ರಾಮ್ ಗೋಪಾಲ್ ವರ್ಮಾ 
ಸಿನಿಮಾ ಸುದ್ದಿ

ಕಿಲ್ಲಿಂಗ್ ವೀರಪ್ಪನ್ ಟ್ರೇಲರ್ ಹಿಟ್; ಆರ್ ಜಿ ವಿ ಗೆ ಬಾಲಿವುಡ್ ಕರೆ?

ರಾಮ್ ಗೋಪಾಲ್ ವರ್ಮಾ ಅವರ ಮುಂದಿನ ಸಿನೆಮಾ 'ಕಿಲ್ಲಿಂಗ್ ವೀರಪ್ಪನ್'ನ ಟ್ರೇಲರ್ ಗಳು ಮತ್ತು ಪೋಸ್ಟರ್ ಗಳು ಸಿಕ್ಕಾಪಟ್ಟೆ ಹಿಟ್ ಆಗಿವೆ ಎಂಬ ಸುದ್ದಿಯೊಂದಿಗೆ,

ಬೆಂಗಳೂರು: ರಾಮ್ ಗೋಪಾಲ್ ವರ್ಮಾ ಅವರ ಮುಂದಿನ ಸಿನೆಮಾ 'ಕಿಲ್ಲಿಂಗ್ ವೀರಪ್ಪನ್'ನ ಟ್ರೇಲರ್ ಗಳು ಮತ್ತು ಪೋಸ್ಟರ್ ಗಳು ಸಿಕ್ಕಾಪಟ್ಟೆ ಹಿಟ್ ಆಗಿವೆ ಎಂಬ ಸುದ್ದಿಯೊಂದಿಗೆ, ಬಲ್ಲ ಮೂಲಗಳ ಪ್ರಕಾರ ಹಿಂದಿ ಸಿನೆಮಾಗೆ ಹಿಂದಿರುಗಲು ಅವರಿಗೆ ಕರೆ ಬಂದಿದೆಯಂತೆ.

ಕನ್ನಡದಲ್ಲಿ ತಮ್ಮ ಚೊಚ್ಚಲ ಚಿತ್ರವನ್ನು ಪ್ರಚಾರ ಮಾಡುವಲ್ಲಿ ನಿರತರಾಗಿರುವ ಆರ್ ಜಿ ವಿ ಈ ಸಿಹಿ ಸುದ್ದಿ ಆಪ್ತರಲ್ಲಿ ಹಂಚಿಕೊಂಡಿದ್ದಾರಂತೆ. "ಆರ್ ಜಿ ವಿ ಅವರೊಂದಿಗೆ ನಡೆಸಿದ ಮಾತುಕತೆಯ ಪ್ರಕಾರ, 'ಕಂಪನಿ' ಸಿನೆಮಾದ ಎರಡನೇ ಭಾಗವನ್ನು ನಿರ್ದೇಶಿಸಲು ರಿಲಾಯನ್ಸ್ ಸಂಸ್ಥೆ ಅವಕಾಶ ನೀಡಿದೆಯಂತೆ" ಎಂದು ಮೂಲಗಳು ತಿಳಿಸಿವೆ.

ಕಿಲ್ಲಿಂಗ್ ವೀರಪ್ಪನ್ ಆರ್ ಜಿ ವಿ ಅವರಿಗೆ ಬಾಲಿವುಡ್ ಗೆ ಹಿಂದಿರುಗಲು ಮೆಟ್ಟಿಲಾಗುತ್ತದೆ ಎಂದು ಹಲವು ಸಿನೆಮಾ ಪಂಡಿತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರೆ ಇನ್ನೂ ಹಲವರು ಇದು ನಟ ಶಿವರಾಜ್ ಕುಮಾರ್ ಅವರಿಗೆ ಅತಿ ದೊಡ್ಡ ಬ್ರೇಕ್ ನೀಡಲಿದೆ ಎನ್ನುತ್ತಿದ್ದಾರೆ.

"ಆರ್ ಜಿ ವಿ 'ಕಿಲ್ಲಿಂಗ್ ವೀರಪ್ಪನ್' ಸಿನೆಮಾದ ನಿರ್ಮಾಪಕರ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ಗೆ ಹಿಂದಿರುಗಲು 'ಕಿಲ್ಲಿಂಗ್ ವೀರಪ್ಪನ್' ಮತ್ತು ಶಿವಣ್ಣ ಕಾರಣ ಎಂದಿದ್ದಾರೆ" ಎಂದು ಮೂಲಗಳು ತಿಳಿಸಿವೆ.

ಅಲ್ಲದೆ ರೈ ಒಡಗೂಡಿ ಮತ್ತೊಂದು ಕನ್ನಡ ಭೂಗತ ಸಿನೆಮಾ ನಿರ್ದೇಶಿಸುತ್ತಿದ್ದು, ಅದರಲ್ಲೂ ಕೂಡ ಶಿವರಾಜ್ ಕುಮಾರ್ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT