ಬೆಂಗಳೂರು: ನಿರ್ದೇಶಕ ಉಪೇಂದ್ರ ನಿರ್ದೇಶನದ, ಮತ್ತವರ ಅಭಿಮಾನಿಗಳ ಬಹುನಿರೀಕ್ಷಿತ ಚಿತ್ರ ಉಪ್ಪಿ೨ಗೆ ಸೆನ್ಸಾರ್ ಮಂಡಲಿ ಯು/ಎ ಪ್ರಮಾಣಪತ್ರ ನೀಡಿದೆ. ಸೆನ್ಸಾರ್ ಮಂಡಲಿಯ ಪ್ರಾದೇಶಿಕ ನಿರ್ದೇಶಕ ನಾಗೇಂದ್ರ ಸ್ವಾಮಿ ಇತರ ಸದಸ್ಯರೊಂದಿಗೆ ಈ ಸಿನೆಮಾ ವೀಕ್ಷಿಸಿ ಐದು ಸಣ್ಣ ಕತ್ತರಿಗಳೊಂದಿಗೆ ಹಸಿರು ನಿಶಾನೆ ತೋರಿದ್ದಾರೆ.
ಮೂಲಗಳ ಪ್ರಕಾಶ ಕೆಲವು ಹಿಂಸಾತ್ಮಕ ದೃಶ್ಯಗಳು ಹಾಗು ಒಂದೆರಡು ಸಂಭಾಷಣೆಗಳನ್ನು ಕತ್ತರಿಸಲಾಗಿದೆ.
ಉಪೇಂದ್ರ 'ಸೂಪರ್' ನಂತರ ಮತ್ತೆ ನಿರ್ದೇಶನಕ್ಕೆ ಇಳಿದಿರುವುದರಿಂದ ಇದು ಹೆಚ್ಚೆಚ್ಚು ಆಸಕ್ತಿ ಕೆರಳಿಸಿದೆ. ಅಲ್ಲದೆ ಆಡಿಯೋ ಅನಾವರಣದ ನಂತರ ಸಹ ನಟ ಜಗ್ಗೇಶ್ ಅವರೊಂದಿಗೆ ಒಂದು ಹಾಡು ವಿವಾದ ಕೂಡ ಸೃಷ್ಟಿಸಿತ್ತು.
ಸ್ವಾತಂತ್ಯ ದಿನಾಚರಣೆ ವೇಳೆಗೆ ಉಪ್ಪಿ೨ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದ್ದು ಅಧಿಕೃತ ಹೇಳಿಕೆ ಹೊರಬೀಳಬೇಕಷ್ಟೇ!