ ಪ್ರಸಾದ್ ಅವರ 'ನೀರ್ ದೋಸೆ' ಸಿನೆಮಾದಲ್ಲಿ ನಟಿ ಸುಮನ್ ರಂಗನಾಥನ್ ಶಾಸ್ತ್ರೀಯ ನೃತ್ಯಗಾರ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಬೆಂಗಳೂರು: ಜಗ್ಗೇಶ್, ದತ್ತಣ್ಣ ಮತ್ತು ಹರಿಪ್ರಿಯ ಜೊತೆಗೆ ವಿಜಯ್ ಪ್ರಸಾದ್ ಅವರ 'ನೀರ್ ದೋಸೆ' ಸಿನೆಮಾದಲ್ಲಿ ನಟಿ ಸುಮನ್ ರಂಗನಾಥನ್ ಶಾಸ್ತ್ರೀಯ ನೃತ್ಯಗಾರ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಸಿನೆಮಾದಲ್ಲಿ ಸುಮನ್ ಅವರ ಮೊದಲ ನೋಟ ಹಂಚಿಕೊಂಡ ವಿಜಯ್ ಪ್ರಸಾದ್ "ಮೂಲ ನಕ್ಷತ್ರದಲ್ಲಿ ಹುಟ್ಟಿರುವ ಮಧ್ಯಮ ವರ್ಗದ ಮಹಿಳೆ ಶ್ರದ್ಧಾಮಣಿಯ ಪಾತ್ರವನ್ನು ಸುಮನ್ ನಿರ್ವಹಿಸಿದ್ದಾರೆ. ಈ ನಕ್ಷತ್ರದಲ್ಲಿ ಹುಟ್ಟಿದವರ ನಡುವೆ ಇರುವ ನಂಬಿಕೆಯೆಂದರೆ ಇವರು ತಂದೆಯಿಲ್ಲದ ವರನನ್ನು ವರಿಸಿಕೊಳ್ಳಬೇಕೆಂಬುದು. ನಂತರ ಅವರು ಜಗ್ಗೇಶ್ ಅವರನ್ನು ಭೇಟಿಯಾಗುತ್ತಾರೆ, ಹೀಗೆ ಕಥೆ ಮುಂದುವರೆಯುತ್ತದೆ" ಎನ್ನುತ್ತಾರೆ.

ನಟಿ ಸುಮನ್ ಬಗ್ಗೆ ಪ್ರಶಂಸೆ ಸುರಿಸುವ ನಿರ್ದೇಶಕ "ಮತ್ತೆ ಮತ್ತೆ ಸುಮನ್ ತಾವು ಅತ್ಯುತ್ತಮ ನಟಿ ಎಂಬುದನ್ನು ಸಾಬೀತುಪಡಿಸುತ್ತಾ ಬಂದಿದ್ದಾರೆ ಆದುದರಿಂದ ನಿರ್ದೇಶಕರಿಗೆ ಅವರ ಮೇಲೆ ಹೆಚ್ಚಿನ ಗೌರವ. ಅವರದ್ದು ಒಳ್ಳೆಯ ನಟನಾ ಕೌಶಲ್ಯ. ಅದನ್ನು ಸಿದ್ಲಿಂಗು ಮತ್ತು ನೀರ್ ದೋಸೆಯಲ್ಲಿ ನೋಡಿದ್ದೇನೆ" ಎನ್ನುತ್ತಾರೆ ವಿಜಯ್ ಪ್ರಸಾದ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

'ಜೀವನ ನರಕ, ನನ್ನ ಪಾಲಿನ ದೆವ್ವ ಸತ್ತಿದೆ, ಸತ್ತ ಮಾತ್ರಕ್ಕೆ ಪಾಪ ಕಳೆಯಲ್ಲ': ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮತ್ತೆ ಕಿಡಿ-Video

ಈ ಬಾರಿ ಮೈಸೂರು ದಸರಾ ಮತ್ತಷ್ಟು ಆಕರ್ಷಕ; 146 ಕಿ.ಮೀ. ದೀಪಾಲಂಕಾರ; 3,500 ಡ್ರೋನ್‌ಗಳ ಪ್ರದರ್ಶನ

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೇತಮ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ