ಸಂಗೀತ ಬ್ರಹ್ಮ ಇಳಯರಾಜ 
ಸಿನಿಮಾ ಸುದ್ದಿ

'ಕಾಕಾ ಮುಟ್ಟೈ' ನಿರ್ದೇಶಕನ ಮುಂದಿನ ಚಿತ್ರಕ್ಕೆಇಳಯರಾಜ ಸಂಗೀತ

ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು 'ಕಾಕ ಮುಟ್ಟೈ' ಖ್ಯಾತಿಯ ಎಂ ಮಣಿಕಂಠನ್ ಅವರ ಮುಂದಿನ ತಮಿಳು ಥ್ರಿಲ್ಲರ್ ಸಿನೆಮಾ 'ಕುತ್ರಮೆ ಧಂಡಾನಿ' ಸಿನೆಮಾಗೆ

ಚೆನ್ನೈ: ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು 'ಕಾಕ ಮುಟ್ಟೈ' ಖ್ಯಾತಿಯ ಎಂ ಮಣಿಕಂಠನ್ ಅವರ ಮುಂದಿನ ತಮಿಳು ಥ್ರಿಲ್ಲರ್ ಸಿನೆಮಾ 'ಕುತ್ರಮೆ ಧಂಡಾನಿ' ಸಿನೆಮಾಗೆ ಹಿನ್ನಲೆ ಸಂಗೀತ ಒದಗಿಸಲಿದ್ದಾರೆ. ಸದ್ಯಕ್ಕೆ ಈ ಯೋಜನೆಯ ಚಿತ್ರೀಕರಣ ಮುಗಿದಿದ್ದು ಡಬ್ಬಿಂಗ್ ನಡೆಯುತ್ತಿದೆ ಎಂದು ತಿಳಿದುಬಂದಿದೆ.

"ಇಳಯರಾಜ ಸರ್ ಹಿನ್ನಲೆ ಸಂಗೀತ ನೀಡಲಿದ್ದಾರೆ. ಅವರು ಸದ್ಯಕ್ಕೆ ಮತ್ತೊಂದು ಯೋಜನೆಯಲ್ಲಿ ನಿರತರಾಗಿದ್ದಾರೆ ಅದು ಸಂಪೂರ್ಣವಾದ ಮೇಲೆ ನಮ್ಮ ಸಿನೆಮಾದ ಕೆಲಸ ಪ್ರಾರಂಭಿಸಲಿದ್ದಾರೆ" ಎಂದು ಮನಿಕಂಠನ್ ತಿಳಿಸಿದ್ದಾರೆ.

ಇದಕ್ಕೂ ಮುಂಚೆ ಸಿನೆಮಾದ ಶೀರ್ಷಿಕೆಯನ್ನು 'ಕುತ್ರಮಂ ಧಂಢನಾಯಂ' ಎಂದು ಹೆಸರಿಸಲಾಗಿತ್ತು.

"ಇಳಯರಾಜ ಸರ್ ಅವರ ಸೂಚನೆಯಂತೆ ಶೀರ್ಷಿಕೆಯನ್ನು 'ಕುತ್ರಮೆ ಧಂಡಾನಿ' ಎಂದು ಬದಲಿಸಿದ್ದೇವೆ" ಎಂದು ನಿರ್ದೇಶಕ ತಿಳಿಸಿದ್ದಾರೆ.

ವಿದಾರ್ಥ್ ಮತ್ತು ಪೂಜಾ ದೇವಾರಿಯಾ ನಟಿಸಲಿರುವ ಈ ಸಿನೆಮಾದಲ್ಲಿ ಯಾವುದೇ ಹಾಡುಗಳಿರುವುದಿಲ್ಲವಂತೆ.

"ಕಥೆ ಜನರನ್ನು ಒಳಗೊಳ್ಳಬಹುದಾದರೆ, ಸಿನೆಮಾದಲ್ಲಿ ಹಾಡುಗಳ ಅವಶ್ಯಕತೆ ಇದೆ ಎಂದೆನಿಸುವುದಿಲ್ಲ ನನಗೆ. ಪ್ರೇಕ್ಷಕರು ನೀಡಿದ ಪ್ರತಿಕ್ರಿಯೆಯಿಂದ ನಾನು ಈ ತೀರ್ಮಾನಕ್ಕೆ ಬಂದಿದ್ದೇನೆ. ಈ ಪ್ರೇಕ್ಷಕರು ಇತ್ತೀಚಿನ ತಮಿಳು ಸಿನೆಮಾಳಲ್ಲಿ ಹಾಡುಗಳು ಕಥೆಯ ಓಘಕ್ಕೆ ತಡೆಯೊಡ್ಡುತ್ತವೆ ಎಂದು ನನಗೆ ತಿಳಿಸಿದ್ದಾರೆ" ಎನ್ನುತ್ತಾರೆ ನಿರ್ದೇಶಕ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್