ಸಿನಿಮಾ ಸುದ್ದಿ

ಏಪ್ರಿಲ್‍ನಲ್ಲಿ `ಮಳೆ’

Lingaraj Badiger

ನೆನಪಿರಲಿ ಪ್ರೇಮ್ ಹಾಗೂ ಅಮೂಲ್ಯ ಅಭಿನಯದ `ಮಳೆ’ ಚಿತ್ರದ ಪ್ರಥಮಪ್ರತಿ ಸಿದ್ದವಾಗಿದ್ದು, ಸದ್ಯದಲ್ಲೆ ತೆರೆಗೆ ಬರಲಿದೆ.

ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆರ್,ಚಂದ್ರು ಅವರುನಿರ್ಮಿಸಿರುವ `ಮಳೆ'   ಚಿತ್ರ ಏಪ್ರಿಲ್‍ನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಖ್ಯಾತ ನಿರ್ದೇಶಕ ಆರ್.ಚಂದ್ರು ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರವನ್ನು ತೇಜಸ್ ನಿರ್ದೇಶಿಸಿದ್ದಾರೆ. ಚಂದ್ರು ಅವರ ಬಳಿ ಸಹಾಯಕರಾಗಿದ್ದ ಅನುಭವ ತೇಜಸ್ ಅವರಿಗಿದೆ.

ಸುಜ್ಞಾನ್ ಛಾಯಾಗ್ರಹಣ, ಜೆಸ್ಸಿಗಿಫ್ಟ್ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ, ಮುರಳಿ, ಹರ್ಷ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು, ರವಿವರ್ಮ ಸಾಹಸ ನಿರ್ದೇಶನ, ಹೊಸ್ಮನೆ ಮೂರ್ತಿ ಕಲಾನಿರ್ದೇಶನ ಹಾಗೂ ಸುಧೀಂದ್ರ ಹೊಸಳ್ಳಿ ಅವರ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಕೆ.ಮುನೀಂದ್ರಪುರ.

SCROLL FOR NEXT