ಉಪ್ಪಿ೨ ಭಿತ್ತಿಚಿತ್ರ 
ಸಿನಿಮಾ ಸುದ್ದಿ

ಸೆನ್ಸಾರ್ ಮಂಡಲಿ ಹೊಸ್ತಿಲಲ್ಲಿ ಉಪ್ಪಿ-೨; ಆಗಸ್ಟ್ ೧೫ಕ್ಕೆ ಬಿಡುಗಡೆ ಸಾಧ್ಯತೆ

ಸ್ವಾತಂತ್ರ್ಯ ದಿನಾಚರಣೆ ವೇಳೆಗೆ ಉಪ್ಪಿ-೨ ಬಿಡುಗಡೆ ಮಾಡಲು ನಿರ್ದೇಶಕ ನಟ ಉಪೇಂದ್ರ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ.

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ವೇಳೆಗೆ ಉಪ್ಪಿ-೨ ಬಿಡುಗಡೆ ಮಾಡಲು ನಿರ್ದೇಶಕ ನಟ ಉಪೇಂದ್ರ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ.

ಆಗಸ್ಟ್ ೧೫ಕ್ಕೆ ಸಿನೆಮಾ ಬಿಡುಗಡೆ ಮಾಡಲು ಸಹಕರಿಸುವಂತೆ ಈ ನಿರ್ದೇಶಕ ಸುಮಾರು ಎಂಟು ನಿರ್ಮಾಪಕ-ನಿರ್ದೇಶಕರನ್ನು ತಮ್ಮ ಸಿನೆಮಾದ ಸೆನ್ಸಾರ್ ವಿಳಂಬ ಮಾಡುವಂತೆ ಕೇಳಿಕೊಂಡಿದ್ದಾರಂತೆ. ಅವುಗಳಲ್ಲಿ ಆರ್ ಎಕ್ಸ್ ಸೂರಿ ಮತ್ತು ಕೆಂಡಸಂಪಿಗೆ ಸಿನೆಮಾಗಳು ಕೂಡ ಸೇರಿವೆ.

ಉಪ್ಪಿ-೨ ಆಡಿಯೋ ಬಿಡುಗಡೆಯಾದಾಗಿನಿಂದ, ಹಲವಾರು ವಿವಾದಗಳೊಂದಿಗೆ ಜನರ ಕುತೂಹಲ ಕೆರಳಿಸಿದೆ. ಒಳ್ಳೆಯ ಮೊತ್ತಕ್ಕೆ ವಿತರಣಾ ಹಕ್ಕುಗಳು ಮಾರಾಟವಾಗಿದೆ ಎಂದು ತಿಳಿದುಬಂದಿದೆ.

ಅಧಿಕೃತವಾಗಿ ಇನ್ನೂ ಬಹಿರಂಗವಾಗದೇ ಹೋದರೂ ಬಲ್ಲ ಮೂಲಗಳ ಪ್ರಕಾರ ಮಂಡ್ಯಾದ ಸಿನೆಮಾ ಮಂದಿರಗಳ ಮಾಲಿಕ ಶ್ರೀಕಾಂತ್ ೧೦ ಕೋಟಿಗೆ ಉಪ್ಪಿ-೨ ಸಿನೆಮಾದ ವಿತರಣಾ ಹಕ್ಕುಗಳನ್ನು ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ.

ಉಪ್ಪಿ-೨ ಸಿನೆಮಾದ ನಿರ್ಮಾಪಕಿ ಪ್ರಿಯಾಂಕ ಉಪೇಂದ್ರ. ಉಪೇಂದ್ರ ಜೊತೆಗೆ ಅಖೀವಾ ಯಾದವ್ ಮತ್ತು ಪರುಲ್ ಯಾದವ್ ಸಹ ನಟಿಯರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?