ನಯನತಾರ 
ಸಿನಿಮಾ ಸುದ್ದಿ

ನಯನತಾರ ಏನಂತಾರ?

ನಯನತಾರ ಬಾಯ್ ಫ್ರೆಂಡ್ ಲಿಸ್ಟಿಗೆ ಹೊಸ ಹುಡುಗನ ಸೇರ್ಪಡೆಯಾಗಿದೆ. ಹೊಸ ಹುಡುಗನ ಹೆಸರು ಗಣೇಶ್ ವೆಂಕಟರಾಮನ್. ಕಾಲಿವುಡ್ ಅಂಗಳದಿಂದ ಬಂದಿರುವ ಈ ಗಾಳಿಸುದ್ದಿಯನ್ನು ನಂಬುವುದಾದರೆ, ಗಣೇಶ್ ಈಕೆಯ ಕೊನೆಯ ಬಾಯ್ ಫ್ರೆಂಡ್ ಆಗಲಿದ್ದಾನಂತೆ...

ನಯನತಾರ ಬಾಯ್ ಫ್ರೆಂಡ್ ಲಿಸ್ಟಿಗೆ ಹೊಸ ಹುಡುಗನ ಸೇರ್ಪಡೆಯಾಗಿದೆ. ಹೊಸ ಹುಡುಗನ ಹೆಸರು ಗಣೇಶ್ ವೆಂಕಟರಾಮನ್. ಕಾಲಿವುಡ್ ಅಂಗಳದಿಂದ ಬಂದಿರುವ ಈ ಗಾಳಿಸುದ್ದಿಯನ್ನು ನಂಬುವುದಾದರೆ, ಗಣೇಶ್ ಈಕೆಯ ಕೊನೆಯ ಬಾಯ್ ಫ್ರೆಂಡ್ ಆಗಲಿದ್ದಾನಂತೆ.

ಅತ್ಯಂತ ಚರ್ಚಿತವಾಗಿದ್ದ ನಟ ಸಿಂಬು ಮತ್ತು ನಯನತಾರ ನಡುವಣ ಅಫೇರು ಇದ್ದಕ್ಕಿದ್ದಂತೆ ಮುರಿದುಬಿದ್ದಾಗ ಅಭಿಮಾನಿಗಳು ಸಿಂಬುವನ್ನು ವಿಲನ್ನಂತೆ ಕಂಡಿದ್ದವು. ಅವರಿಬ್ಬರ
ಅಧರಚುಂಬನ ಫೆಟೋಗಳೂ ಇಂಟರ್ನೆಟ್ಟಿನಲ್ಲಿ ಹರಿದಾಡಿದ್ದವು. ಆ ನಂತರ ಇಂಡಿಯನ್ ಮೈಕೆಲ್ ಜಾಕ್ಸನ್ ಪ್ರಭುದೇವಾನನ್ನು ಮದುವೆಯಾಗ್ತೀನಿ ಎಂದು ಹೇಳಿಕೆ ಕೊಟ್ಟು ಜೊತೆ ಓಡಾಡತೊಡಗಿದಾಗ, ಅಭಿಮಾನಿಗಳು ಅದಕ್ಕೂ ಜೈ ಅಂದಿದ್ದರು.

ಆದರೆ ಪ್ರಭುದೇವಾಗೆ ಕಾರಣ ನೀಡದೇ ಸಂಬಂಧದಿಂದ ಹೊರಬಂದಿದ್ದ ನಯನತಾರ ಈಗ ಮೂರಕ್ಕೆ ಮುಕ್ತಾಯ ಎಂಬಂತೆ ಗಣೇಶ್ ಹಿಂದೆ ಬಿದ್ದಿದ್ದಾಳೆ. ಜಯಂ ರವಿ ಜೊತೆ ನಟಿಸುತ್ತಿರುವ ಹೊಸ ಚಿತ್ರದಲ್ಲಿ ಗಣೇಶ್ ಈಕೆಯ ಗೆಳೆಯನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಹಳೇ ಬಾಯ್ ಫ್ರೆಂಡ್ ಸಿಂಬು-ಹನ್ಸಿಕಾ ಅಫೇರ್ ನೋಡಿ ಹೊಟ್ಟೆ  ಉರಿಯಿಂದ ನಯನತಾರ ಅರ್ಜೆಂಟಾಗಿ ಒಬ್ಬ ಬಾಯ್ ಫ್ರೆಂಡ್‍ನನ್ನು ಹುಡುಕಿಕೊಂಡಿದ್ದಾಳೆಂದು ಕಾಲಿವುಡ್ ಕುಹಕವಾಡುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

IPL 2026: MI vs RCB; ವಾಂಖೆಡೆ ಕ್ರೀಡಾಂಗಣದಲ್ಲಿ ಇತಿಹಾಸ ಬರೆದ ಬೆಂಗಳೂರು, ಅತ್ಯಧಿಕ ಮೊತ್ತ!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

SCROLL FOR NEXT