'ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ' ಸಿನೆಮಾದಲ್ಲಿ ಪ್ರಿಯಾಮಣಿ ಜೊತೆಗೆ ಕೋಮಲ್ 
ಸಿನಿಮಾ ಸುದ್ದಿ

'ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ': ಟ್ರೇಲರ್ ಹಿಟ್; ಮೋಡಿ ಮಾಡಲಿದ್ದಾರೆಯೇ ಕೋಮಲ್?

ಹಾಸ್ಯನಟನಿಂದ ಪೂರ್ಣಪ್ರಮಾಣದ ನಾಯಕನಟನಾಗಿ ಹೊರಹೊಮ್ಮಿರುವ ಕೋಮಲ್ ಅವರಿಗೆ ಈ ವರ್ಷ ಅವರು ನಟಿಸಿದ ಸಿನೆಮಾಗಳು ಅದೇಕೋ ಕೈಹಿಡಿಯಲಿಲ್ಲ.

ಬೆಂಗಳೂರು: ಹಾಸ್ಯನಟನಿಂದ ಪೂರ್ಣಪ್ರಮಾಣದ ನಾಯಕನಟನಾಗಿ ಹೊರಹೊಮ್ಮಿರುವ ಕೋಮಲ್ ಅವರಿಗೆ ಈ ವರ್ಷ ಅವರು ನಟಿಸಿದ ಸಿನೆಮಾಗಳು ಅದೇಕೋ ಕೈಹಿಡಿಯಲಿಲ್ಲ. ಈಗ ಮತ್ತೆ ಆ ಕಾಮಿಡಿ ಟಚ್ ನೀಡಲು ಹಿಂದಿರುಗಿದ್ದಾರೆ. 'ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ' ಸಿನೆಮಾದ ಟ್ರೇಲರ್ ಜನಪ್ರಿಯವಾಗಿದ್ದು ಕೋಮಲ್ ಹರ್ಷ ವ್ಯಕ್ತಪಡಿಸಿದ್ದಾರೆ. "ಸಾಮಾನ್ಯವಾಗಿ ನನ್ನ ಸಿನೆಮಾದ ಹಾಡುಗಳು ವೈರಲ್ ಆಗುತ್ತವೆ. ಆದರೆ ಮೊದಲ ಬಾರಿಗೆ ಟ್ರೇಲರ್ ಜನಪ್ರಿಯವಾಗಿದ್ದು ೨ ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಇದು ತಿಳಿಸುತ್ತದೆ ಜನ ಸಿನೆಮಾದಲ್ಲಿನ ಹಾಸ್ಯ ಇಷ್ಟಪಟ್ಟಿದ್ದಾರೆ" ಎನ್ನುತ್ತಾರೆ ಕೋಮಲ್.

ಕೋಮಲ್ ಸಿನೆಮಾಗೆ ಹಾಸ್ಯವನ್ನು ತಂದಿದ್ದರೆ, ನಿರ್ದೇಶಕ ಶ್ರೀನಿವಾಸ್ ರಾಜು ಮೊದಲ ಬಾರಿಗೆ ಹಾಸ್ಯ ಮತ್ತು ಹಾರರ್ ಮಿಶ್ರಣದ ಸಿನೆಮಾ ನಿರ್ದೇಶಿಸಿದ್ದಾರೆ. "ನಿರ್ದೇಶಕರು ಸ್ಕ್ರಿಪ್ಟ್ ನಲ್ಲಿ ಹಾಸ್ಯ ಮತ್ತು ಹಾರರ್ ಬೆರಸಿದ್ದಾರೆ. ಇದು ವಿಶೇಷ ಮತ್ತು ಕಷ್ಟಕರವಾದ ಮಿಶ್ರಣ, ಏಕೆಂದರೆ ಪ್ರೇಕ್ಷನನ್ನು ಭಯಪಡಿಸಬೇಕು ಜೊತೆಗೆ ನಗಿಸಬೇಕು" ಎನ್ನುತ್ತಾರೆ ಕೋಮಲ್.

ಸಿನೆಮಾದಲ್ಲಿ ಕೋಮಲ್ ಜೊತೆಗೆ ಪ್ರಿಯಾಮಣಿ ನಟಿಸಿರುವುದು ವಿಶೇಷ. ಇಲ್ಲಿದೆ ಟ್ರೇಲರ್ ನೀವೂ ನೋಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

ಹಿರಿಯೂರು ಬಳಿ ಸಮರ್ಥ್ ಶಾಮನೂರು ಕಾರು ಅಪಘಾತ: ಕಾಂಗ್ರೆಸ್ ಶಾಸಕ ಅಪಾಯದಿಂದ ಪಾರು!

20 TMC ನಾಯಕರ ಅನರ್ಹತೆ ಪ್ರಕರಣ: ಅಭಿಷೇಕ್‌ ಬ್ಯಾನರ್ಜಿ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್‌ ಅಸ್ತು; ಬಂಡಾಯ ಸಂಸದರಿಗೆ Notice ಜಾರಿ..!

ಶ್ರೀಶೈಲ: ಹೋಟೆಲ್‌ನಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ; ಕಾರಣ ನಿಗೂಢ

"ಕೇಸರಿ ಧರಿಸುವ ಯೋಗ ಗುರು ಸಭ್ಯತೆಯ ಎಲ್ಲಾ ಮಿತಿಗಳನ್ನು ಮೀರಿದ್ದಾರೆ": ಬಾಬಾ ರಾಮ್‌ದೇವ್ ವಿರುದ್ಧ ಕಂಗನಾ ಮತ್ತೆ ಕಿಡಿ