ಸುದೀಪ್ ಮತ್ತು ಸನ್ನಿ ಲಿಯೋನ್ 
ಸಿನಿಮಾ ಸುದ್ದಿ

ಸುದೀಪ್, ಸನ್ನಿ ಲಿಯೋನ್ ಒಂದೇ ಚಿತ್ರದಲ್ಲಿ ನಟಿಸ್ತಿದ್ದಾರಂತೆ!

ಕಿಚ್ಚ ಸುದೀಪ್ ಹಾಗೂ ಹಾಟ್ ಬೆಡಗಿ ಸನ್ನಿ ಲಿಯೋನ್ ಇಬ್ಬರು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಮುಂದಿನ ಚಿತ್ರ ಲವ್ ಯು ಅಲಿಯಾದಲ್ಲಿ ನಟಿಸಲಿದ್ದಾರಂತೆ.

ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಹಾಗೂ ಹಾಟ್ ಬೆಡಗಿ ಸನ್ನಿ ಲಿಯೋನ್ ಇಬ್ಬರು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಮುಂದಿನ ಚಿತ್ರ ಲವ್ ಯು ಅಲಿಯಾದಲ್ಲಿ ನಟಿಸಲಿದ್ದಾರಂತೆ.
ಸುದೀಪ್ ಹಾಗೂ ಸನ್ನಿ ಲಿಯೋನ್ ಚಿತ್ರದಲ್ಲಿ ಎಲ್ಲಿಯೂ ಜೊತೆಯಾಗಿ ಕಾಣಿಸಿಕೊಳ್ಳುವುದಿಲ್ಲ ಬೇರೆ ಬೇರೆ ಸನ್ನಿವೇಶಗಳಲ್ಲಿ ನಟಿಸಲಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ಇದುವರೆಗೂ ಸ್ಯಾಂಡಲ್ ವುಡ್ ನ ಅನೇಕ ಚಿತ್ರಗಳ ಹಾಡುಗಳಿಗೆ ಸನ್ನಿ ಲಿಯೋನ್ ಹೆಜ್ಜೆ ಹಾಕಿದ್ದಾಳೆ. ಆದರೆ ಲವ್ ಯು ಅಲಿಯಾ ಚಿತ್ರದಲ್ಲಿ ಹಾಡಿನ ಜೊತೆಗೆ ಚಿಕ್ಕ ಪಾತ್ರದಲ್ಲಿಯೂ ನಟಿಸಲಿದ್ದಾಳಂತೆ.
ಕನ್ನಡದಲ್ಲಿ ನಟನೆಯನ್ನು ಸನ್ನಿ ಲಿಯೋನ್ ಸವಾಲಾಗಿ ಸ್ವೀಕರಿಸಿದ್ದಾಳಂತೆ.
ಬಾಲಿವುಡ್ ನ ಎಕ್ ಪೆಹೆಲಿ ಲೀಲಾ ಚಿತ್ರದಲ್ಲಿ ಆಕೆಯ ನಟನೆ ನೋಡಿ ಇಂದ್ರಜಿತ್ ಲಂಕೇಶ್ ಪ್ರಬಾವಿತರಾಗಿದ್ದಾರಂತೆ. ಜೂನ್ ನಲ್ಲಿ ಸನ್ನಿ ಲಿಯೋನ್ ಪಾತ್ರದ ಚಿತ್ರೀಕರಣ ನಡೆಯಲಿದೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೇಶದಲ್ಲಿ ಇಂಧನ ಕೊರತೆ ಇಲ್ಲ, ಆದ್ರೆ...: ಪ್ರಧಾನಿ ಮೋದಿ ಹೇಳಿಕೆಗೆ ಕಾರಣ ನೀಡಿದ IGoM

ದಶಕದ ಬಳಿಕ ಭುವನೇಶ್ವರ್ ಸಿಡಿಸಿದ ಸಿಕ್ಸ್​ ಮೌಲ್ಯ '99 ಲಕ್ಷ ರೂ.’; MI ಪಂದ್ಯ RCB ಗೆಲ್ಲೋದಿಲ್ಲ ಎಂಬ ಭವಿಷ್ಯ ಸುಳ್ಳಾಗಿಸಿದ ಭುವಿ, Video!

ತುಮಕೂರು: ದೇವರಾಯನದುರ್ಗ ಬೆಟ್ಟದಿಂದ ಜಿಗಿದು PWD ಸಹಾಯಕ ಇಂಜಿನಿಯರ್ ಆತ್ಮಹತ್ಯೆ; ಕಾರಣ ನಿಗೂಢ

Explainer: ಮಿತವ್ಯಯಕ್ಕೆ ಮೋದಿ ಕರೆ: ಕಷ್ಟದ ದಿನಗಳೋ? ಫಾರೆನ್ಸ್ ಉಳಿಕೆಯ ಮರ್ಮವೋ..? 72ಬಿಲಿಯನ್ $ ಹಿಂದಿನ ರಹಸ್ಯ

Video: ಆರಂಭದಲ್ಲೇ TVK ಸರ್ಕಾರಕ್ಕೆ ವಿಘ್ನ: ತಮಿಳುನಾಡಿನ ಏಕೈಕ ಮಹಿಳಾ ಸಚಿವೆ ಎಸ್. ಕೀರ್ತನಾ ಪ್ರಮಾಣವಚನಕ್ಕೆ ಬ್ರೇಕ್, Video!

SCROLL FOR NEXT