ನಟಿ ಪೂಜಾ ಕುಮಾರ್ 
ಸಿನಿಮಾ ಸುದ್ದಿ

ಹನ್ಸಿಕಾ, ಅನುಷ್ಕಾ ನಂತ್ರ ಇದೀಗ ಪೂಜಾ ರಹಸ್ಯ ವಿಡಿಯೋ

ನಟಿಯರಾದ ತ್ರಿಶಾ, ಅನುಷ್ಕಾ ಶೆಟ್ಟಿ, ರಾಧಿಕಾ ಆಪ್ಟೆ, ಶ್ರೀವಿದ್ಯಾ, ಲಕ್ಷ್ಮಿ ಮೆನನ್, ಪೂಜಾ ಉಮಾಶಂಕರ್, ಭೂಮಿಕಾ, ಹನ್ಸಿಕಾ, ಸೋನಾಕ್ಷಿ ಸಿನ್ಹಾ...

ಫೇಸ್‍ಬುಕ್, ಟ್ವಿಟ್ಟರ್, ವಾಟ್ಸ್‍ಅಪ್ ಮುಂತಾದ ಸಾಮಾಜಿಕ ಜಾಲ ತಾಣಗಳಿಗೆ ಚಿತ್ರ ನಟಿಯರ ಸೆಕ್ಸ್ ಸ್ಕ್ಯಾಂಡಲ್  ಹೆಸರಿನಲ್ಲಿ ಅಶ್ಲೀಲ ವಿಡಿಯೋಗಳ ಕಾಟ ಹೆಚ್ಚಾಗಿದೆ.

`ಇದು ಈ ನಟಿಯ ರಹಸ್ಯ ವಿಡಿಯೋ' ಎಂದು ಹರಿದಾಡುವ ವಿಡಿಯೋಗಳಿಗೆ ಕಮ್ಮಿ ಇಲ್ಲ. ನಟಿಯರಾದ ತ್ರಿಶಾ, ಅನುಷ್ಕಾ ಶೆಟ್ಟಿ, ರಾಧಿಕಾ ಆಪ್ಟೆ, ಶ್ರೀವಿದ್ಯಾ, ಲಕ್ಷ್ಮಿ ಮೆನನ್, ಪೂಜಾ ಉಮಾಶಂಕರ್, ಭೂಮಿಕಾ, ಹನ್ಸಿಕಾ, ಸೋನಾಕ್ಷಿ ಸಿನ್ಹಾ... ಹೀಗೆ ಪಟ್ಟಿ ಮಾಡುತ್ತ ಹೋದರೆ ಬಹುತೇಕ ಎಲ್ಲ ನಟಿಯರು ಈ ಸ್ಕ್ಯಾಂಡಲ್ ಪಟ್ಟಿಯಲ್ಲಿ ಸೇರಿಕೊಳ್ಳುತ್ತಾರೆ!

ಇಂಥ ಪಟ್ಟಿಗೆ ಈಗ ಹೊಸ ಸೇರ್ಪಡೆ ಪೂಜಾ ಕುಮಾರ್. ನಟ ಕಮಲ್ ಹಾಸನ್ ನಟಿಸಿ, ನಿರ್ದೇಶಿಸಿದ `ವಿಶ್ವರೂಪಂ' ಹಾಗೂ ರಮೇಶ್ ಅರವಿಂದ್ ನಿರ್ದೇಶನದ, ಕಮಲ್ ಅಭಿನಯದ `ಉತ್ತಮ್ ವಿಲನ್' ಚಿತ್ರಗಳನ್ನು ನೋಡಿದವರಿಗೆ ಈ ಪೂಜಾ ಕುಮಾರ್ ಮುಖ ಪರಿಚಯ ಇದ್ದೇ ಇರುತ್ತದೆ. ಈಗ ಈ ನಟಿಗೂ ಸೆಕ್ಸ್ ಸ್ಕ್ಯಾಂಡಲ್ ಬಣ್ಣ ಮೆತ್ತಿಕೊಂಡಿದೆ. `ಇದು ಪೂಜಾ ಕುಮಾರ್ ಇರುವ ವಿಡಿಯೋ ಎನ್ನುವಂತೆ ಒಂದು ಅಶ್ಲೀಲ ವಿಡಿಯೋ ಮೊಬೈಲ್‍ಗಳಿಂದ ಸೋಷಿಯಲ್ ಮೀಡಿಯಾಗೆ ಆಹಾರವಾಗಿದೆ.

ಎಂದಿನಂತೆ ಈ ವಿಡಿಯೋ ಸದ್ದು ಮಾಡುತ್ತಿರುವಂತೆ, `ಆ ವಿಡಿಯೋದಲ್ಲಿರುವುದು ನಾನಲ್ಲ. ನನ್ನಂತೆ ಇರುವ ಬೇರೊಬ್ಬ ಹುಡುಗಿ' ಎನ್ನುತ್ತಿದ್ದಾರೆ. ಆದರೆ, ರಾಧಿಕಾ ಆಪ್ಟೆ ಮೇಲೆ ಇಂಥ ಅರೋಪ ಬಂದಾಗ, `ನಾನೇ ಆ ವಿಡಿಯೋದಲ್ಲಿದ್ದರೆ ಐ ಡೋಂಟ್ ಕೇರ್. ನೋಡಿದರೆ ನೋಡಿಕೊಳ್ಳಲಿ ಬಿಡಿ' ಎಂದು ಗರಂ ಆಗಿಯೇ ಪ್ರತಿಕ್ರಿಯೆ ಕೊಟ್ಟರು. ಆದರೆ, ಎಲ್ಲ ನಟಿಯರು ಇಂಥ ಬೋಲ್ಡ್ ಹೇಳಿಕೆ ನೀಡಬೇಕಲ್ಲ? ಇದರ ನಡುವೆ ಕೆಲವರು ತಮ್ಮ ಪ್ರಚಾರಕ್ಕಾಗಿ ಇಂಥ ವಿಡಿಯೋ ಗಾಸಿಪ್‍ಗಳನ್ನು ಹಬ್ಬಿಸುತ್ತಾರೆ ಎನ್ನುತ್ತವೆ ಸಿನಿಮಾ ಮೂಲಗಳು.

ಫಾರಿನ್ ನಟಿ ಪೂಜಾ ಕುಮಾರ್ ಹೆಸರಿನಲ್ಲಿ ಪಡ್ಡೆಗಳ ನಿದ್ದೆಗೆಡಿಸಿರುವ ಈ ವಿಡಿಯೋ ಕೂಡ ಅಂಥ ಪ್ರಚಾರದ ಸಾಮಗ್ರಿಯೇ? ಗೊತ್ತಿಲ್ಲ. ಆದರೆ, ಪ್ರಚಾರಕ್ಕಾಗಿ ಚಿತ್ರ ನಟಿಯರು ತಮ್ಮ ದೇಹ ಸಿರಿಯನ್ನು ಹೀಗೆ ಸಾರ್ವಜನಿಕವಾಗಿ ಹರಾಜು ಹಾಕುತ್ತಾರೆಯೇ? ಎನ್ನುವ ಬಗ್ಗೆಯೂ ಯೋಚಿಸಿಬೇಕಿದೆ. ಒಟ್ಟಿನಲ್ಲಿ ಅಮೆರಿಕದಲ್ಲಿ ನೆಲೆಸಿರುವ ಕಮಲ್ ಸಿನಿಮಾಗಳ ಮೂಲಕ ಸಿನಿಮಾ ಪ್ರಿಯರಿಗೆ ಪರಿಚಯವಾಗುತ್ತಿರುವ ಪೂಜಾ ಕುಮಾರ್ ಸುತ್ತ ಈಗ ವಿಡಿಯೋ ಗಾಸಿಪ್ ಸುತ್ತಿಕೊಂಡಿರುವುದಂತೂ ನಿಜ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

2013ರ ಲೈಂಗಿಕ ದೌರ್ಜನ್ಯ ಪ್ರಕರಣ: Tehelka ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ ಸುಪ್ರೀಂ ಕೋರ್ಟ್‌ ಶಾಕ್‌; 2 ವಾರಗಳಲ್ಲಿ ಶರಣಾಗುವಂತೆ ಖಡಕ್ ಸೂಚನೆ..!

ವಿಮಾನ ಸುರಕ್ಷತೆಯಲ್ಲಿ ರಾಜಿಯಿಲ್ಲ: ಪೈಲಟ್‌ಗಳ ಡ್ರಗ್‌ ಟೆಸ್ಟ್‌ ನಿಯಮದಲ್ಲಿ ಮಹತ್ವದ ಬದಲಾವಣೆ, ವರ್ಷವಿಡೀ ಯಾದೃಚ್ಛಿಕ ತಪಾಸಣೆಗೆ ಕೇಂದ್ರ ಸರ್ಕಾರ ಮುಂದು..!

ಮೊಜ್ತಾಬಾ ಖಮೇನಿ ಜೀವಂತವಾಗಿ ಇದ್ದಾರೋ ಅಥವಾ ಇಲ್ಲವೋ? ಆತಂಕದ ಹಳೆಯ Video ಬಿಡುಗಡೆ ಮಾಡಿದ ಇರಾನ್!