ಸಿನಿಮಾ ಸುದ್ದಿ

'ಕಾಕ ಮುಟ್ಟೈ'ನಲ್ಲಿ ವಕೀಲರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ; ನಿರ್ಮಾಪಕರಿಗೆ ಸಮನ್ಸ್

Guruprasad Narayana

ಚೆನ್ನೈ: ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನೆಮಾ 'ಕಾಕ ಮುಟ್ಟೈ'ನಲ್ಲಿ ವಕೀಲರ ಬಗ್ಗೆ ಆಕ್ಷೇಪಾರ್ಹ ಸಂಬಾಷಣೆ ಇದೆ ಎಂದು ವಕೀಲರ ಸಂಘ ದೂರಿರುವ ಹಿನ್ನಲೆಯಲ್ಲಿ ಮೆಟ್ರೋಪಾಲಿಟನ್ ಮೆಜೆಸ್ಟ್ರೆಟ್ ನ್ಯಾಯಾಲಯ ನಿರ್ಮಾಪಕರುಗಳಾದ ನಟ ಧನುಶ್ ಹಾಗೂ ವೆಟ್ರಿಮಾರನ್ ಮತ್ತು ನಿರ್ದೇಶಕ ಎಂ ಮಣಿಕಂಠನ್ ಅವರಿಗೆ ಸಮನ್ಸ್ ನೀಡಿ ಆಗಸ್ಟ್ ೬ ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ.

ಅಖಿಲ ಭಾರತ ವಕೀಲರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಎಸ ಮಣಿವಣ್ಣನ್ ಅವರು ದೂರಿರುವಂತೆ ಸಿನೆಮಾದಲ್ಲಿನ ಅಜ್ಜಿ ಪಾತ್ರಧಾರಿ ವಕೀಲರ ವಿರುದ್ಧ ಅವಹೇಳನ ಹೇಳಿಕೆ ನೀಡಿದ್ದಾರೆ ಎಂದಿದ್ದಾರೆ.

ಅರ್ಜಿದಾರರ ವಕೀಲ ಎಸ್ ನಮೋ ನಾರಾಯಣನ್ ಅವರ ಸಲ್ಲಿರುವ ಅರ್ಜಿಯಲ್ಲಿ, ವಕೀಲವೃತ್ತಿ ಬಹಳ ಗೌರವಯುತವಾದದ್ದು ಇದಕ್ಕೆ ನಿರ್ಮಾಪಕರು ಹಾಗೂ ನಿರ್ದೇಶಕ ಅಪಮಾನ ಎಸಗಿದ್ದಾರೆ ಎಂದು ದೂರಿದ್ದಾರೆ.

ಇಂತಹ ಸಿನೆಮಾ ದೃಶ್ಯಗಳು ಕಕ್ಷಿದಾರ ಮತ್ತು ವಕೀಲರ ನಡುವೆ ವೈರತ್ವ, ದ್ವೇಷ ಮತ್ತು ಕಹಿ ಭಾವನೆ ಹರಡುತ್ತದೆ ಎಂದು ದೂರಿರುವ ಅರ್ಜಿದಾರ ದೂರನ್ನು ಪರಿಶೀಲಿಸಿ ಆಪಾದಿತರನ್ನು ಪರೀಕ್ಷಿಸಿ,  ತನಿಖೆ ಮಾಡಿ, ನ್ಯಾಯ ನೀಡಬೇಕೆಂದು ಕೋರಿದ್ದಾರೆ.

SCROLL FOR NEXT