ಮುಂಬೈ: ಏನಾದರೂ ಹೊಸದನ್ನು ಮಾಡಬೇಕೆನ್ನುವ ತುಡಿತದಲ್ಲಿ ನಾನು 'ಎನ್ ಎಚ್ ೧೦' ಸಿನೆಮಾವನ್ನು ಆರಿಸಿಕೊಂಡೆ ಎಂದಿದ್ದಾರೆ ನಟಿ ಅನುಷ್ಕಾ ಶರ್ಮಾ. ಸಿನೆಮಾ ತಮ್ಮನ್ನು ವಿಬಿನ್ನ ರೀತಿಯಲ್ಲಿ ತೋರಿಸಿರುವುದರಿಂದ ನಟಿ ಬಹಳ ಸಂತಸದಿಂದಿದ್ದಾರೆ.
"ನಟಿಯಾಗಿ, ನಾನು ಹೊಸ ಪ್ರಯತ್ನಗಳನ್ನು ಮಾಡಿದೆ, ಆದುದರಿಂದಲೇ ನಾನು ಕೆಲವೇ ಸಿನೆಮಾಗಳಲ್ಲಿ ನಟಿಸಿರುವುದು. ನಟಿಯಾಗಿ ನನ್ನನು ಉತ್ತೇಜಿಸುವ ಚಿತ್ರಗಳನ್ನಷ್ಟೇ ನಾನು ಆಯ್ಕೆ ಮಾಡಿಕೊಳ್ಳುವುದು. ಕಥೆ ಒಳ್ಳೆಯ ಕಿಕ್ ನೀಡಬೇಕು. ನಾನು ಈ ಸಿನೆಮಾದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದೇನೆ ಆದುದರಿಂದ ವಿಭಿನ್ನ ಎಂದೆನಿಸುತ್ತಿದೆ ಕೂಡ" ಎಂದಿದ್ದಾರೆ ಅನುಷ್ಕಾ.
"ಒಳ್ಳೆಯ ನಟನೆ ನಿಡುವ ಅವಕಾಶವಿದ್ದಲ್ಲಿ ನನಗೆ ಅದನ್ನು ಮಾಡುವುದಿಷ್ಟ" ಎಂದಿದ್ದಾರೆ 'ಲೇಡೀಸ್ ವರ್ಸಸ್ ರಿಕ್ಕಿ' ಮತ್ತು 'ಬ್ಯಾಂಡ್ ಬಜಾ ಬಾರಾತ್' ನಟಿ.
ನವದೀಪ್ ಸಿಂಗ್ ಸಿರ್ದೇಶನದ 'ಎನ್ ಎಚ್ ೧೦' ಥ್ರಿಲ್ಲರ್ ಸಿನೆಮಾ. ಏರೋಸ್ ಇಂಟರ್ನ್ಯಾಷನಲ್ ಮತ್ತು ಫ್ಯಾಂಟಮ್ ಪ್ರೊಡಕ್ಷನ್ಸ್ ಈ ಸಿನೆಮಾವನ್ನು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ನೀಲ್ ಭೂಪಾಲಂ ಸಹ ನಟಿಸಿರುವ ಈ ಸಿನೆಮಾ ಅನುಷ್ಕಾ ನಿರ್ಮಾಣದ ಚೊಚ್ಚಲ ಸಿನೆಮಾ.
ಈ ಸಿನೆಮಾ ನೈಜ್ಯ ಘಟನೆಗಳ ಆಧಾರಿತ ಎನ್ನುತ್ತಾರೆ ನಟಿ.
"ಇದು ಅತಿ ಅಸಾಧಾರಣ ಸಿನೆಮಾ ಮತ್ತು ಸಿನೆಮಾಗೆ ಹಿಂದಿರುಗುವುದಕ್ಕೆ ನನಗೆ ಹೆಮ್ಮೆಯಿದೆ" ಎನ್ನುತ್ತಾರೆ ಅನುಷ್ಕಾ.