ಓಂ ಚಿತ್ರದ ಗೇಮ್ 
ಸಿನಿಮಾ ಸುದ್ದಿ

ಮೊಬೈಲ್ ಗೆ ಗೇಮ್ ಆಗಿ ಲಗ್ಗೆ ಇಟ್ಟ "ಓಂ"

ಓಂ ಚಿತ್ರದ ವೀಡಿಯೋ ಗೇಮ್ ಅಂತರ್ಜಾಲಕ್ಕೆ ಲಗ್ಗೆ ಇಟ್ಟಿದ್ದು, ಸಿನಿಮಾದಷ್ಟೇ ವೀಡಿಯೋ ಗೇಮ್ ಕೂಡ ಜನಪ್ರಿಯತೆ ಗಳಿಸುತ್ತಿದೆ...

ಬೆಂಗಳೂರು: ಉಪೇಂದ್ರ ನಿರ್ದೇಶನದ ಓಂ ಚಿತ್ರ ನಟ ಶಿವರಾಜ್ ಕುಮಾರ್ ಅವರಿಗೆ ಚಿತ್ರರಂಗದಲ್ಲಿ ಹೊಸ ಆಯಾಮವನ್ನು ಕೊಟ್ಟ ಚಿತ್ರ. ಒಂದರ್ಥದಲ್ಲಿ ಶಿವರಾಜ್ ಕುಮಾರ್ ಅವರ ಇಮೇಜ್ ಬದಲಿಸಿದ್ದ ಚಿತ್ರವೆಂದರೆ ಓಂ ಎಂದು ಹೇಳಬಹುದು.

ಓಂ ಖ್ಯಾತಿ ಎಷ್ಟಿದೆ ಎಂದರೆ ಈ ಹಿಂದೆ ಹಲವು ಬಾರಿ ಬಿಡುಗಡೆಯಾಗಿದ್ದರೂ ಚಿತ್ರ ಮತ್ತೆ ಮತ್ತೆ ಬಿಡುಗಡೆಯಾಗುತ್ತಲೇ ಇದೆ. ಬಿಡುಗಡೆಯಾದಾಗಲೆಲ್ಲ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಲಭಿಸುತ್ತದೆ. ಹೀಗಾಗಿ ಚಿತ್ರ ತೆರೆಕಂಡು ದಶಕಗಳೇ ಕಳೆದರೂ ಚಿತ್ರ ಡಿವಿಡಿ ಇಲ್ಲಿಯವರೆಗೂ ಬಿಡುಗಡೆಯಾಗಿಲ್ಲ. ಇದೀಗ ಇದೇ ಓಂ ಚಿತ್ರದ ತ್ರೀಡಿ ಮೊಬೈಲ್ ಗೇಮ್ ವೊಂದು ಸಾಕಷ್ಟು ಪ್ರಚಾರ ಪಡೆಯುತ್ತಿದೆ.

ಓಂ ಚಿತ್ರದ ವೀಡಿಯೋ ಗೇಮ್ ಅಂತರ್ಜಾಲಕ್ಕೆ ಲಗ್ಗೆ ಇಟ್ಟಿದ್ದು, ಸಿನಿಮಾದಷ್ಟೇ ವೀಡಿಯೋ ಗೇಮ್ ಕೂಡ ಜನಪ್ರಿಯತೆ ಗಳಿಸುತ್ತಿದೆ. ಈ ವಿಡಿಯೋ ಗೇಮ್ ಅನ್ನು ವಿಜಯ್ ಪ್ರಕಾಶ್ ಎಂಬುವವರು ಸಿದ್ಧಪಡಿಸಿದ್ದು, ವಿಶೇಷವೆಂದರೆ ಇವರೂ ಕೂಡ ನಟ ಶಿವರಾಜ್ ಕುಮಾರ್ ಅವರ ಅಭಿಮಾನಿಯಂತೆ. ವಿಜಯಪ್ರಕಾಶ್ ನೇತೃತ್ವದ ಮೊಬಿ2ಫನ್. ಕಾಮ್ ವೆಬ್‌ಸೈಟ್ 3ಡಿ ಎಫೆಕ್ಟ್‌ನ ವೀಡಿಯೋ ಗೇಮ್ ಅನ್ನು ಸಿದ್ಧಪಡಿಸಿದೆ. ಈ ಸಾಹಸಮಯ ಗೇಮ್ ಬಿಡುಗಡೆಯಾದ ಒಂದೇ ವಾರದಲ್ಲಿ ಗೂಗಲ್‌ನ ಆಕ್ಷನ್ ಕೆಟಗರಿಯಲ್ಲಿ ಮೂರನೇ ಸ್ಥಾನ ಪಡೆದಿದೆ.

ಈ ವೀಡಿಯೋ ಗೇಮ್ ಅನ್ನು ವಿಜಯ್ ಪ್ರಕಾಶ್ ಅವರ ನೇತೃತ್ವದ ಏಳು ಮಂದಿ ಯುವಕರ ತಂಡ ಸತತ 8 ತಿಂಗಳ ಕಾಲ ಕೆಲಸ ಮಾಡಿ ಸಿದ್ಧಪಡಿಸಿದ್ದಾರೆ. ಓಂ ಚಿತ್ರದಲ್ಲಿ ಶಿವರಾಜ್ ಕುಮಾರ್ ನಿರ್ವಹಿಸಿದ ಸ್ಟಂಟ್ಸ್‌ನ್ನು ಯಥಾವತ್ ಆಗಿ ಇಲ್ಲಿ ಚಿತ್ರಿಸಲಾಗಿದೆ. ವೀಡಿಯೋ ಗೇಮ್‌ಗಳಲ್ಲಿ ಸಾಮಾನ್ಯವಾಗಿ ಹಾಲಿವುಡ್ ಮತ್ತು ಬಾಲಿವುಡ್ ಇಮೇಜ್‌ಗಳನ್ನು ಹೆಚ್ಚಾಗಿ ಬಳಸಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಕನ್ನಡಿಗರ ವೀಡಿಯೋ ಗೇಮ್ ಆನ್ ಲೈನ್ ಪ್ರವೇಶಿಸಿದಂತಾಗಿದೆ. ಈ ಹಿಂದೆ ಬಾಲಿವುಡ್ ನ ಕ್ರಿಶ್,ಧೂಮ್, ರಾವನ್ ಚಿತ್ರಗಳ ಗೇಮ್ ಗಳು ಬಿಡುಗಡೆಯಾಗಿ ಸಾಕಷ್ಟು ಪ್ರಚಾರ ಪಡೆದಿದ್ದವು. ಈಗ ಕನ್ನಡ ಚಿತ್ರದ ಸರದಿ.

ಈ ಮೊಬೈಲ್ ಗೇಮ್ ಅನ್ನು ಆಂಡ್ರಾಯ್ಡ್ ಬಳಕೆದಾರರು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್