ಕಮಲ್ ಹಾಸನ್ (ಚಿತ್ರ ಕೃಪೆ :ಐಎಎನ್ಎಸ್ ) 
ಸಿನಿಮಾ ಸುದ್ದಿ

ಕಮಲ್ ಹಾಸನ್ ಮುಂದಿನ ಸಿನಿಮಾ 'ತೂಂಗಾವನಂ'

ನಟ-ನಿರ್ಮಾಪಕ ಕಮಲ್ ಹಾಸನ್ ತನ್ನ ಮುಂದಿನ ಚಿತ್ರದ ಹೆಸರನ್ನು ಶನಿವಾರ ಬಹಿರಂಗ...

ನವದೆಹಲಿ: ನಟ-ನಿರ್ಮಾಪಕ ಕಮಲ್ ಹಾಸನ್ ತನ್ನ ಮುಂದಿನ ಚಿತ್ರದ ಹೆಸರನ್ನು ಶನಿವಾರ ಬಹಿರಂಗಪಡಿಸಿದ್ದಾರೆ. ತಮಿಳು ಮತ್ತು ತೆಲುಗು ಭಾಷೆಯಲ್ಲಿ ತೆರೆ ಕಾಣಲಿರುವ ಈ ಚಿತ್ರದ ಹೆಸರು ತೂಂಗಾವನಂ. ಪ್ರಸ್ತುತ ಚಿತ್ರದ ನಿರ್ಮಾಣ ಮೇ 24ರಂದು ಹೈದ್ರಾಬಾದ್‌ನಲ್ಲಿ ಆರಂಭವಾಗಲಿದೆ.

ತೂಂಗಾವನಂ- ಅಂದರೆ ನಿದ್ದೆ ಮಾಡದೇ ಇರುವ ಕಾಡು. ಈ ಸಿನಿಮಾ ಏಕಕಾಲಕ್ಕೆ ತೆಲುಗು ಮತ್ತು ತಮಿಳಿನಲ್ಲಿ ನಿರ್ಮಾಣವಾಗಲಿದೆ. ರಾಜೇಶ್ ಎಂ. ಸೆಲ್ವಾ ಅವರು ಚಿತ್ರ ನಿರ್ದೇಶನ ಮಾಡಲಿದ್ದು, ನಿರ್ಮಾಣ ತಮ್ಮದೇ ಸಂಸ್ಥೆಯಾದ ರಾಜ್ ಕಮಲ್ ಫಿಲಂಸ್ ನದ್ದು ಎಂದು ಕಮಲ್ ಹೇಳಿದ್ದಾರೆ.

 ಹೈದ್ರಾಬಾದ್ ಮತ್ತು ಚೆನ್ನೈನಲ್ಲಿ ಮೂರು ತಿಂಗಳುಗಳ ಕಾಲ ಶೂಟಿಂಗ್ ನಡೆಯಲಿದೆ. ಅದೇ ವೇಳೆ ಈ ಸಿನಿಮಾದ ತಾರಾಗಣದ ಬಗ್ಗೆ ಕಮಲ್ ಹಾಸನ್ ಏನೂ ಹೇಳಿಲ್ಲ.

ಆದರೆ ತೂಂಗಾವನಂನಲ್ಲಿ ತ್ರಿಷಾ ಕೃಷ್ಣನ್ ಮತ್ತು ಪ್ರಕಾಶ್ ರಾಜ್ ಅವರು ನಟಿಸಲಿದ್ದಾರೆ ಎಂದು ಕೆಲವೊಂದು ಮೂಲಗಳು ಸುದ್ದಿ ಮಾಡಿವೆ. ಅದೇ ವೇಳೆ ಬಾಲಿವುಡ್ ನಟಿ ಮನೀಷಾ ಕೊಯಿರಾಲಾಗೆ ಕಮಲ್ ಹಾಸನ್‌ರ ಪತ್ನಿ ಪಾತ್ರದಲ್ಲಿ ನಟಿಸುವಂತೆ ಆಫರ್ ನೀಡಲಾಗಿದೆ ಎನ್ನುತ್ತಿವೆ ಸಿನಿಮಾ ಮೂಲಗಳು.



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚುನಾವಣಾ ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!