ಜುಲೈ 31ಕ್ಕೆ 'ಲೊಡ್ಡೆ' ತೆರೆಗೆ
ಸೆನ್ಸೆಷನ್ ಸ್ಟಾರ್ ಕೋಮಲ್ ಕುಮಾರ್ ಹಾಗೂ ಆಕಾಂಕ್ಷ ಪುರಿ ಅವರ ಅಭಿನಯದ...
ಸೆನ್ಸೆಷನ್ ಸ್ಟಾರ್ ಕೋಮಲ್ ಕುಮಾರ್ ಹಾಗೂ ಆಕಾಂಕ್ಷ ಪುರಿ ಅವರ ಅಭಿನಯದ ಸ್ಯಾಂಡಲ್ ವುಡ್ ನ ಕಾಮಿಡಿ, ಥ್ರಿಲರ್ 'ಲೊಡ್ಡೆ" ಸಿನಿಮಾ ಮುಂದಿನವಾರ ತೆರೆ ಕಾಣಲಿದೆ.
ಡಾ.ವಿಷ್ಣುವರ್ಧನ್ ಛಾಯೆಯಲ್ಲಿ ಮೂಡಿ ಬಂದಿರುವ ಈ ಸ್ಫೆಷಲ್ ಸಿನಿಮಾಗೆ ಎಸ್ ವಿ ಸುರೇಶ್ ಆಕ್ಷ್ಯನ್ ಕಟ್ ಹೇಳಿದ್ದು, ಜಯಂತ್ ಕಾಯ್ಕಿಣಿ ಸಾಹಿತ್ಯಕ್ಕೆ ಚಿನ್ನಿ ಚರಣ್ ಸಂಗೀತ ಸಂಯೋಜಿಸಿದ್ದಾರೆ.
ಮಂಜುನಾಥ್ ನಿರ್ಮಾಣದ 'ಲೊಡ್ಡೆ' ಚಿತ್ರದ ಹಾಡೊಂದನ್ನು ಕನ್ನಡ ಚಿತ್ರರಂಗದ ಮೇರು ನಟ ಡಾ.ವಿಷ್ಣುವರ್ಧನ್ ಅವರಿಗೆ ಅರ್ಪಿಸಲಾಗಿದೆ.
ಈಗಾಗಲೇ ಟ್ರೈಲೆರ್ ಮತ್ತು ಹಾಡುಗಳಿಂದ ಸುದ್ದಿ ಮಾಡುತ್ತಿರೋ ಲೊಡ್ಡೆ ಸಿನಿಮಾ ಜುಲೈ 31ರಂದು ಪ್ರೇಕ್ಷಕರ ಎದುರು ಬರಲಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.