ಸಿನಿಮಾ ಸುದ್ದಿ

ಕೆನಡಾದ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನಕ್ಕೆ ದರ್ಶನ್ ಪ್ರಯಾಣ

Srinivas Rao BV

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್, ಕೆನಡಾಗೆ ಹೊರಟಿದ್ದಾರಂತೆ. ಸಿನಿಮಾ ಚಿತ್ರೀಕರಣಕ್ಕಾಗಿ ಅಲ್ಲ, 11 ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಭಾಗವಹಿಸುವುದಕ್ಕಾಗಿ ದರ್ಶನ್ ಕೆನಡಾಗೆ ತೆರಳುತ್ತಿದ್ದಾರೆ.

ಜಾಗತಿಕ ಮಟ್ಟದಲ್ಲಿ ಕನ್ನಡಾ ಭಾಷೆ ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಉತ್ತೇಜಿಸಲು ಹೃದಯವಾಹಿನಿ ಕರ್ನಾಟಕ ಮತ್ತು ಕನ್ನಡ ಕಸ್ತೂರಿ ರೇಡಿಯೋ ಕೆನಡಾ ಸಹಯೋಗದಲ್ಲಿ 11 ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 80 ಕ್ಕೂ ಹೆಚ್ಚು ಗಣ್ಯರು ಭಾಗವಹಿಸಲಿದ್ದು  ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ದರ್ಶನ್ ಕಾರ್ಯಕ್ರಮದ ಕೇಂದ್ರ ಬಿಂದು ಎಂದು ಕಿರಣ್ ಭರ್ತೂರ್ ತಿಳಿಸಿದ್ದಾರೆ.

ಮಲೇಷಿಯಾ, ಸಿಂಗಪುರ, ಬಹ್ರೇನ್, ಕತಾರ್ ಮತ್ತು ದುಬೈ ಗಳಲ್ಲಿ ಈ ಹಿಂದೆ ವಿಶ್ವ ಕನ್ನಡ ಸಮ್ಮೇಳನ ನಡೆಯಲಿದೆ. ಇದೇ ಪ್ರಥಮ ಬಾರಿಗೆ ಉತ್ತರ ಅಮೇರಿಕ ಖಂಡದದಲ್ಲಿ ಸಮ್ಮೇಳನ ನಡೆಯುತ್ತಿದೆ. ಕೆನಡಾ ಗೆ ತೆರಳುವ ಬಗ್ಗೆ ಮಾಹಿತಿ ನೀಡಿರುವ ದರ್ಶನ್, ಅಮೇರಿಕ ಕನ್ನಡ ಕೂಟ ಸಂಘದಿಂದ ಆಯೋಜಿತವಾದ ಯಾವುದೇ ಕಾರ್ಯಕ್ರಮಕ್ಕೂ ಹೋಗಿರಲಿಲ್ಲ, ಅವರು ಯಾರನ್ನೇ ಆಹ್ವಾನಿಸಿದರು ಅವರೆಲ್ಲವೂ ಸಂಘಟನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಆಹ್ವಾನಿಸಿದ ವ್ಯಕ್ತಿಗಳನ್ನು ನಂತರ ಮರೆತುಬಿಡುತ್ತಿದ್ದರು. ಅಲ್ಲಿನ ಆತಿಥ್ಯ ಬಹಳ ಕಳಪೆಯಾಗಿತ್ತು ಆದ್ದರಿಂದ ಅಲ್ಲಿನ ಯಾವ ಕಾರ್ಯಕ್ರಮದಲ್ಲಿಯೂ ಭಾಗವಹಿಸುತ್ತಿರಲಿಲ್ಲ. ಈಗ ಕೆನಡಾಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ಹಿಂದೆ ದುಬೈ ಹಾಗೂ ಬಹ್ರೇನ್ ನಲ್ಲಿ ನಡೆದಿದ್ದ ಕನ್ನಡ ಸಮ್ಮೇಳನದಲ್ಲಿ ದರ್ಶನ್ ಭಾಗವಹಿಸಿದ್ದರು.  

ಕನ್ನಡ ಚಿತ್ರಗಳನ್ನು ಜಾಗತಿಕ ಮಟ್ಟದಲ್ಲಿ ಉತ್ತೇಜಿಸಲು ಶ್ರಮಿಸುತ್ತಿರುವ ರಘು ಎಂಬುವವರ ಪರಿಚಯದಿಂದ ಕೆನಡಾದಲ್ಲಿ ನಡೆಯುವ ಸಮ್ಮೇಳನದಲ್ಲಿ ಭಾಗವಹಿಸಲು ನಿರ್ಧರಿಸಿರುವುದಾಗಿ ದರ್ಶನ್ ತಿಳಿಸಿದ್ದಾರೆ. ಜೂ. 26 ರಂದು ಕೆನಡಾಗೆ ತೆರಳಲಿರುವ ದರ್ಶನ್ ಜು.3 ರಂದು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

SCROLL FOR NEXT