ಖಟ್ಮಂಡು: ಭಾರತೀಯ ಎವರೆಸ್ಟ್ ಪರ್ವತಾರೋಹಿ ಅರ್ಜುನ್ ವಾಜಪೇಯಿ(೨೧) ಅವರನ್ನು ಮತ್ತು ಅವರೊಂದಿಗೆ ಪರ್ವತಾರೋಹಣ ಮಾಡುತ್ತಿದ್ದ ೧೨ ಜನರನ್ನು ಭಾನುವಾರ ಮೌಂಟ್ ಮಕಳುನಿಂದ ನೇಪಾಳ-ಭಾರತೀಯ ಸೇನಾ ಜಂಟಿ ಪಡೆ ರಕ್ಷಿಸಿದೆ.
ಏಪ್ರಿಲ್ ೨೫ ರಂದು ನೇಪಾಳದಲ್ಲಿ ಭೂಕಂಪನವಾದಾಗ್ಗಿನಿಂದ ಇವೆರೆಲ್ಲರೂ ಪರ್ವತದಲ್ಲಿ ಸಿಕ್ಕಿಹಾಕಿಕೊಂಡಿದ್ದರು.
ಇಂದು ಸೋಮವಾರ ಪತ್ರಿಗೋಷ್ಠಿ ನಡೆಸಿ ಮಾತನಾಡಿನ ವಾಜಪೇಯಿ ಮೌಂಟ್ ಮಕಳು ಹಿಲೆರಿ ಬೇಸ್ ಕ್ಯಾಂಪಿನಿಂದ ನಿರಂತರವಾಗಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ.
ಭೂಕಂಪನ ಈ ಪರ್ವತಗಳಲ್ಲಿ ಸೃಷ್ಟಿಸಿದ ಹಿಮಪಾತದಿಂದ ವಾಜಪೇಯಿ ಮತ್ತಿತರ ಪರ್ವತಾರೋಹಿಹಳು ಬೇಸ್ ಕ್ಯಾಂಪಿನಲ್ಲೆ ಸಿಲುಕಿದ್ದರು.
ತಮ್ಮ ಜೊತೆ ಸಾಕಷ್ಟು ಆಹಾರ ಸಾಮಗ್ರಿಗಳು ಉಳಿದಿದ್ದರಿಂದ ಬದುಕುಳಿದೆವು ಎಂದಿರುವ ಅವರು ರಕ್ಷಣೆಯ ಉಪಕಾರವನ್ನು ಸ್ಮರಿಸಿದ್ದಾರೆ.