ಹಲವು ದಿನಗಳ ಮೌನದ ನಂತರ ತೆಲುಗು ಚಿತ್ರರಂಗ ಮುಂದಿನ ತಿಂಗಳಿಗೆ ಹಲವಾರು ದೊಡ್ಡ ಚಿತ್ರಗಳ ಬಿಡುಗಡೆಗೆ ಸನ್ನದ್ಧವಾಗಿದೆ. ಇತ್ತೀಚಿನ ದಿನಗಳ ದೊಡ್ಡ ಬಜೆಟ್ ಸಿನೆಮಾಗಳ ಬಿಡುಗಡೆ ಭಾರತೀಯ ಸಿನೆಮಾ ತಾರೆಯರು ಪೈಪೋಟಿಗೆ ಬಿದ್ದಿದ್ದಾರೆ.
ಜುಲೈ ೧೦ ರಂದು ೨೦೦ ಕೋಟಿಗೂ ಹೆಚ್ಚು ಮೊತ್ತದ ಬಜೆಟ್ ಸಿನೆಮ ಬಾಹುಬಲಿ ಬಿಡುಗಡೆಗೆ ಸಿದ್ಧವಾಗಿದ್ದರೆ, ಜುಲೈ ೧೭ಕ್ಕೆ ಮತ್ತೊಬ್ಬ ಖ್ಯಾತ ತೆಲುಗು ನಟ ಮಹೇಶ್ ಬಾಬು ಅವರ 'ಶ್ರೀಮಾಥುಡು' ಸಿನೆಮಾ ಮಂದಿರಗಳಿಗೆ ಅಪ್ಪಳಿಸಲಿದೆ.
ಈದ್ ದಿನ ಶ್ರೀಮಾಥುಡು ಬಿಡುಗಡೆಗೆ ಮುನ್ನಡೆಯುತ್ತಿದ್ದರೆ, ಭಾರತದ ಇತರ ಚಿತರರಂಗದ ದೊಡ್ಡ ನಟರು ಕೂಡ ಸ್ಪರ್ಧೆ ನೀಡಲಿದ್ದಾರೆ. ಕಬೀರ್ ಖಾನ್ ನಿರ್ದೇಶನದ, ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭೈಜಾನ್ ಮತ್ತು ಬಾಲಾಜಿ ಮೋಹನ್ ನಿರ್ದೇಶನದ, ಧನುಶ್ ನಟನೆಯ ಮಾರ್ರಿ ಕೂಡ ರಂಜಾನ್ ಹಬ್ಬಕ್ಕೆ ಬಿಡುಗಡೆಯಾಗಲಿರುವ ಚಿತ್ರಗಳು.
ರಂಜಾನ್ ಹಬಕ್ಕೆ ಸೆಣಸಲು ಪ್ರಭಾಸ್, ಮಹೇಶ್ ಬಾಬು, ಸಲ್ಮಾನ್ ಖಾನ್ ಮತ್ತು ಧನುಶ್ ಹುರಿಗೊಳ್ಳುತ್ತಿದ್ದಾರೆ.