ನಟ ದರ್ಶನ್ 
ಸಿನಿಮಾ ಸುದ್ದಿ

ಗಣೇಶ್ 'ಬುಗುರಿ'ಗೆ ದರ್ಶನ್ ಕಂಠ

ನಟ ದರ್ಶನ್ ಮತ್ತು ಗಣೇಶ್ ಇಲ್ಲಿಯವರೆಗೂ ಒಟ್ಟಿಗೆ ನಟಿಸಿಲ್ಲವಾದರೂ ಈಗ ದರ್ಶನ್, ಗಣೇಶ್ ಅವರ ೨೫ನೆ ಸಿನೆಮಾ 'ಬುಗುರಿ'ಗೆ ಕಂಠದಾನ ಮಾಡಿದ್ದಾರೆ.

ಬೆಂಗಳೂರು: ನಟ ದರ್ಶನ್ ಮತ್ತು ಗಣೇಶ್ ಇಲ್ಲಿಯವರೆಗೂ ಒಟ್ಟಿಗೆ ನಟಿಸಿಲ್ಲವಾದರೂ ಈಗ ದರ್ಶನ್, ಗಣೇಶ್ ಅವರ ೨೫ನೆ ಸಿನೆಮಾ 'ಬುಗುರಿ'ಗೆ ಕಂಠದಾನ ಮಾಡಿದ್ದಾರೆ. ಸಿನೆಮಾದ ಅಂತ್ಯಕ್ಕೆ ದರ್ಶನ್ ಅವರು ನಿರೂಪಕನಾಗಿ ತಮ್ಮ ಕಂಠದಲ್ಲಿ ಪ್ರೀತಿ ಮತ್ತು ಸಾಧನೆಯ ಬಗ್ಗೆ ಮಾತನಾಡಲಿದ್ದಾರಂತೆ.

ನಿರ್ದೇಶಕ ಎಂ ಡಿ ಶ್ರೀಧರ್ ತಿಳಿಸುವ ಹಾಗೆ "ನನ್ನದು ಮತ್ತು ತೂಗೂದೀಪ ಕುಟುಂಬದ ಗೆಳೆತನ ಬಹಳ ಹಿಂದಿನದ್ದು. ನಾನು ದರ್ಶನ್ ಅವರ ಪೋಕರಿ ಮತ್ತು ಬುಲ್ ಬುಲ್ ನಿರ್ದೇಶಿಸಿದ್ದೇನೆ. ಗಣೇಶ್ ಅವರ ೨೫ನೆ ಚಿತ್ರಕ್ಕೆ ಮೊದಲ ಬಾರಿಗೆ ನಿರ್ಮಾಣಕ್ಕೂ ಇಳಿದಿದ್ದು ಕಂಠದಾನದ ಬಗ್ಗೆ ಚಿಂತಿಸಿದಾಗ ಮೊದಲು ಹೊಳೆದದ್ದು ದರ್ಶನ್. ಅವರಿಗೆ ನನ್ನ ಆಸೆ ತಿಳಿಸಿದೆ. ಅವರು ತಕ್ಷಣ ಒಪ್ಪಿಕೊಂಡರು. ಇದು ಸಾಧ್ಯವಾದದ್ದು ನಬ್ಬಿಬ್ಬರ ನಡುವೆ ಇರುವ ಉತ್ತಮ ಬಾಂಧವ್ಯದಿಂದ. ಅವರ ಕಂಠದಲ್ಲಿ, ಸಾಧನೆ ಮತ್ತು ಪ್ರೀತಿ ಇವುಗಳ ಆದ್ಯತೆ ಬಗ್ಗೆ ಅವರು ಸಂದೇಶ ನೀಡಲಿದ್ದಾರೆ" ಎನ್ನುತ್ತಾರೆ.

ಸಿನೆಮಾ ಆಗಲೇ ಸಿದ್ಧವಾಗಿದ್ದು ತೂಗುದೀಪ ವಿತರಕ ಸಂಸ್ಥೆಯಡಿ ವಿತರಣೆಯಾಗಲಿದೆಯಂತೆ. ಜುಲೈ ಕೊನೆಯ ಭಾಗ ಅಥವಾ ಆಗಸ್ಟ್ ಮೊದಲ ಭಾಗದಲ್ಲಿ ಸಿನೆಮಾ ಬಿಡುಗಡೆಯಾಗಲಿದೆ ಎನ್ನುತ್ತಾರೆ ಎಂ ಡಿ ಶ್ರೀಧರ್. ಗಣೇಶ್ ಜೊತೆ 'ಬುಗುರಿ'ಯಲ್ಲಿ ಎರಿಕಾ ಫರ್ನಾಂಡಿಸ್ ಮತ್ತು ರಿಚಾ ಪಾಣಿ ಮುಖ್ಯ ಪಾತ್ರಧಾರಿಗಳು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!