ನಟ ದರ್ಶನ್ 
ಸಿನಿಮಾ ಸುದ್ದಿ

'ಜಗ್ಗು ದಾದಾ'ನಾಗಿ ದರ್ಶನ್; ಅಮ್ಮನಾಗಿ ಊರ್ವಶಿ

ವಿರಾಟ್ ಮತ್ತು ಐರಾವತ ಮುಗಿಸುವುದರಲ್ಲೇ ಇನ್ನು ದರ್ಶನ್ ನಿರತರಾಗಿದ್ದಾರೆ, ಅಷ್ಟರಲ್ಲೇ ಈ ಬಹು ಬೇಡಿಕೆಯುಳ್ಳ ನಟನಿಗೆ ಹೊಸ ಸಿನೆಮಾ

ಬೆಂಗಳೂರು: ವಿರಾಟ್ ಮತ್ತು ಐರಾವತ ಮುಗಿಸುವುದರಲ್ಲೇ ಇನ್ನು ದರ್ಶನ್ ನಿರತರಾಗಿದ್ದಾರೆ, ಅಷ್ಟರಲ್ಲೇ ಈ ಬಹು ಬೇಡಿಕೆಯುಳ್ಳ ನಟನಿಗೆ ಹೊಸ ಸಿನೆಮಾ ಸಿದ್ಧವಾಗುತ್ತಿದೆ. ನಿರ್ದೇಶಕ ರಾಘವೇಂದ್ರ ಹೆಗಡೆ, ದರ್ಶನ್ ಅಭಿನಯದ 'ಜಗ್ಗು ದಾದಾ' ನಿರ್ದೇಶನಕ್ಕೆ ಮುಂದಾಗಿದ್ದಾರೆ. ದಕ್ಷಿಣ ಭಾರತದ ಹಿರಿಯ ನಟಿ ಊರ್ವಶಿ, ದರ್ಶನ್ ಅವರ ಅಮ್ಮನ ಪಾತ್ರದಲ್ಲಿ ನಟಿಸಲಿದ್ದಾರೆ.

"ಈ ಸಿನೆಮಾದಲ್ಲಿ ಹೆಚ್ಚು ಕಾಮಿಡಿ ಟ್ರ್ಯಾಕ್ ಇರುವುದರಿಂದ, ಹಾಸ್ಯವನ್ನು ಸುಲಭವಾಗಿ ನಿಭಾಯಿಸಬಲ್ಲ ಹಿರಿಯ ನಟಿ ಬೇಕಾಗಿತ್ತು. ನಮಗೆ ಆಗ ಹೊಳೆದದ್ದು ಊರ್ವಶಿ ಅವರ ಹೆಸರು. ಈಗ ಅವರ ಹೆಸರನ್ನು ಅಂತಿಮಗೊಳಿಸಿ, ಹಾಸ್ಯಕ್ಕೆ ಹೊಂದಿಕೊಳ್ಳಬಲ್ಲ ನಟಿಯ ಶೋಧದಲ್ಲಿದ್ದೇವೆ" ಎನ್ನುತ್ತಾರೆ ನಿರ್ದೇಶಕ.

ರವಿಶಂಕರ್, ಶರತ್ ಲೋಹಿತಾಶ್ವ ಮತ್ತು ಬುಲೆಟ್ ಪ್ರಕಾಶ್ ಕೂಡ ಸಿನೆಮಾದಲ್ಲಿ ನಟಿಸಲಿದ್ದಾರಂತೆ. "ಜಗ್ಗು ದಾದಾದಲ್ಲಿ ಪೋಷಕ ಪಾತ್ರಗಳನು ನಟಿಸಬಲ್ಲ ಹಲವಾರು ಹಿರಿಯ ಖ್ಯಾತ ನಟರ ಜೊತೆ ಮಾತುಕತೆ ನಡೆಸಿದ್ದೇನೆ" ಎನ್ನುತ್ತಾರೆ ರಾಘವೇಂದ್ರ.

ನಾಯಕ ನಟಿಯ ಶೋಧನೆಯ ಕಷ್ಟಕೋಟಲೆಗಳನ್ನು ವಿವರಿಸುವ ನಿರ್ದೇಶಕ "ಪ್ರೀತಿ ಪ್ರೇಮದ ದೃಶ್ಯಗಳನ್ನು ನಿಭಾಯಿಸುವುದಲ್ಲದೆ, ಹಾಸ್ಯವನ್ನು ಕೂಡ ಲೀಲಾಜಾಲವಾಗಿ ಅಭಿನಯಿಸುವ ಹಾಗೂ ಭಾವನಾತ್ಮಕ ದೃಶ್ಯಗಳನ್ನು ಕೂಡ ನಿಭಾಯಿಸಬಲ್ಲ ನಟಿ ಬೇಕು. ಸಮಯ ಹೆಚ್ಚು ತೆಗೆದುಕೊಂಡರೂ, ಸರಿಯಾಗಿ ಹೊಂದುಕೊಳ್ಳುವ ನಟಿಯನ್ನೇ ಆಯ್ಕೆ ಮಾಡುತ್ತೇವೆ" ಎಂದಿದ್ದಾರೆ ನಿರ್ದೇಶಕ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

SCROLL FOR NEXT