ಹೆಸರಿನಿಂದಲೇ ಗಮನ ಸೆಳೆದಿರುವ ವಾಟ್ಸ್ ಅಪ್ ಲವ್ ಚಿತ್ರದ ಚಿತ್ರೀಕರಣ ಅದ್ದೂರಿಯಾಗಿ ಮುಗಿದಿದೆ.
ಒಂದಿಷ್ಟು ಸಾಹಸ ದೃಶ್ಯಗಳ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಬಿಟ್ಟರೇ ಚಿತ್ರೀಕರಣ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. 51 ದಿನಗಳ ಕಾಲ ಮೂರು ಹಂತದಲ್ಲಿ ಬೆಂಗಳೂರು, ಮಡಿಕೇರಿ, ಕೋಲಾರ ಸುತ್ತಮುತ್ತ ಚಿತ್ತೀಕರಣ ನಡೆಯಿತು. ತಿಂಗಳ ಕೊನೆಯಲ್ಲಿ ಚಿತ್ರಕ್ಕೆ ಡಬ್ಬಿಂಗ್ ಮಾಡಲಾಗುವುದು. ಎಲ್ಲವೂ ಅಂದುಕೊಂಡಂತೆ ಆದರೆ, ಆಗಸ್ಟ್ ನಲ್ಲಿ ಚಿತ್ರ ತೆರೆಕಾಣಲಿದೆ.
ಲಕ್ಷ್ಣೀಕಾಂತ್ ಛಾಯಾಗ್ರಹಣ, ಬಿಆರ್ ಹೇಮಂತ್ ಕುಮಾರ್ ಸಂಗೀತ ಹಾಗೂ ಡಿಫರೆಂಟ್ ಡ್ಯಾನಿ ಸಾಹಸ ಇದೆ. ಚಿತ್ರದ ರಚನೆ ಮತ್ತು ನಿರ್ದೇಶನ ರಾಮ್. ನಾಯಕ ಜೀವಗೆ ಐಶ್ವರ್ಯ ಸಿಂಧೂಗಿ ಹಾಗೂ ಶ್ರಾವ್ಯ ಜೋಡಿಯಾಗಿದ್ದಾರೆ. ಮಮತಾ, ಮೈಸೂರು ಚಿಕ್ಕಣ್ಣ, ಶ್ರೀಕಾಂತ್, ತಿಲಕ್, ಕೆಂಪೇಗೌಡ, ಸಂಗೀತ, ಚಿತ್ರ ಶೆಣೈ, ಪಲ್ಲಕ್ಕಿ ರಾಧಾಕೃಷ್ಣ ಮತ್ತಿತರರು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.