ಹಾಸ್ಯನಟ ಚಿಕ್ಕಣ್ಣ 
ಸಿನಿಮಾ ಸುದ್ದಿ

ಚಿಕ್ಕಣ್ಣನ ಗಾನ ಬಜಾನ

ಈಗಾಗಲೇ ಹಲವಾರು ಸಿನೆಮಾಗಳಲ್ಲಿ ನಟಿಸಿ ಹಾಸ್ಯನಟನಾಗಿ ತಳವೂರಿರುವ ಚಿಕ್ಕಣ್ಣ ಈಗ ಸಿನೆಮಾವೊಂದಕ್ಕೆ ಗೀತರಚನಕಾರನಾಗಿ ಪಾದಾರ್ಪಣೆ

ಬೆಂಗಳೂರು: ಈಗಾಗಲೇ ಹಲವಾರು ಸಿನೆಮಾಗಳಲ್ಲಿ ನಟಿಸಿ ಹಾಸ್ಯನಟನಾಗಿ ತಳವೂರಿರುವ ಚಿಕ್ಕಣ್ಣ ಈಗ ಸಿನೆಮಾವೊಂದಕ್ಕೆ ಗೀತರಚನಕಾರನಾಗಿ ಪಾದಾರ್ಪಣೆ ಮಾಡಿದ್ದಾರೆ.

ಹಾಸ್ಯನಟನಾಗಿ, ನಾಯಕ ನಟನಾಗಿ, ಹಿನ್ನಲೆ ಗಾಯಕನಾಗಿ ಈಗಾಗಾಲೇ ಹೆಸರುವಾಸಿಯಾಗಿರುವ ಚಿಕ್ಕಣ್ಣ ಈಗ ಗೌಸ್ ಪೀರ್ ಅವರ 'ಶಾರ್ಪ್ ಶೂಟರ್' ಸಿನೆಮಾಗೆ ಹಾಡು ಕೂಡ ಬರೆಯುತ್ತಿದ್ದಾರೆ. ಈ ಸಿನೆಮಾದಲ್ಲಿ ನಟ ದಿಗಂತ್ ಕೂಡ ಹಾಡಲಿದ್ದಾರೆ.

"ಇದೇ ಮೊದಲ ಬಾರಿ ನಾನು ಹಾಡು ಬರೆಯುತ್ತಿರುವುದು. ನನ್ನ ತಲೆಗೆ ಹೊಳೆದದ್ದನ್ನೆಲ್ಲಾ ಬರೆದಿದ್ದೇನೆ. ನಿರ್ದೇಶಕ ಗೌಸ್ ಪೀರ್ ಅವರು ಸಂದರ್ಭವನ್ನು ವಿವರಿಸಿದರು. ಹಾಗು ಹಾಡಿನಲ್ಲಿ ಹಾಸ್ಯ ಲೇಪನ ಇದ್ದಿದ್ದರಿಂದ ನನಗೆ ಸುಲಭವಾಯಿತು. ಪ್ರೇಮ ಸಂದರ್ಭಕ್ಕೆ ಗೀತ ರಚನೆ ಮಾಡಬೇಕಿದ್ದಲ್ಲಿ ಬಹುಶಃ ನನಗೆ ಕಷ್ಟವಾಗುತ್ತಿತ್ತು" ಎನ್ನುತ್ತಾರೆ ಚಿಕ್ಕಣ್ಣ.

ಮಕ್ಕಳು ಕೂಡ ಸುಲಭವಾಗಿ ಹಾಡಿಕೊಳ್ಳಬಹುದಾದಂತೆ ಸರಳ ಭಾಷೆ ಬಳಸಿದ್ದೇನೆ ಎನ್ನುತ್ತಾರೆ ಚಿಕ್ಕಣ್ಣ. ಕೇವಲ ೨ ಘಂಟೆಗಳಲ್ಲಿ ಹಾಡು ಬರೆದು ಮುಗಿಸಿದ್ದೇನೆ ಎನ್ನುವ ಚಿಕ್ಕಣ್ಣ ಅಂತಿಮ ಸಾಹಿತ್ಯವನ್ನು ಎಲ್ಲರೂ ಮೆಚ್ಚಿದ್ದಾರಂತೆ.

ಆಡಿಯೋ ಜುಲೈನಲ್ಲಿ ಬಿಡುಗಡೆಯಾಗಲಿದ್ದು, ಸಿನೆಮಾ ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದೆಯಂತೆ.

ಬಹುತೇಕ ಕನ್ನಡ ಸಿನೆಮಾಗಳ ಗೀತ ಸಾಹಿತ್ಯದಿಂದ ರೋಸಿಹೋದಂತೆ ಕಂಡಿರುವ ಸಿನೆ ರಸಿಕರಿಗೆ ಈ ಹಾಡು ಇಷ್ಟವಾಗಲಿ ಎಂಬುದೇ ನಮ್ಮ ಹಾರೈಕೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ