ಅಕ್ಕಿನೇನಿ ನಾಗಾರ್ಜುನ 
ಸಿನಿಮಾ ಸುದ್ದಿ

ಮುಂದಿನ ಚಿತ್ರಕ್ಕಾಗಿ ೧೫೦೦ ವರ್ಷದ ಪ್ರಾಚೀನ ದೇವಾಲಯದಲ್ಲಿ ನಾಗಾರ್ಜುನ ಚಿತ್ರೀಕರಣ

ತಮ್ಮ ಮುಂದಿನ ತೆಲುಗು ಚಿತ್ರ 'ಸೊಗ್ಗದೆ ಚಿನ್ನಿ ನಯನ'ದ ಚಿತ್ರೀಕರಣಕ್ಕೆ ನಟ-ನಿರ್ಮಾಪಕ ಅಕ್ಕಿನೇನಿ ನಾಗಾರ್ಜುನ ಮೈಸೂರಿನ

ಮೈಸೂರು: ತಮ್ಮ ಮುಂದಿನ ತೆಲುಗು ಚಿತ್ರ 'ಸೊಗ್ಗದೆ ಚಿನ್ನಿ ನಯನ'ದ ಚಿತ್ರೀಕರಣಕ್ಕೆ ನಟ-ನಿರ್ಮಾಪಕ ಅಕ್ಕಿನೇನಿ ನಾಗಾರ್ಜುನ ಮೈಸೂರಿನ ೧೫೦೦ ವರ್ಷ ಹಳೆಯ ವಿಷ್ಣು ದೇವಾಲಯಕ್ಕೆ ಬಂದಿದ್ದಾರೆ.

"ಚಿತ್ರ ತಂಡ ಸದ್ಯಕ್ಕೆ ಮೈಸೂರಿನಲ್ಲಿದೆ. ೧೫೦೦ ವರ್ಷ ಇತಿಹಾಸ ಇರುವ ವಿಷ್ಣು ದೇವಾಲಯದಲ್ಲಿ ಕೆಲವು ಅತಿಮುಖ್ಯ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಯಿತು. ರಮ್ಯ ಕೃಷ್ಣ ಮತ್ತು ನಾಗಾರ್ಜುನ ಸೇರಿದಂತೆ ಪಾತ್ರ ವರ್ಗದ ಕೆಲವು ಪ್ರಮುಖ ನಟರು ಈ ದೃಶ್ಯದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು" ಎಂದು ಮೂಲಗಳು ಐ ಎ ಎನ್ ಎಸ್ ಗೆ ತಿಳಿಸಿವೆ.

ನಾಗಾರ್ಜುನ ಪಂಚೆಯುಟ್ಟು ಸಾಂಪ್ರದಾಯಿಕವಾಗಿ ಉಡುಗೆ ತೊಟ್ಟಿದ್ದಾರೆ, ರಮ್ಯ ಸುಂದರ ವಿನ್ಯಾಸದ ಸೀರೆ ಉಟ್ಟಿದ್ದರು. 'ಸೊಗ್ಗದೆ ಚಿನ್ನಿ ನಯನ' ಚಿತ್ರಕಾಗಿ ಒಂದು ದಶಕದ ನಂತರ ಇಬ್ಬರೂ ಒಟ್ಟಾಗಿ ನಟಿಸುತ್ತಿದ್ದಾರೆ. ಕಲ್ಯಾಣ ಕೃಷ್ಣ ತಮ್ಮ ಚೊಚ್ಚಲ ನಿರ್ದೇಶನದಲ್ಲಿ ಸಿನೆಮಾ ಮಾಡುತ್ತಿದ್ದಾರೆ.

ಈ ಚಿತ್ರದಲ್ಲಿ ನಾಗಾರ್ಜುನ, ಮೊಮ್ಮಗ ಮತ್ತು ತಾತನ ದ್ವಿಪಾತ್ರದಲ್ಲಿ ಅಭಿನಯಿಸಲಿದ್ದು, ಲಾವಣ್ಯ, ನಾಸ್ಸೇರ್, ಸಂಪತ್ ರಾಜ್ ಮತ್ತು ವೀಣಾ ಕಿಶೋರ್ ಇತರ ತಾರಾ ಬಳಗ.

ನಗರದಲ್ಲಿ ಇನ್ನೂ ಒಂದು ವಾರ ಚಿತ್ರೀಕರಣ ಮುಂದುವರಿಸಲಿದೆ ಚಿತ್ರ ತಂಡ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಮಧ್ಯಾಹ್ನ 2.30ಕ್ಕೆ ಸಿದ್ದರಾಮಯ್ಯ ರಾಜೀನಾಮೆ; 3 ಗಂಟೆಗೆ ಪತ್ರಿಕಾಗೋಷ್ಠಿ; ಮುಂದಿನ CM ಡಿ.ಕೆ ಶಿವಕುಮಾರ್

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಕಾಂಗ್ರೆಸ್‌ ಪವರ್ ಪಾಲಿಟಿಕ್ಸ್‌ಗೆ ಮತ್ತೊಂದು ಟ್ವಿಸ್ಟ್: ರಾಜ್ಯಪಾಲರ ಭೇಟಿಗೆ ಸಿದ್ದರಾಮಯ್ಯ ಸಮಯ ಕೇಳಿಲ್ಲ; ರಾಜೀನಾಮೆ ಊಹಾಪೋಹಕ್ಕೆ ಲೋಕಭವನ ಸ್ಪಷ್ಟನೆ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

SCROLL FOR NEXT