'ಬುಲೆಟ್ ಬಸ್ಯಾ' ಸಿನೆಮಾದ ಒಂದು ದೃಶ್ಯ 
ಸಿನಿಮಾ ಸುದ್ದಿ

ಒಂದು ಸಾಲಿನ ಕಥೆಯೊಂದು 'ಬುಲೆಟ್ ಬಸ್ಯಾ' ಆದ ಕಥೆ

ಕನ್ನಡ ಸಿನೆಮಾರಂಗದಲ್ಲಿ ತಳವೂರಲು ೧೦೦ ಸಿನೆಮಗಳಿಗಿಂತಲೂ ಹೆಚ್ಚು ಸಿನೆಮಾಗಳಲ್ಲಿ ಮಣ್ಣು ಹೊತ್ತ ಹಾಸ್ಯ ನಟ ಶರಣ್ ಇಂದು ಬಹುಬೇಡಿಕೆಯುಳ್ಳ ನಾಯಕನಟ.

ಬೆಂಗಳೂರು: ಕನ್ನಡ ಸಿನೆಮಾರಂಗದಲ್ಲಿ ತಳವೂರಲು ೧೦೦ ಸಿನೆಮಗಳಿಗಿಂತಲೂ ಹೆಚ್ಚು ಸಿನೆಮಾಗಳಲ್ಲಿ ಮಣ್ಣು ಹೊತ್ತ ಹಾಸ್ಯ ನಟ ಶರಣ್ ಇಂದು ಬಹುಬೇಡಿಕೆಯುಳ್ಳ ನಾಯಕನಟ. ಇವರ 'ಬುಲೆಟ್ ಬಸ್ಯಾ' ನಾಳೆ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಒಂದು ಸಾಲಿನ ಕಥೆ ಸಿನೆಮಾ ಆಗಿ ಬೆಳೆದಿದ್ದನು ಬಿಚ್ಚಿಡುವ ಶರಣ್ ಕಥೆಯ ಅಭಿವೃದ್ಧಿಯ ಹಿಂದೆ ಹಲವಾರು ಜನರ ಪರಿಶ್ರಮ ಇದೆ ಎನ್ನುತ್ತಾರೆ. "ನಿರ್ಮಾಪಕ ಜಯಣ್ಣ ಅವರಿಗೆ ಒಂದು ಸಾಲಿನ ಕಥೆ ಹೇಳಿದಾಗ ಅವರು ಕೂಡಲೆ ಒಪ್ಪಿಕೊಂಡರು. ಆದರೆ ಸಿನೆಮಾ ಕಥೆ ನನ್ನದೆಂದು ನಾನು ಹೇಳುವುದಿಲ್ಲ ನಾನು ಸಿನೆಮಾಗೆ ಎಂದೆಂದೂ ಬರೆದಿಲ್ಲ. ನನ್ನ ಜೊತೆ ಹಲವರು ಭಾಗಿಯಾಗಿದ್ದರು" ಎನ್ನುತ್ತಾರೆ ಶರಣ್.

ಈ ಕಥೆ ಬರೆಯಬೇಕು ಎಂದೇನು ಅನಿಸದೆ ಇದ್ದರು, ಕಥೆ ಅವರ ತಲೆಯಲ್ಲಿ ಗಿರಕಿ ಹೊಡೆಯುತ್ತಿತ್ತಂತೆ. "ನಾನು ವಿಕ್ಟರಿ ಸಿನೆಮಾ ಮಾಡುವಾಗ, ಕಥೆಯೊಂದನ್ನು ಸಿನೆಮಾ ಮಾಡುವ ಹೊಳಹು ತಲೆಗೆ ಹೊಕ್ಕಿತು. ಮೊದಲು ಥೈಲ್ಯಾಂಡಿನಲ್ಲಿ ಚಿತ್ರೀಕರಣ ಮಾಡುವಾಗ ನನ್ನ ಸಹ ನಟಿ ಅಸ್ಮಿತಾ ಸೂದ್ ಅವರಿಗೆ ಒಂದು ಸಾಲಿನ ಕಥೆ ಹೇಳಿದೆ. ಅವರ ತಕ್ಷಣ ಕೊಟ್ಟ ಪ್ರತಿಕ್ರಿಯೆ ನನಗೆ ಉತ್ತೇಜನ ನೀಡಿತು" ಎನ್ನುತ್ತಾರೆ ನಟ.

ಆಗ ಬರೆಯುವ ಅಭ್ಯಾಸದಲ್ಲಿ ತೊಡಗಿದ ಶರಣ್, ಕೆಲವು ಅಂಶಗಳನ್ನು ಪಟ್ಟಿ ಮಾಡುತ್ತಾ ಹೋದಂತೆ, ಕಥೆ ಕ್ರಮಬದ್ಧವಾಗಲ್ಲವಾದರೂ ಬೆಳೆಯುತ್ತಾ ಹೋಯಿತಂತೆ.

"ನಂತರ ಕೆಲವು ಒಳ್ಳೆಯ ಸಿನೆಮಾ ಬರಹಗಾರರೊಂದಿಗೆ ಕೂತು ಕಥಾ ಹಂದರಕ್ಕೆ ಸ್ವಲ್ಪ ಮೆರುಗು ನೀಡಿದ ನಂತರ ನಿರ್ದೇಶಕ ಜಯತೀರ್ಥ ಅವರ ಆಗಮನವಾಯಿತು" ಎನ್ನುತ್ತಾರೆ ಶರಣ್.

ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣದ ಈ ಸಿನೆಮಾಮದಲ್ಲಿ ಶರಣ್ ಕೂಡ ಒಂದು ಹಾಡು ಕೂಡ ಹಾಡಿದ್ದಾರೆ. ಹರಿಪ್ರಿಯ, ತಬಲಾ ನಾಣಿ, ರಂಗಾಯಣ ರಘು, ಗಿರಿಜಾ ಲೋಕೇಶ್, ಕುರಿ ಪ್ರತಾಪ್ ಹೀಗೆ ತಾರಾ ದಂಡೇ ಸಿನೆಮಾದಲ್ಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

SCROLL FOR NEXT